ವಿರಾಟ್​ ಕೊಹ್ಲಿ, ಗೌತಮ್​ ಗಂಭೀರ್​, ರೋಹಿತ್ ಶರ್ಮ 
ಕ್ರಿಕೆಟ್

ಎದುರಿಗಿದ್ದ ಗೌತಿಗೆ ಕ್ಯಾರೇ ಎನ್ನದ ಕೊಹ್ಲಿ​! ಟೀಮ್ ಇಂಡಿಯಾದಲ್ಲಿ ಕಾಡುತ್ತಿದೆ ಆಂತರಿಕ ಸಮಸ್ಯೆ? ಬಿಸಿಸಿಐ ಬೇಸರ

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದಲ್ಲಿ ಆಂತರಿಕ ಜಟಾಪಟಿ
  • ಗಂಭೀರ್ ಮತ್ತು ಕೊಹ್ಲಿ ನಡುವೆ ವೈಮನಸ್ಸು?
  • ಪ್ರಸ್ತುತ ಪರಿಸ್ಥಿತಿಗೆ ಬಿಸಿಸಿಐ ಬೇಸರ
ಜಾರ್ಖಂಡ್​: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶತಕ ವೀರನಾಗಿ ಮಿಂಚಿದ ವಿರಾಟ್ ಕೊಹ್ಲಿ ಮತ್ತು ಅರ್ಧಶತಕ ಸಿಡಿಸಿದ ರೋಹಿತ್ ಶರ್ಮ, ಕ್ರಿಕೆಟ್​ ಪ್ರೇಮಿಗಳ ಸಂತಸ, ಸಂಭ್ರಮಕ್ಕೆ ಪ್ರಮುಖ ಕಾರಣರಾದರು. ಒಂದೆಡೆ ಭಾರತ ತಂಡ ಮ್ಯಾಚ್​ ಗೆದ್ದರೆ, ಮತ್ತೊಂದೆಡೆ ಕೊಹ್ಲಿ ಮತ್ತು ಹೆಡ್​ ಕೋಚ್​ ಗೌತಮ್ ಗಂಭೀರ್​ ನಡುವೆ ಹಳೆಯ ಮನಸ್ತಾಪ ಮುಂದುವರಿದಂತೆ ಕಂಡುಬಂದಿದೆ.  
ಈ ವರ್ಷದ ಐಪಿಎಲ್​ ನಂತರ ತವರಿನಲ್ಲಿ ಕೊಹ್ಲಿ ಆಡಿದ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ. ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ವಿರಾಟ್​ ಮೇಲೆ ಕ್ರಿಕೆಟ್​ ಪ್ರೇಮಿಗಳಿಂದ ಅಪಾರ ನಿರೀಕ್ಷೆ ಮತ್ತು ಕುತೂಹಲ ಮೂಡಿತ್ತು. ಅಂತೆಯೇ, ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಆ ನಿರೀಕ್ಷೆಗಳನ್ನು ಈಡೇರಿಸಿದರು. ಆದರೆ, ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್​ನತ್ತ ಸಾಗುತ್ತಿದ್ದ ಕಿಂಗ್ ಕೊಹ್ಲಿ, ಎದುರಿಗೆಯೇ ಕುಳಿತಿದ್ದ ಗೌತಮ್ ಗಂಭೀರ್​ರನ್ನು ನೋಡದೆ, ತಮ್ಮ ಮೊಬೈಲ್​ ನೋಡುತ್ತ ಸಾಗಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ.

ಮುಂದುವರಿದ ಶೀತಲ ಸಮರ?

ಇದು ಗೌತಿ ಮತ್ತು ಕೊಹ್ಲಿ ನಡುವಿನ ಮನಸ್ತಾಪ ಮುಂದುವರಿದಿದೆ ಅನ್ನೋದಕ್ಕೆ ಬಲವಾದ ಸಾಕ್ಷಿ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಸಂಬಂಧ, ವಿಶೇಷವಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಅಷ್ಟು ಸರಿಯಿಲ್ಲ ಎಂಬ ವಿಚಾರಗಳು ಸುದ್ದಿ ಬಿಸಿಸಿಐ ಗಮನಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ. ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಮೂವರ ನಡುವಿನ ಸಂಬಂಧ ಸರಿಯಿಲ್ಲ. ಇವರ ಮಧ್ಯೆ ಆಂತರಿಕ ಸಮಸ್ಯೆಗಳಿವೆ ಎಂಬ ಮಾತುಗಳು ಜಾಲತಾಣಗಳಲ್ಲಿ ಬಿರುಸಿನ ಚರ್ಚೆಗೆ ಗ್ರಾಸವಾಗಿದೆ.

ಬಿಸಿಸಿಐ ಬೇಸರ

ಕೊಹ್ಲಿ ಮತ್ತು ರೋಹಿತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ್ ಅವರತ್ತ ಬೆರಳು ಮಾಡಿ ಟೀಕಿಸುತ್ತಿರುವುದಕ್ಕೆ ಬಿಸಿಸಿಐ ಬೇಸರ ವ್ಯಕ್ತಪಡಿಸಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿದ್ದರೂ, ಪ್ರಸ್ತುತ ಪರಿಸ್ಥಿತಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಬಿಸಿಸಿಐ ವಕ್ತಾರರು ತಿಳಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ, ರೋಹಿತ್ ಮತ್ತು ಗಂಭೀರ್ ನಡುವೆ ನಿಜವಾಗಿಯೂ ಬಿರುಕು ಮೂಡಿದೆಯೇ? ಅಥವಾ ಇದೆಲ್ಲವೂ ಕೇವಲ ಜಾಲತಾಣಕ್ಕೆ ಮಾತ್ರ ಸೀಮಿತವೇ? ಎಂಬ ಪ್ರಶ್ನೆಗಳು ಕಾಡುತ್ತಿವೆ,(ಏಜೆನ್ಸೀಸ್).