ಟಿಮ್​ ಡೇವಿಡ್​ 2027ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಮೊದಲ ಪಂದ್ಯಕ್ಕೆ ಅಲಭ್ಯ! ಹೀಗಿದೆ ಕಾರಣ... 
ಕ್ರಿಕೆಟ್

ಟಿಮ್​ ಡೇವಿಡ್​ 2027ರ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಮೊದಲ ಪಂದ್ಯಕ್ಕೆ ಅಲಭ್ಯ! ಹೀಗಿದೆ ಕಾರಣ...

ಬೆಂಗಳೂರು: ಆರ್​ಸಿಬಿ ತಂಡದ ಸತತ 2ನೇ ಟ್ರೋಫಿ ಗೆಲುವಿನ ನಡುವೆ ಟಿಮ್​ ಡೇವಿಡ್​ಗೆ (Tim David) ದಂಡ ಶಿಕ್ಷೆ ಮತ್ತು ನಿಷೇಧದ ಬರೆ ಬಿದ್ದಿದೆ.

ಗುಜರಾತ್​ ವಿರುದ್ಧದ ಫೈನಲ್​ ಪಂದ್ಯದ ಮೊದಲ ಇನಿಂಗ್ಸ್​ನ 10ನೇ ಓವರ್​ನಲ್ಲಿ ವಿಕೆಟ್​ ಬಿದ್ದಾಗ ಟಿಮ್​ ಡೇವಿಡ್​ ಅಂಪೈರ್​ ನಿತಿನ್​ ಮೆನನ್​ ಕಡೆ ಐಸ್​ ಬ್ಯಾಗ್​ ಎಸೆದು ಆಕ್ರಮಣಕಾರಿ ವರ್ತನೆ ತೋರಿದ್ದರು. ಇದಕ್ಕಾಗಿ ಅವರಿಗೆ ಪಂದ್ಯ ಸಂಭಾವನೆಯ ಶೇ. 50 ದಂಡ ವಿಧಿಸಲಾಗಿದೆ ಮತ್ತು 2 ಡಿಮೆರಿಟ್​ ಅಂಕ ನೀಡಲಾಗಿದೆ.

ಡೇವಿಡ್​ ತನ್ನ ತಪ್ಪು ಮತ್ತು ಮ್ಯಾಚ್​ ರೆಫ್ರಿ ಜಾವಗಲ್​ ಶ್ರೀನಾಥ್​ ವಿಧಿಸಿರುವ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಈ ಮುನ್ನ ಮುಂಬೈ ವಿರುದ್ಧದ 2 ಲೀಗ್​ ಪಂದ್ಯಗಳ ದುರ್ವರ್ತನೆ ತೋರಿದ್ದ ಡೇವಿಡ್​ಗೆ ಕ್ರಮವಾಗಿ 1, 2 ಡಿಮೆರಿಟ್​ ಅಂಕ ನೀಡಲಾಗಿತ್ತು. ಈ ಅವರ ಒಟ್ಟು ಡಿಮೆರಿಟ್​ ಅಂಕ 5ಕ್ಕೇರಿದೆ. ಇದರಿಂದ ಒಂದು ಪಂದ್ಯ ನಿಷೇಧ ಶಿಕ್ಷೆಗೂ ಗುರಿಯಾಗಲಿದ್ದಾರೆ. ಇದರಿಂದ ಅವರು 2027ರ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಆಡಲಿರುವ ತನ್ನ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.