Use of red-pink ball in a single Test!: Revision of key rules of Test and ODI cricket?
ಮುಂಬೈ: ಅಹಮದಾಬಾದ್‌ನಲ್ಲಿ ಮೇ30ಕ್ಕೆ ನಡೆಯಲಿರುವ ಐಸಿಸಿ ಮಂಡಳಿಯ ಸಭೆಯಲ್ಲಿ ಟೆಸ್ಟ್ ಹಾಗೂ ಏಕದಿನ ( odi cricket) ಕ್ರಿಕೆಟ್‌ನಲ್ಲಿ ಕೆಲ ಪ್ರಮುಖ ನಿಯಮಗಳು ಪರಿಷ್ಕರಣೆಗೊಳ್ಳಲಿದ್ದು, ಹವಾಮಾನ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗೂ ಗುಲಾಬಿ ಬಣ್ಣದ ಎರಡು ಚೆಂಡುಗಳ ಬಳಕೆಯ ನಿಯಮ ಜಾರಿಗೆ ತರಲು ಐಸಿಸಿ ಮುಂದಾಗಿದೆ ಎಂದು ವರದಿಯಾಗಿದೆ.
ಸಾಂಪ್ರದಾಯಿಕ ಟೆಸ್ಟ್ ಪಂದ್ಯದಲ್ಲಿ ಬಳಸಲಾಗುವ ಕೆಂಪು ಚೆಂಡನ್ನು ಗುಲಾಬಿ ಚೆಂಡಿಗೆ ಬದಲಾಯಿಸುವ ನಿಯಮ ತಿದ್ದುಪಡಿಯೂ ಮಹತ್ವದಾಗಿದ್ದು, ಹವಾಮಾನ ವೈಪರೀತ್ಯ ಅಥವಾ ಮಂದಬೆಳಕಿನ ಸಮಯಯಲ್ಲಿ ಎರಡೂ ತಂಡಗಳು ಒಪ್ಪಿದರೆ ಗುಲಾಬಿ ಚೆಂಡನ್ನು ಬಳಸಲು ಅನುಮತಿ ನೀಡುವ ಪ್ರಸ್ತಾವನೆ ಇದೆ. ಚೆಂಡುಗಳ ಬಳಕೆ ನಿಯಮ ತಿದ್ದುಪಡಿ ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ ಪಾನೀಯ ವಿರಾಮ (ಡ್ರಿಂಕ್ಸ್ ಬ್ರೇಕ್) ಸಮಯದಲ್ಲಿ ತಂಡದ ಮುಖ್ಯಕೋಚ್ ಮೈದಾನಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ.
ಮುಖ್ಯಕೋಚ್ ಮೈದಾನಕ್ಕೆ ಪ್ರವೇಶಿಸಲು ಅವಕಾಶ ಪಡೆದರೆ, ತಂಡದ ಜೆರ್ಸಿ ಧರಿಸಬೇಕೆ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ಬದಲಿ ಆಟಗಾರರು ಮಾತ್ರ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಲು ಅನುಮತಿ ಇದೆ. ಏಕದಿನ ಕ್ರಿಕೆಟ್‌ನಲ್ಲಿ, ಪ್ರತಿ ಇನ್ನಿಂಗ್ಸ್‌ನ ಒಂದು ಗಂಟೆ 10 ನಿಮಿಷಗಳ ಅಂತರದಲ್ಲಿ ಎರಡು ಪಾನೀಯ ವಿರಾಮ ನೀಡಲಾಗುತ್ತಿದೆ. ಟಿ20 ಪಂದ್ಯದ ವೇಳೆ ಮುಖ್ಯಕೋಚ್ ವಿರಾಮದ ಸಮಯದಲ್ಲಿ ಮೈದಾನಕ್ಕೆ ತೆರಳಿ ಆಟಗಾರರೊಂದಿಗೆ ಸಮಾಲೋಚನೆ ನೀಡಲು ಪ್ರಸ್ತುತ ಅವಕಾಶವಿದೆ.
ಟಿ20 ಪಂದ್ಯದ ಇನ್ನಿಂಗ್ಸ್ ವಿರಾಮದ ಸಮಯವನ್ನು 20 ರಿಂದ 15 ನಿಮಿಷಗಳಿಗೆ ಇಳಿಸುವ ಸಾಧ್ಯತೆಗಳಿವೆ. ಪಂದ್ಯದ ವೇಳೆ ಬೌಲರ್‌ಗಳು ಅನುಚಿತ ವರ್ತನೆ ತೋರುವ ಬಗ್ಗೆ ಪರಿಶೀಲಿಸಲು ಮೈದಾನದಲ್ಲಿರುವ ಅಂಪೈರ್‌ಗಳಿಗೆ ಹಾಕ್‌ಐ ಡೇಟಾ ಬಳಕೆಗೆ ಅವಕಾಶ ನೀಡುವ ಪ್ರಸ್ತಾವನೆಯೂ ಐಸಿಸಿ ಮುಂದಿದ್ದು, ಸಭೆಯಲ್ಲಿ ಒಪ್ಪಿಗೆ ದೊರೆತರೆ ಅಕ್ಟೋಬರ್ 1 ರಿಂದ ನಿಯಮಗಳು ಜಾರಿಗೆ ಬರುವ ನಿರೀಕ್ಷೆ ಇದೆ.