ಟೀಮ್ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ
- ಟಿ20 ವಿಶ್ವಕಪ್ನಲ್ಲಿ ಆಡುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದ ಪಿಸಿಬಿ
- ನಿರ್ಧಾರ ಹೇಳಲು ಹೈಡ್ರಾಮಾ ಜತೆಗೆ ವಿಶ್ವಕಪ್ ಟೂರ್ನಿ ಬಹಿಷ್ಕರಿಸಲು ಪಾಕ್ ಚಿಂತನೆ
- ವಿಶ್ವಕಪ್ ಅನ್ನು ಬಹಿಷ್ಕರಿಸುವ ತಾಕತ್ತು ಅವರಿಗಿಲ್ಲ ಎಂದ ಟೀಮ್ ಇಂಡಿಯಾ ಆಟಗಾರ
ನವದೆಹಲಿ: ಭಾರತಕ್ಕೆ ನಾವು ಪ್ರವಾಸ ಮಾಡಲ್ಲ ಎಂದಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ. ಈ ಮಧ್ಯೆ, ಹೊಸ ಹೈಡ್ರಾಮಾ ಮುಂದುವರಿಸಿರುವ ಪಾಕಿಸ್ತಾನ, ವಿಶ್ವಕಪ್ ಆಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಶುಕ್ರವಾರ (ಜ.30) ಅಥವಾ ಸೋಮವಾರ ಹೇಳುತ್ತೇವೆ ಎಂದು ತಮ್ಮ ಹೈಡ್ರಾಮಾ ಮುಂದುವರಿಸಿರುವುದು ಸದ್ಯ ಹಲವರನ್ನು ಕೆರಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಟಿ20 ವಿಶ್ವಕಪ್ ಟೂರ್ನಿಯಿಂದ ಐಸಿಸಿ ಬಾಂಗ್ಲಾದೇಶವನ್ನು ಹೊರಗಿಟ್ಟ ಹಿನ್ನೆಲೆ, ತಮ್ಮ ತಂಡ ಕೂಡ ಟೂರ್ನಿಯನ್ನು ಕೈಬಿಡುವ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ದೀರ್ಘಕಾಲದ ಚರ್ಚೆಯ ಬಳಿಕ ಈ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಜ.30 ಅಥವಾ ಫೆ.02ರಂದು ತಿಳಿಸುವುದಾಗಿ ಪಾಕ್ ಹೇಳಿದೆ. ಈ ವಿಷಯದಿಂದ ಕೆರಳಿರುವ ಟೀಮ್ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ, ಪಾಕಿಸ್ತಾನ ವಿರುದ್ಧ ಗುಡುಗಿದ್ದಾರೆ.
ಪಾಕಿಸ್ತಾನವು ಟೂರ್ನಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯದಿದ್ದರೂ, ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ವರದಿಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಕಿಡಿಕಾರಿರುವ ಅಜಿಂಕ್ಯಾ ರಹಾನೆ, "ನನಗೆ ಅನಿಸೋದು ಅವರಿಂದ ಇದು ಸಾಧ್ಯವಿಲ್ಲ ಅಂತ. ಅವರಿಗೆ ಆ ಗಟ್ಸ್ ಇಲ್ಲ" ಎಂದಿದ್ದಾಗಿ 'ಕ್ರಿಕ್ಬಜ್' ವರದಿ ಹೇಳಿದೆ,(ಏಜೆನ್ಸೀಸ್).