ಸಚಿನ್ ತೆಂಡೂಲ್ಕರ್, ವೈಭವ್ ಸೂರ್ಯವಂಶಿ, ಕಪಿಲ್ ದೇವ್
- ಸಚಿನ್, ಕೊಹ್ಲಿಯಷ್ಟೇ ಪ್ರತಿಭಾವಂತ ವೈಭವ್ ಸೂರ್ಯವಂಶಿ
- ಯುವ ಬ್ಯಾಟಿಂಗ್ ಸೆನ್ಸೇಷನ್ ವಂಡರ್ ಕಿಡ್ ಹೊಗಳಿದ ಮಾಜಿ ಕ್ಯಾಪ್ಟನ್
Vaibhav Sooryavanshi: ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ಅಬ್ಬರದ ಪ್ರದರ್ಶನ ನೋಡಲು ಕ್ರಿಕೆಟ್ ಪ್ರೇಮಿಗಳ ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಅವರಿಗೆ ಅವಕಾಶ ಸಿಗದಿರುವುದು ಸದ್ಯ ಭಾರಿ ಬೇಸರ ಉಂಟುಮಾಡಿದೆ. ಮತ್ತೊಂದೆಡೆ, ಕ್ರಿಕೆಟ್ ದಂತಕಥೆ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್, ಇಡೀ ಜಗತ್ತೇ ಕೊಂಡಾಡುತ್ತಿರುವ ವಂಡರ್ ಕಿಡ್ ಕುರಿತು ಕೆಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
'ಸ್ಪೋರ್ಟ್ಸ್ ತಕ್' ಜೊತೆ ಮಾತನಾಡಿದ ಕಪಿಲ್ ದೇವ್, ಯುವ ಬ್ಯಾಟರ್ನ ಒಂದಷ್ಟು ತುಣುಕುಗಳನ್ನು ಮಾತ್ರ ನಾನು ನೋಡಿರುವೆ ಅಷ್ಟೇ. ಆದರೆ, ಆತನ ಪ್ರತಿಭೆ, ಸಾಮರ್ಥ್ಯ ಎಂತದ್ದು ಎಂಬುದರ ಬಗ್ಗೆ ನನಗೆ ಕಿಂಚಿತ್ತು ಅನುಮಾನವಿಲ್ಲ. ನನ್ನ ಪ್ರಕಾರ, ವೈಭವ್ ಒಬ್ಬ ದೈತ್ಯ ಪ್ರತಿಭೆ. ಜನರು ಕೂಡ ಆತನ ಬಗ್ಗೆ ತುಂಬಾ ಭರವಸೆ, ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗ ವೈಭವ್ಗೆ ಸ್ವಲ್ಪ ಸಮಯ ಕೊಡಿ. ಅವನಿಗೆ ವಿಪರೀತ ಪ್ರೋತ್ಸಾಹ ನೀಡಬೇಡಿ ಎಂದರು.
ಈ ಪುಟ್ಟ ವಯಸ್ಸಿನಲ್ಲಿ, ವೈಭವ್ ಬಹುಶಃ ತನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಇನ್ನು, ಪ್ರತಿಭೆಯ ಬಗ್ಗೆ ಮಾತನಾಡುವುದಾದರೆ, ಹೌದು, ಆತ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಷ್ಟೇ ಪ್ರತಿಭಾವಂತ. ಆದರೆ, ಟಿ20 ಕ್ರಿಕೆಟ್‌ನಲ್ಲಿ ಹಾಗೂ ಉಳಿದ ಫಾರ್ಮೆಟ್ಗಳಲ್ಲಿ, ವೈಭವ್ ಇನ್ನೂ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಿದೆ ಎಂದರು,(ಏಜೆನ್ಸೀಸ್).
ಸಚಿನ್ ದಾಖಲೆ ಬ್ರೇಕ್?
ಟೀಮ್ ಇಂಡಿಯಾ ದಿಗ್ಗಜ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾರತಕ್ಕಾಗಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 1989ರಲ್ಲಿ ಪಾಕಿಸ್ತಾನ ವಿರುದ್ಧ 16 ವರ್ಷ ಮತ್ತು 205 ದಿನಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ನಂತರ ನಿರ್ಮಿಸಿದ್ದು ದಾಖಲೆಗಳ ಸುರಿಮಳೆ. ಈಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ ಟಿ20 ಕ್ಯಾಪ್ ಧರಿಸಿದರೆ, ಕೇವಲ 15ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಹೊಸ ಐತಿಹಾಸಿಕ ದಾಖಲೆಯನ್ನು ವೈಭವ್ ಸೃಷ್ಟಿಸಲಿದ್ದಾರೆ.