ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಉಸ್ಮಾನ್​ ತಾರಿಕ್​ ( Usman Tariq ) ಬೌಲಿಂಗ್​ ಶೈಲಿ 
ಕ್ರಿಕೆಟ್

ಥೂ ಇದು ಒಂದು ಬೌಲಿಂಗಾ? ಪಾಕಿಸ್ತಾನ ಈ ರೀತಿಯೂ ಗೆಲ್ಲಬೇಕಾ? ಜಾಲತಾಣದಲ್ಲಿ ಆಕ್ರೋಶದ ಸುರಿಮಳೆ! Usman Tariq

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಮೆಂಟ್​ನ ರೋಚಕತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ
  • ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಹೆಸರು ಚರ್ಚೆಯಾಗುತ್ತಿದೆ
  • ಪಾಕಿಸ್ತಾನದ ನಿಗೂಢ ಸ್ಪಿನ್ನರ್​ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ
Usman Tariq : ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಮೆಂಟ್​ನ ರೋಚಕತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಕ್ರಿಕೆಟ್​ ಶಿಶುಗಳು ಕೂಡ ಬಲಿಷ್ಠ ರಾಷ್ಟ್ರಗಳಿಗೆ ಸವಾಲು ಹಾಕುತ್ತಿವೆ. ಪ್ರತಿನಿತ್ಯ ಒಂದಲ್ಲ ಒಂದು ಸಂಗತಿಗಳು ಹೊರಬೀಳುತ್ತಲೇ ಇವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಹೆಸರು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ತಾರಿಕ್​ ಅವರ ಬೌಲಿಂಗ್​ ಶೈಲಿ.
ನಿನ್ನೆ (ಫೆ.10) ವಿಶ್ವಕಪ್​ ಪಂದ್ಯಾವಳಿಯ ಭಾಗವಾಗಿ ಪಾಕಿಸ್ತಾನ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ನಡುವೆ ಲೀಗ್​ ಪಂದ್ಯ ನಡೆಯಿತು. ಈ ವೇಳೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್​ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಮಾಜಿ ಕ್ರಿಕೆಟಿಗರು ಕೂಡ ತಾರಿಕ್​ ಅವರ ಬೌಲಿಂಗ್ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಈ ಪಂದ್ಯವನ್ನು ವೀಕ್ಷಣೆ ಮಾಡಿದ ಶ್ರೀಲಂಕಾ ಮತ್ತು ಅಮೆರಿಕ ಅಭಿಮಾನಿಗಳು ಸಹ ತಾರಿಕ್​ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಉಸ್ಮಾನ್ ತಾರಿಕ್ ಓರ್ವ ಬೌಲರ್ ಅಲ್ಲ, ಅವರು ಸಂಪೂರ್ಣ ಥ್ರೋ ಬೌಲಿಂಗ್ ಮಾಡುತ್ತಿದ್ದಾರೆ ಎಂಬ ವಿಡಂಬನಾತ್ಮಕ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವರು ತಾರಿಕ್​ ರೀತಿ ಬೌಲಿಂಗ್ ಮಾಡುವ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಅಂದಹಾಗೆ, ಟಿ20 ವಿಶ್ವಕಪ್ ಟೂರ್ನಮೆಂಟ್‌ 12ನೇ ಪಂದ್ಯ ನಿನ್ನೆ ನಡೆಯಿತು. ಈ ಪಂದ್ಯದಲ್ಲಿ ಯುಎಸ್ಎ ಮತ್ತು ಪಾಕಿಸ್ತಾನ ತಂಡಗಳು ಕಾದಾಡಿದವು. ಅದ್ಭುತ ಪ್ರದರ್ಶನ ನೀಡಿದ ಪಾಕಿಸ್ತಾನ, 32 ರನ್‌ಗಳ ಅಂತರದಿಂದ ಗೆದ್ದಿತು. ಆದಾಗ್ಯೂ, ಈ ಪಂದ್ಯದಲ್ಲಿ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡಿ 27 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ, ಪಾಕಿಸ್ತಾನ ಭರ್ಜರಿ ಗೆಲುವು ಸಾಧಿಸಿತು.
ಆದಾಗ್ಯೂ, ಅಮೆರಿಕ ಮತ್ತು ಶ್ರೀಲಂಕಾ ಅಭಿಮಾನಿಗಳು ತಾರಿಕ್​ ಅವರ ಬೌಲಿಂಗ್​ ಶೈಲಿಯನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ತಾರಿಕ್ ಅವರ ಥ್ರೋ ಬೌಲಿಂಗ್‌ನಿಂದಾಗಿ ಪಾಕಿಸ್ತಾನ ಗೆದ್ದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಾರಿಕ್ ಅವರನ್ನು ಐಸಿಸಿ, ಈ ಕೂಡಲೇ ಬ್ಯಾನ್​ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ತಾರಿಕ್​ ಬೌಲಿಂಗ್​ ನೋಡಿ ಐಸಿಸಿ ಅದು ಹೇಗೆ ಒಪ್ಪಿಕೊಂಡಿತು? ಐಸಿಸಿ ಏನು ಕಣ್ಣು ಮುಚ್ಚಿದೆಯೇ? ಎಂದು ಪ್ರಶ್ನೆ ಮಾಡುವ ಮೂಲಕ ಟೀಕಿಸುತ್ತಿದ್ದಾರೆ.

ತಾರಿಕ್ ಬೌಲಿಂಗ್ ಶೈಲಿ ಸರಿಯೇ?

ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿ ವಿವಾದಕ್ಕೆ ಕಾರಣವಾಗಿದೆ. ಆದಾಗ್ಯೂ, ಅವರ ಬೌಲಿಂಗ್ ಶೈಲಿಯ ಬಗ್ಗೆ ಟೀಕೆಗಳಿದ್ದರೂ, ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅನಿಲ್ ಅವರಂತಹ ಹಿರಿಯ ಅಂಪೈರ್‌ಗಳು ಕೂಡ ತಾರಿಕ್​, ಕಾನೂನುಬದ್ಧವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಐಸಿಸಿ ಕೂಡ ಕ್ರಮ ಕೈಗೊಳ್ಳುತ್ತಿಲ್ಲ. ಆದರೂ, ತಾರಿಕ್​ ವಿರುದ್ಧದ ಟೀಕೆಗಳು ಮಾತ್ರ ಇನ್ನೂ ನಿಂತಿಲ್ಲ. ಈ ಬಗ್ಗೆ ಐಸಿಸಿ ಏನು ಹೇಳುತ್ತದೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್​).