ಉಸ್ಮಾನ್ ತಾರಿಕ್​ ಬೌಲಿಂಗ್ ವಿರುದ್ಧ ಗಂಭೀರ ಆರೋಪ 
ಕ್ರಿಕೆಟ್

ಇವನಿಂದ ಪಾಕಿಸ್ತಾನಕ್ಕೆ ಅವಮಾನ! ತಮ್ಮದೇ ಆಟಗಾರನಿಗೆ ವಾಸಿಮ್ ಅಕ್ರಂ ಛೀಮಾರಿ | Usman Tariq

ಪ್ರಮುಖ ಮುಖ್ಯಾಂಶಗಳು

  • ಯುಎಸ್​ಎ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ತಂಡ
  • ತಂಡದ ಪರ 3 ವಿಕೆಟ್​ ಕಬಳಿಸಿದ ಸ್ಪಿನ್ನರ್​ ಉಸ್ಮಾನ್ ತಾರಿಕ್​
  • ಈತನ ಬೌಲಿಂಗ್​ನಲ್ಲಿ ಮೋಸವಿದೆ ಎಂಬ ಗಂಭೀರ ಆರೋಪಗಳು
ನವದೆಹಲಿ: ಮೊದಲೇ ವಿವಾದ, ಹೈಡ್ರಾಮಾಗಳಿಂದ ಕ್ರಿಕೆಟ್​ ಪ್ರಿಯರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿರುವ ಪಾಕಿಸ್ತಾನ ತಂಡ, ಇದೀಗ ತಮ್ಮ ತಂಡದ ಸ್ಪಿನ್ನರ್​ ಉಸ್ಮಾನ್ ತಾರಿಕ್​ ಮಾಡುತ್ತಿರುವ ಬೌಲಿಂಗ್ ಶೈಲಿಯಿಂದ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಕುರಿತು ಪಾಕ್​ ದಿಗ್ಗಜ, ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂ ಕಿಡಿಕಾರಿದ್ದಾರೆ. ಮತ್ತೊಂದೆಡೆ ಅಚ್ಚರಿ ಎಂಬಂತೆ ಆರ್​. ಅಶ್ವಿನ್​ ಉಸ್ಮಾನ್​ ಪರ ವಹಿಸಿ, ಮಾತನಾಡಿದ್ದಾರೆ.
ನಿನ್ನೆ (ಫೆ.10) ಕೊಲೊಂಬೊದಲ್ಲಿ ನಡೆದ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ ಪಾಕಿಸ್ತಾನ ತಂಡಕ್ಕೆ ಉಸ್ಮಾನ್​ ತಾರಿಕ್​ ಅವರ ಬೌಲಿಂಗ್ ದಾಳಿ ಉತ್ತಮ ಕೊಡುಗೆಯನ್ನೇ ನೀಡಿತು. ಮಾಡಿದ 3 ಓವರ್​ಗಳಲ್ಲಿ 3 ವಿಕೆಟ್​ ಪಡೆದ ತಾರಿಕ್​, ಮತ್ತೊಮ್ಮೆ ತಮ್ಮ ಪಾಜ್​​ ಅಂಡ್​ ಡೆಲಿವರಿ ಬೌಲಿಂಗ್​ ಶೈಲಿಗೆ ವ್ಯಾಪಕ ಟೀಕೆ ಮತ್ತು ಆರೋಪಗಳಿಗೆ ಗುರಿಯಾಗಿದ್ದಾರೆ. ಅದರಲ್ಲೂ, ಯುಎಸ್​ಎ ಅಭಿಮಾನಿಗಳು ಉಸ್ಮಾನ್​ ಬೌಲಿಂಗ್​ನಲ್ಲಿ ಮೋಸವಿದೆ ಎಂದು ಗಂಭೀರವಾಗಿ ಆರೋಪ ಹೊರಿಸಿದ್ದಾರೆ.

ಗೋಸ್ವಾಮಿ ವಿರುದ್ಧ ಆರ್​. ಆಶ್ವಿನ್​

ಈ ವಿಷಯ ದೊಡ್ಡ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಹಲವರು ಹೀಗ್ಯಾಕೆ ಬೌಲಿಂಗ್ ಮಾಡ್ತಾರೆ? ಇದು ಸರಿಯಿಲ್ಲ ಎಂದೆಲ್ಲ ಆರೋಪಿಸಿದ್ದಾರೆ. ಈ ಮಧ್ಯೆ, ಮಾಜಿ ಕ್ರಿಕೆಟಿಗ ಶ್ರೀವತ್ಸ್​ ಗೋಸ್ವಾಮಿ ಅವರು ಉಸ್ಮಾನ್​, ಅದ್ಹೇಗೆ ಒಂದು ಪಾಜ್​ ಮತ್ತು ಡೆಲಿವರಿ ಮಾಡಲು ಅವಕಾಶ ಕೊಡಲಾಗಿದೆ. ಇದು ಮುಂದುವರಿದರೆ ಒಳ್ಳೆಯದಲ್ಲ. ಫುಟ್​ಬಾಲ್​ನಲ್ಲೇ ಪೆನಾಲ್ಟಿ ಶಾಟ್​ನಲ್ಲಿ ಈ ರೀತಿ ಪಾಜ್​ಗೆ ಅವಕಾಶವಿಲ್ಲ. ಹೀಗಿರುವಾಗ ಕ್ರಿಕೆಟ್​ನಲ್ಲಿ ಏಕೆ ಹೀಗೆ? ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್​, ತಾರಿಕ್​ ಪರ ಬ್ಯಾಟ್​ ಬೀಸಿರುವುದು ಆಶ್ಚರ್ಯಕರ.
ಶ್ರೀವತ್ಸ್​ ಆರೋಪಕ್ಕೆ ಕಿರಿಕಾರಿರುವ ಅಶ್ವಿನ್​, ಮೊದಲು ಸ್ವಿಚ್ ಹಿಟ್​ ನಿಯಮವನ್ನು ನಿಲ್ಲಿಸಬೇಕು. ಫುಟ್ಬಾಲ್ ಅದನ್ನು ಅನುಮತಿಸುವುದಿಲ್ಲ ಎಂಬ ವಿಷಯವನ್ನು ನಾನೂ ಒಪ್ಪುತ್ತೇನೆ. ಬ್ಯಾಟರ್ ಅಂಪೈರ್ ಅಥವಾ ಬೌಲರ್‌ಗೆ ತಿಳಿಸದೆ ದಿಢೀರ್​ ತಿರುಗಿ ಅಥವಾ ರಿವರ್ಸ್ ಸ್ವೀಪ್​ ಮಾಡುವ ಅವಕಾಶವಿದೆ. ಆದರೆ, ಈ ನಿರ್ಬಂಧಗಳು ಬೌಲರ್‌ಗೆ ಮಾತ್ರ ಏಕೆ ಸೀಮಿತವಾಗಿವೆ?" ಎಂದು ಅಶ್ವಿನ್ ರೀ-ಟ್ವೀಟ್ ಮಾಡಿದ್ದಾರೆ.

ಆನ್​ ಏರ್​ನಲ್ಲಿ ಅಕ್ರಂ ಛೀಮಾರಿ?

ಉಸ್ಮಾನ್ ತಾರಿಕ್ ಅವರಂತಹ ವ್ಯಕ್ತಿಯನ್ನು ತಂಡದಲ್ಲಿ ಸೇರ್ಪಡೆ ಮಾಡಿಕೊಂಡಿರುವುದರಿಂದ ಪಾಕಿಸ್ತಾನದ ವರ್ಚಸ್ಸಿನ ಬಗ್ಗೆ ನನಗೆ ಚಿಂತೆಯಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರ ಕ್ರಮ ಅನುಮಾನಾಸ್ಪದ ಮತ್ತು ಇದು ಮೋಸದ ಆರೋಪಗಳಿಗೆ ಹೆಚ್ಚು ಗುರಿಯಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ, ಇನ್ನೂ ಏಕೆ ಪಾಕ್​ ಮ್ಯಾನೇಜ್​ಮೆಂಟ್​ ಈತನನ್ನು ಆಡಿಸುತ್ತಿದೆ? ಎಂದು ಹೇಳಿದ್ದಾಗಿ ಟ್ವೀಟ್​ವೊಂದು ಉಲ್ಲೇಖಿಸಿದೆ,(ಏಜೆನ್ಸೀಸ್).