ಇಂಗ್ಲೆಂಡ್​ನಲ್ಲಿ ಧೋನಿ ಕಿವಿಗೆ ಧರಿಸಿದ್ದ ವಸ್ತುವಿದು 
ಕ್ರಿಕೆಟ್

ಇಂಗ್ಲೆಂಡ್​ನಲ್ಲಿ ಧೋನಿ ಕಿವಿಯಲ್ಲಿದ್ದ ವಿಶಿಷ್ಟ ಗ್ಯಾಜೆಟ್ ಬಗ್ಗೆ ಫ್ಯಾನ್ಸ್ ಕುತೂಹಲ! ಅಷ್ಟಕ್ಕೂ ಏನಿದು ಸಣ್ಣ ಟ್ಯಾಗ್​ನಲ್ಲಿ ಕಾಣುವ ವಸ್ತು? MS Dhoni

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ
  • ಎಂ.ಎಸ್​ ಧೋನಿ ಕಿವಿಯಲ್ಲಿ ವಿಶಿಷ್ಟ ಗ್ಯಾಜೆಟ್​ ಪತ್ತೆ
  • ಈ ಸಾಧನ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ
MS Dhoni: ನಿನ್ನೆ (ಜು.14) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿತು. ಇದೇ ಮ್ಯಾಚ್​ನಲ್ಲಿ ಅಭಿಮಾನಿಗಳ ಸಂಪೂರ್ಣ ಗಮನವನ್ನು ತನ್ನತ್ತ ಸೆಳೆದ ಮಹೇಂದ್ರ ಸಿಂಗ್ ಧೋನಿ, ತಮ್ಮ ಪಕ್ಕ ಕುಳಿತಿದ್ದ ಪುಟ್ಟ ಅಭಿಮಾನಿ ಬಳಿ ಪಾಪ್​ಕಾರ್ನ್​ ಪಡೆದ ದೃಶ್ಯ ಫ್ಯಾನ್ಸ್​ ಹೃದಯ ಗೆದ್ದಿತು. ಮತ್ತೊಂದೆಡೆ, ಧೋನಿ ಕಿವಿಗೆ ಹಾಕಿಕೊಂಡಿದ್ದ ವಿಶೇಷ ವಸ್ತುವೊಂದು ಅನೇಕರ ಕುತೂಹಲ ಕೆರಳಿಸಿದೆ. 
ಮೈದಾನದ ವಿಐಪಿ ಸ್ಟ್ಯಾಂಡ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ ಧೋನಿ ಕಿವಿಯಲ್ಲಿ ಪುಟ್ಟ ಬಣ್ಣದ ಟ್ಯಾಗ್ ಧರಿಸಿರುವುದು ಕಂಡುಬಂದಿದೆ. ಇದು ಯಾವ ರೀತಿಯ ಸಾಧನ? ಇದೇನು ಒಂದು ಇಯರ್​ಫೋನ್​ ಅಥವಾ ವಿಐಪಿ ಸೀಟ್​ನಲ್ಲಿ ಕೂರುವ ವ್ಯಕ್ತಿಗಳಿಗೆ ನೀಡಲಾಗುವ ಸಾಧನವೇ ಎಂಬ ಕುತೂಹಲ ಮಾಹಿ ಫ್ಯಾನ್ಸ್​ಗಳಲ್ಲಿ ಕಾಡತೊಡಗಿದೆ. ಇದಕ್ಕೀಗ, ಉತ್ತರವೂ ಲಭಿಸಿದೆ. 
ಕೆಲವರು ಬ್ಲೂಟೂತ್ ಅಥವಾ ಇಯರ್‌ಬಡ್‌ಗಳು ಅಂದುಕೊಂಡಿದ್ದರು. ಆದರದು ಕ್ರೀಡಾಂಗಣ ರೇಡಿಯೋ ರಿಸೀವರ್ ಎಂಬ ವಿಶೇಷ ಮೆಷಿನ್. ಇದರ ಮೂಲಕ, ನೀವು ಕ್ರೀಡಾಂಗಣದಲ್ಲಿ ಕುಳಿತಿರುವಾಗ ಬಾಲ್ ಟು ಬಾಲ್​ ಲೈವ್​ ಕಾಮೆಂಟರಿಯನ್ನು ಆಲಿಸಬಹುದು. ಇದರೊಂದಿಗೆ, ನೀವು ಪಂದ್ಯವನ್ನು ನೇರಪ್ರಸಾರ ವೀಕ್ಷಿಸುವಾಗಲೂ ಕಾಮೆಂಟರಿಯನ್ನು ಕೇಳಬಹುದು. ಇಂಗ್ಲೆಂಡ್ ಕ್ರಿಕೆಟ್ ಮೈದಾನದಲ್ಲಿ ಇಂತಹ ರೇಡಿಯೋ ರಿಸೀವರ್‌ಗಳು ತೀರ ಸಾಮಾನ್ಯ. 
ಅಷ್ಟಕ್ಕೂ ಇದರ ಕೆಲಸ ಹೇಗೆ?
ಇದು ಕ್ರೀಡಾಂಗಣದೊಳಗೆ ಮಾತ್ರ ಕಾರ್ಯನಿರ್ವಹಿಸುವ ಸ್ಥಳೀಯ ರೇಡಿಯೋ ಸಿಗ್ನಲ್ 
ಪಂದ್ಯ ಆರಂಭಕ್ಕೂ ಮೊದಲು ಈ ಸಾಧನಗಳನ್ನು ಕ್ರೀಡಾಂಗಣದಲ್ಲಿ ರೆಂಟ್​ಗೆ ಪಡೆಯುಬಹುದು ಅಥವಾ ಖರೀದಿಸಬಹುದು.
ನೀವು ಸರಿಯಾದ ಚಾನಲ್‌ಗೆ ಟ್ಯೂನ್ ಮಾಡಿದರೆ ಲೈವ್ ಕಾಮೆಂಟರಿ ನಿರಂತರವಾಗಿ ಕೇಳುತ್ತದೆ
ನೀವು ಕ್ರೀಡಾಂಗಣದಿಂದ ಹೊರಬಂದ ನಂತರ ಸಿಗ್ನಲ್ ಆಟೋಮೆಟಿಕ್​ ಆಗಿ ಕಟ್​ ಆಫ್​ ಆಗುತ್ತದೆ
ಸ್ಕೋರ್​ ಬೋರ್ಡ್​ ನೋಡುವ ಅಗತ್ಯವಿಲ್ಲ. ಬಳಕೆದಾರರಿಗೆ ಕಾಮೆಂಟರಿ ಮೂಲಕ ಸ್ಕೋರ್ ಮತ್ತು ರನ್​ರೇಟ್ ಕುರಿತು ಮಾಹಿತಿ ತಲುಪುತ್ತಿರುತ್ತದೆ,(ಏಜೆನ್ಸೀಸ್).