- U19 ಏಷ್ಯಾಕಪ್ ಸೋತ ಭಾರತ ತಂಡ
- ಫೈನಲ್ ಪಂದ್ಯದಲ್ಲಿ ಪಾಕ್ ವೇಗಿ ಹುಚ್ಚು ಸಂಭ್ರಮಕ್ಕೆ ವೈಭವ್ ಗರಂ
- ಮೈದಾನದಲ್ಲೇ ಖಡಕ್ ಉತ್ತರ ಕೊಟ್ಟ ಬೇಬಿ ಬಾಸ್
ನವದೆಹಲಿ: ಇಂದು (ಡಿ.21) ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ 191 ರನ್ಗಳಿಂದ ಭಾರತ ವಿರುದ್ಧ ಭಾರೀ ಅಂತರದ ಜಯ ಗಳಿಸಿತು.
ಈ ಮೂಲಕ ಪಾಕಿಸ್ತಾನ ಅಂಡರ್-19 ಏಷ್ಯಾಕಪ್ ಟ್ರೋಫಿ ಗೆದ್ದು ಬೀಗಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 50 ಓವರ್‌ಗಳಲ್ಲಿ 347 ರನ್ ಗಳಿಸಿ, ಭಾರತಕ್ಕೆ 348 ರನ್‌ಗಳ ಗುರಿ ನೀಡಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 156 ರನ್‌ಗೆ ಆಲ್ಔಟ್ ಆಯಿತು. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳ ತೀವ್ರ ಬೇಸರಕ್ಕೆ ಕಾರಣವಾಯಿತು.
ಅದಾಗಲೇ 49ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸ್ಪೋಟಕ ಬ್ಯಾಟರ್ ವೈಭವ್ ವಿಕಟ್ ಪತನಗೊಂಡಿದ್ದು, ತಂಡದ ಮೇಲೆ ಇನ್ನೂ ಒತ್ತಡವನ್ನು ಹೆಚ್ಚಿಸಿತು. ಸೂರ್ಯವಂಶಿ ವಿಕೆಟ್ ಕಬಳಿಸಿದ ಪಾಕ್ ವೇಗಿ ಅಲಿ ಅಲಿ ರಝಾ, ಹುಚ್ಚು ಸಂಭ್ರಮಕ್ಕೆ ಸಾಕ್ಷಿಯಾದರು. ಇದನ್ನು ತಿರುಗಿ ನೀಡಿದ 'ಬೇಬಿ ಬಾಸ್', ವೇಗಿಗೆ ತಮ್ಮ ಶೂನತ್ತ ಬೆರಳು ತೋರಿಸುವ ಮೂಲಕ ನೀನು ನನ್ನ ಕಾಲಿನ ಕೆಳಗೆ ಎಂಬ ಸಂದೇಶವನ್ನು ರವಾನಿಸಿದ್ದು ನಿಜಕ್ಕೂ ಹಲವರ ಅಚ್ಚರಿಗೆ ಕಾರಣವಾಯಿತು. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಭಾರತ ಬ್ಯಾಟಿಂಗ್ ವಿವರ (ಹೆಚ್ಚು ರನ್ ಗಳಿಸಿದ ಆಟಗಾರರು)
156 ರನ್‌ಗೆ ಆಲ್ಔಟ್ (22.2 ಓವರ್)
ವೈಭವ್ ಸೂರ್ಯವಂಶಿ- 26 ರನ್ (10 ಎಸೆತ)
ದೀಪೇಶ್ ದೇವೆಂದ್ರನ್- 36 ರನ್ (16 ಎಸೆತ)
ಪಾಕಿಸ್ತಾನ ಬ್ಯಾಟಿಂಗ್ ವಿವರ (ಹೆಚ್ಚು ರನ್ ಗಳಿಸಿದ ಆಟಗಾರರು)
347 ರನ್ 8 ವಿಕೆಟ್ (50 ಓವರ್)
ಸಮೀರ್ ಮೀನಸ್- 172 ರನ್, 113 ಎಸೆತ
ಅಹ್ಮದ್ ಹುಸೈನ್- 56 ರನ್, 72 ಎಸೆತ