- 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡ ಭಾರತ
- ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಗೆ ಭಾಜನರಾಗಿದ್ದು ಕುಲ್ದೀಪ್ ಯಾದವ್
ವಿಶಾಖಪಟ್ಟಣಂ: ವೈಜಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ, 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ತಂಡದ ಯಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ನೀಡಿದೆ ಎಂಬುದನ್ನು ತಿಳಿಯೋಣ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯದಗಳ ಸರಣಿಯಲ್ಲಿ ಮೂರನೇ ಪಂದ್ಯವನ್ನು ಟೀಮ್ ಇಂಡಿಯಾ 9 ವಿಕೆಟ್‌ಗಳಿಂದ ಗೆದ್ದುಗೊಂಡಿತು. 271 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆಟಗಾರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ ಸಿಡಿಸಿದರು. ಈ ಮೂಲಕ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಈ ಗೆಲುವಿನೊಂದಿಗೆ ಭಾರತ ತಂಡ ಸರಣಿಯನ್ನು 2-1 ಅಂತರದಿಂದ ಗೆದ್ದುಗೊಂಡಿತು. ಅದಾಗ್ಯೂ, ಮೂರು ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶನ ನೀಡಿದ್ದಕ್ಕಾಗಿ ಇದೀಗ ಈ ಆಟಗಾರನಿಗೇ ತಂಡದ ಆಡಳಿತ ಮಂಡಳಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ
ಮೂರು ಪಂದ್ಯಗಳಲ್ಲಿ 302ರನ್ ಗಳಿಸಿದ್ದಕ್ಕಾಗಿ ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಗೆದ್ದದ್ದು ವಿರಾಟ್ ಕೊಹ್ಲಿ ಎಂದು ನೀವು ಭಾವಿಸುತ್ತಿದ್ದರೆ, ಇದು ಖಂಡಿತವಾಗಿಯೂ ತಪ್ಪು. ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದಕ್ಕಾಗಿ ತಂಡದ ಆಡಳಿತ ಮಂಡಳಿ ಕುಲ್ದೀಪ್ ಯಾದವ್ ಅವರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ನೀಡಿದೆ.
ಹೌದು, ಮೊದಲ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಎರಡು ಪಂದ್ಯಗಳಲ್ಲಿ ಇವರು ಪಡೆದ ವಿಕೆಟ್ಗಳಿಂದಾಗಿ ಪಂದ್ಯಗಳು ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕುಲ್ದೀಪ್ ಯಾದವ್ ಅವರಿಗೆ ಡ್ರೆಸ್ಸಿಂಗ್ ರೂಮ್ ಒಳಗೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರು ಪ್ರಶಸ್ತಿ ನೀಡುತ್ತಿರುವ ಕ್ಷಣದ ವೀಡಿಯೊವನ್ನು ಬಿಸಿಸಿಐ ಸಾಮಾಜಿಕ ಜಾಲತಾದಲ್ಲಿ ಹಂಚಿಕೊಂಡಿದೆ.
ದಾಖಲೆ ಮುರಿಯುವ ಅಂಚಿನಲ್ಲಿ ಕುಲ್ದೀಪ್
ಡಿಸೆಂಬರ್ 9 ರಂದು ಕಟಕ್‌ನಲ್ಲಿ ಪ್ರಾರಂಭವಾಗುವ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಕುಲ್ದೀಪ್ ಯಾದವ್ ಆಡಲಿದ್ದಾರೆ. ಈ ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ, ಕುಲ್ದೀಪ್ 49 ಪಂದ್ಯಗಳಲ್ಲಿ 88 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸರಣಿಯಲ್ಲಿ ಅವರು ಇನ್ನೂ 12 ವಿಕೆಟ್‌ಗಳನ್ನು ಪಡೆದರೆ, ಟಿ20ಐನಲ್ಲಿ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಎಂಬ ಅರ್ಶ್‌ದೀಪ್ ಸಿಂಗ್ ಅವರ ದಾಖಲೆಯನ್ನು ಅವರು ಮುರಿಯಲಿದ್ದಾರೆ,(ಏಜೆನ್ಸೀಸ್).