US Open 2026 Final: ಜ್ವೆರೆವ್-ಶೆಲ್ಟನ್ ಪ್ರಶಸ್ತಿ ಕಾದಾಟ  
ಕ್ರಿಕೆಟ್

US Open 2026 Final: ಜ್ವೆರೆವ್-ಶೆಲ್ಟನ್ ಪ್ರಶಸ್ತಿ ಕಾದಾಟ

ನ್ಯೂಯಾರ್ಕ್: ಅಮೆರಿಕನ್ನರ ಸುದೀರ್ಘ 23 ವರ್ಷಗಳ ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಲ್ಲಿರುವ ಬೆನ್ ಶೆಲ್ಟನ್ ಹಾಗೂ ಎರಡನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ತವಕದಲ್ಲಿರುವ ಅಗ್ರಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಯುಎಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ. ಜರ್ಮನಿಯ 29 ವರ್ಷದ ಜ್ವೆರೆವ್ ಹಾಲಿ ವರ್ಷ ಸತತ ಮೂರನೇ ಹಾಗೂ 8ನೇ ಶ್ರೇಯಾಂಕಿತ ಬೆನ್ ಶೆಲ್ಟನ್ ಮೊದಲ ಬಾರಿ ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ಆಡಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಭಾನುವಾರ ರಾತ್ರಿ 11.30ಕ್ಕೆ ಪಂದ್ಯ ಆರಂಭವಾಗಲಿದೆ.
2020ರ ರನ್ನರ್ ಅಪ್ ಅಲೆಕ್ಸಾಂಡರ್ ಜ್ವೆರೆವ್ ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 6-3,7-6, 7-6 ನೇರ ಸೆಟ್‌ಗಳಿಂದ ರಷ್ಯಾದ ಖರೆನ್ ಖಚನೋವ್ ಎದುರು ಗೆಲುವು ಸಾಧಿಸಿದರು. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಐದು ಸೆಟ್‌ಗಳ ಹೋರಾಟದಲ್ಲಿ ಪ್ರಯಾಸಕರ ಜಯ ಸಾಧಿಸಿದ್ದ ಜ್ವೆರೆವ್, ಸೆಮೀಸ್‌ನಲ್ಲಿ ಸುಲಭವಾಗಿ ಮುನ್ನಡೆ ಕಂಡರು. ‘ಅಮೆರಿಕನ್ನರ ಕನಸು ನನಸಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ’ಎಂದಿರುವ ಜ್ವೆರೆವ್, ನ್ಯೂಯಾರ್ಕ್‌ನಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಬೆನ್ ಶೆಲ್ಟನ್ ವಿರುದ್ಧದ ಹಿಂದಿನ ಐದು ಮುಖಾಮುಖಿಗಳಲ್ಲಿ ಮೇಲುಗೈ ಸಾಧಿಸಿರುವ ಜ್ವೆರೆವ್ ಹಾಲಿ ವರ್ಷ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. 2020ರ ಯುಎಸ್ ಓಪನ್ ಫೈನಲ್‌ನಲ್ಲಿ ಡೊಮಿನಿಕ್ ಥಿಮ್ ಎದುರು ಜ್ವೆರೆವ್ ಪರಾಭವಗೊಂಡಿದ್ದರು.
ಆತಿಥೇಯರ ನೆಚ್ಚಿನ ತಾರೆ ಬೆನ್ ಶೆಲ್ಟನ್ 4-6, 6-3, 6-3, 7-5 ಸೆಟ್‌ಗಳ ಕಾದಾಟದಲ್ಲಿ ದೇಶಬಾಂಧವ ಫ್ರಾನ್ಸಿನ್ ಟಿಯಾಫೋಯಿ ಎದುರು ಗೆದ್ದು, ವೃತ್ತಿಜೀವನದ ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್‌ಗೇರಿದರು. ಅರ್ಥರ್ ಆಶ್ ಸ್ಟೇಡಿಯಂನಲ್ಲಿ ಕ್ರೀಡಾ ಮತ್ತು ಸಿನಿಮಾ ರಂಗದ ತಾರೆಗಳ ಎದುರು ನಡೆದ ಕಾದಾಟದಲ್ಲಿ ಶೆಲ್ಟನ್ ಎಸಗಿದ ಡಬಲ್ ಫಾಲ್ಟ್‌ನಿಂದ ಟಿಯಾೆಯಿ ಮೊದಲ ಸೆಟ್ ಒಲಿಸಿಕೊಂಡರು. ನಂತರ ಆಕ್ರಮಣಕಾರಿ ಸರ್ವ್‌ಗಳ ಮೂಲಕ ತಿರುಗೇಟು ನೀಡಿದ ಟಿಯೊೆಯಿ ಎದುರು ಮೇಲುಗೈ ಸಾಧಿಸಿದರು. 2003ರಲ್ಲಿ ಆಂಡಿ ರೊಡಿಕ್ ಚಾಂಪಿಯನ್ ಆದ ನಂತರ ಅಮೆರಿಕ ಯಾವೊಬ್ಬ ಆಟಗಾರ ಪುರುಷರ ಸಿಂಗಲ್ಸ್‌ನಲ್ಲಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿಲ್ಲ. ಇದೀಗ 23 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಳಿಸುವ ಅವಕಾಶ ಶೆಲ್ಟನ್ ಅವರ ಮುಂದಿದೆ.