ಪಿಎಸ್​ಎಲ್​ ಪಂದ್ಯದಲ್ಲಿ ನಡೆದ ಘಟನೆ 
ಕ್ರಿಕೆಟ್

ಇದಕ್ಕೂ ಹಣವಿಲ್ಲ... ಎಲ್ಲರೆದುರು ಪಾಕ್​ ಮಾನ ಹರಾಜು! ಐಪಿಎಲ್​ಗೆ ಟಕ್ಕರ್​ ಎನ್ನುವ ಪಿಎಸ್​ಎಲ್​ ಹಣೆಬರಹವೇ ಇಷ್ಟು | PSL

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ಗೆ ಪಿಎಸ್​ಎಲ್​ ಟಕ್ಕರ್​ ಎನ್ನುವ ಮೊಹ್ಸಿನ್ ನಖ್ವಿಗೆ ನಾಚಿಕೆಗೇಡು
  • ಪಿಎಸ್​ಎಲ್​ ಪಂದ್ಯದಲ್ಲಿ ಕಸದ ತೊಟ್ಟಿಯಂತಾದ ಸ್ಟೇಡಿಯಂ
ಕರಾಚಿ: ಐಪಿಎಲ್​ ಸಮಯಕ್ಕೆ ಪಿಎಸ್​ಎಲ್​ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್​ ನಖ್ವಿಗೆ ಕಿಂಚಿತ್ತು ನಾಚಿಕೆ, ಮಾನ, ಮರ್ಯಾದೆ ಇಲ್ಲ ಅನ್ನೋದಕ್ಕೆ ಅವರು ನಡೆಸುತ್ತಿರುವ ಪಿಎಸ್​ಎಲ್​ ಟಿ20 ಲೀಗ್​ ಜ್ವಲಂತ ಸಾಕ್ಷಿ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಭಾರತದಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಎಳೆದು ತರುವ ಸಚಿವನಿಗೆ ಇದಕ್ಕಿಂತ ಅವಮಾನ ಮತ್ತೊಂದಿಲ್ಲ.
ಇನ್ನೇನು ಎರಡ್ಮೂರು ದಿನಗಳಲ್ಲಿ ಮುಕ್ತಾಯಗೊಳ್ಳಲಿರುವ ಪಾಕಿಸ್ತಾನ ಸೂಪರ್​ ಲೀಗ್​ ಟೂರ್ನಮೆಂಟ್ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಪ್ರಸ್ತುತ, ನಾಕೌಟ್ ಪಂದ್ಯಗಳು ನಡೆಯುತ್ತಿವೆ. ಎಲಿಮಿನೇಟರ್ 1 ಇತ್ತೀಚೆಗಷ್ಟೇ ಮುಗಿದಿದ್ದು, ಎಲಿಮಿನೇಟರ್ 2 ಬಾಕಿ ಇದೆ. ಇನ್ನು ಅಂತಿಮ ಪಂದ್ಯ ಇದೇ ಮಾರ್ಚ್ 3ರಂದು ನಡೆಯಲಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನಾಕೌಟ್ ಹಂತದ ಪಂದ್ಯಗಳಿಗೆ ಮಾತ್ರ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪ್ರೇಮಿಗಳಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಿದೆ. ಈ ಮಧ್ಯೆ, ಅಲ್ಲಿ ಆಗುತ್ತಿರುವ ಕಸವನ್ನು ಸ್ವಚ್ಛಗೊಳಿಸಲು ಆಧುನಿಕ ಟೆಕ್ನಾಲಜಿ ಅಥವಾ ಸಿಬ್ಬಂದಿಗಳನ್ನು ಇಟ್ಟುಕೊಳ್ಳಲಾಗದ ಪಿಸಿಬಿ, ಸ್ಥಳೀಯ ಕ್ಲೀನರ್​ಗಳ ಕೈಯಿಂದ ಕಸಪರಕ್ಕೆಯಲ್ಲಿ ಕ್ಲೀನ್​ ಮಾಡಿಸಿರುವ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿದೆ.
ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡಲು ಅವಕಾಶ ಮಾಡಿಕೊಟ್ಟಿದ್ದೇ ತಡ ಪಾಕಿಸ್ತಾನಿ ಅಭಿಮಾನಿಗಳು ಕ್ರೀಡಾಂಗಣವನ್ನು ಕಸದ ತೊಟ್ಟಿಯಂತೆ ಮಾಡಿದ್ದಾರೆ. ಇದರಿಂದ ತಲೆಕೆಡಿಸಿಕೊಂಡಿರುವ ಪಿಸಿಬಿ, ಇಡೀ ಕ್ರೀಡಾಂಗಣವನ್ನು ಕಸದಿಂದ ಸ್ವಚ್ಛಗೊಳಿಸಲು ಹಣವಿಲ್ಲದ ಕಾರಣ, ಸ್ಥಳೀಯ ಕಾರ್ಮಿಕರಿಗೆ ಕಡಿಮೆ ಹಣ ಕೊಟ್ಟು ಮೈದಾನವನ್ನು ಗುಡಿಸುವಂತೆ ಹೇಳಿರುವುದು ಇದೀಗ ಸಾಲು ಸಾಲು ಛೀಮಾರಿಗೆ ಕಾರಣವಾಗಿದೆ. ಇದು ಮತ್ತೊಮ್ಮೆ ಎಲ್ಲರೆದುರು ಪಾಕ್​ ಮಾನವನ್ನು ಹರಾಜಾಕಿದೆ.
ಪಿಎಸ್​ಎಲ್​ ಟೂರ್ನಿಯ ಭಾಗವಾಗಿ ನಡೆದ ಮುಲ್ತಾನ್ ಸುಲ್ತಾನ್ಸ್ ಮತ್ತು ಹೈದರಾಬಾದ್ ಕಿಂಗ್ಸ್‌ಮೆನ್ ನಡುವಿನ ಎಲಿಮಿನೇಟರ್ 1 ಪಂದ್ಯದಲ್ಲಿ ಈ ದೃಶ್ಯ ಕಂಡುಬಂದಿದೆ. ಈ ಪಂದ್ಯವನ್ನು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಹೀಗಾಗಿ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕ್ರೀಡಾಂಗಣಕ್ಕೆ ಕಾಗದಗಳು, ನೀರಿನ ಬಾಟಲಿಗಳನ್ನು ಎಸೆದು, ಸ್ಟೇಡಿಯಂ ಅನ್ನು ಕಸದ ತೊಟ್ಟಿಯಂತೆ ಮಾಡಿ ಹೋಗಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದನ್ನೆಲ್ಲ ಸ್ವಚ್ಛಗೊಳಿಸಲು ಹಣವಿಲ್ಲದ ಕಾರಣ ಚೀಪ್​ ಅಂಡ್​ ಬೆಸ್ಟ್​ ಐಡಿಯಾ ಬಳಸಿದ್ದಕ್ಕೆ ನೆಟ್ಟಿಗರು ಮುಖಕ್ಕೆ ಹೊಡೆದಂತೆ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).