- ಐಪಿಎಲ್ 19ನೇ ಆವೃತ್ತಿಯಲ್ಲಿ ಹಲವು ತಂಡಗಳಿಂದ ಅದ್ಭುತ ಪ್ರದರ್ಶನ
- 10 ತಂಡಗಳ ಪೈಕಿ ಮೂರು ತಂಡಗಳು ತಾವು ಪ್ಲೇಆಫ್ಗೆ ಫಿಕ್ಸ್ ಎಂದಿವೆ
- ಉತ್ತಮ ಆಲ್ರೌಂಡ್ ಪ್ರದರ್ಶನದಿಂದ ಮೆಚ್ಚುಗೆಯ ಆಟ
IPL 2026: ಮಾ.28ರಿಂದ ಆರಂಭಗೊಂಡ ಐಪಿಎಲ್ 19ನೇ ಆವೃತ್ತಿಯ ಬಹುತೇಕ ಪಂದ್ಯಗಳು ಕ್ರಿಕೆಟ್ ಪ್ರಿಯರ ಕ್ರೇಜ್ ಅನ್ನು ಡಬಲ್ ಮಾಡಿದೆ. ಕೊನೆಯ ಓವರ್ವರೆಗೂ ತಲುಪಿ, ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸುತ್ತಿರುವ ಮ್ಯಾಚ್ಗಳು ರೋಚಕ ಜಯಕ್ಕೆ ಕಾರಣವಾಗುತ್ತಿವೆ. ಈಗಾಗಲೇ ಮೂರರಿಂದ ನಾಲ್ಕು ಪಂದ್ಯಗಳನ್ನು ಆಡಿರುವ ತಂಡಗಳು, ಖಚಿತವಾಗಿ ತಮ್ಮ ಟೀಮ್ ಪ್ಲೇಆಫ್ಗೆ ಎಂಟ್ರಿಕೊಡಲಿದೆ, 2026ರ ಟ್ರೋಫಿ ಗೆಲ್ಲಲಿದೆ ಎಂಬ ಸುಳಿವನ್ನು ನೀಡಿದೆ.
ಯಾವುದು ಆ 3 ತಂಡಗಳು?
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಳೆದ ವರ್ಷ ರನ್ನರ್ಅಪ್ ಪಂಜಾಬ್ ಕಿಂಗ್ಸ್ ಮತ್ತು ಐಪಿಎಲ್ ಮೊದಲ ಆವೃತ್ತಿಯ ವಿಜೇತ ರಾಜಸ್ಥಾನ ರಾಯಲ್ಸ್ ತಂಡಗಳು. ಈ ಮೂರು ಟೀಮ್ಗಳಲ್ಲಿ, ಆರ್ಆರ್ ಮತ್ತು ಪಂಜಾಬ್ ಕಿಂಗ್ಸ್ ಇನ್ನೂ ಒಂದು ಪಂದ್ಯವನ್ನು ಸೋತಿಲ್ಲ. ಆದರೆ, ಆರ್ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ರಾಜಸ್ಥಾನ ಎದುರು ಸೋತಿದ್ದು ಬಿಟ್ಟರೆ, ಉಳಿದ ಮೂರರಲ್ಲೂ ಗೆಲುವು ಸಾಧಿಸಿದೆ.
ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ 3 ಸ್ಥಾನದಲ್ಲಿ ಈ ತಂಡಗಳಿದ್ದು, ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ. ರಾಜಸ್ಥಾನ ರಾಯಲ್ಸ್ಗೆ ಬೌಲಿಂಗ್ಗಿಂತ ಬ್ಯಾಟಿಂಗ್ ಯೂನಿಟ್ ಗಟ್ಟಿಯಾಗಿದೆ. ಅದರಲ್ಲೂ ಟಾಪ್ ಆರ್ಡರ್ ಅಲುಗಾಡದಂತಿದೆ. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿಯಿಂದ ಉತ್ತಮ ಓಪನಿಂಗ್ ಪ್ರದರ್ಶನ ಬರುತ್ತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೂಡ ಉತ್ತಮವಾಗಿದೆ. ಇನ್ನು ಆರ್ಸಿಬಿ ಬಗ್ಗೆ ಹೆಚ್ಚೇನು ಹೇಳುವುದೇ ಬೇಡ.
8ನೇ ಕ್ರಮಾಂಕದವರೆಗೆ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ಯೂನಿಟ್ ಸಹ ಅಷ್ಟೇ ಬಲಿಷ್ಠವಾಗಿದೆ. ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರದರ್ಶನ ನೀಡುವವರೇ ಇದ್ದಾರೆ. ಜೊತೆಗೆ ಕ್ಯಾಪ್ಟನ್ ಆಟವನ್ನು ಮತ್ತು ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ರಜತ್, ತಮ್ಮ ತಂಡ ಈ ಬಾರಿಯೂ ಟ್ರೋಫಿ ಎತ್ತಿಹಿಡಿಯಲಿದೆ ಎಂಬ ಮುನ್ಸೂಚನೆಯನ್ನು ನೀಡಿರುವುದು ಗಮನಾರ್ಹ,(ಏಜೆನ್ಸೀಸ್).