ಎಲ್‌ಎಸ್‌ಜಿ ಕ್ಯಾಪ್ಟನ್ ರಿಷಭ್ ಪಂತ್
- ನಿನ್ನೆ (ಏ.26) ಎಲ್‌ಎಸ್‌ಜಿ ಮತ್ತು ಕೆಕೆಆರ್ ನಡುವೆ ಐಪಿಎಲ್ ಪಂದ್ಯ
- ಸೂಪರ್ ಓವರ್ ತಲುಪಿದ ರೋಚಕ ಪಂದ್ಯದಲ್ಲಿ ಕೆಕೆಆರ್ಗೆ ಗೆಲುವು
- ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಬೇಸರದ ನುಡಿ
LSG vs KKR: ಕೈಗೆ ಬಂದ ತುತ್ತು, ಬಾಯಿಗೆ ಬರಲಿಲಲ್ಲ ಅನ್ನೋದಕ್ಕೆ ಲಖನೌ ಸೂಪರ್ ಜೈಂಟ್ಸ್ ಅದ್ಭುತ ನಿದರ್ಶನ. ನಿನ್ನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೂಪರ್ ಓವರ್‌ನಲ್ಲಿ ಹೀನಾಯ ಸೋಲುಂಡ ರಿಷಭ್ ಪಂತ್ ತಂಡ, ಮೊದಲ ಬಾಲ್ನಲ್ಲೇ ಸೋಲಿಗೆ ಶರಣಾಗಿದ್ದು ಫ್ರಾಂಚೈಸಿ ಅಭಿಮಾನಿಗಳಿಂದ ಸಹಿಸಲಾಗಲಿಲ್ಲ. ಈ ಕುರಿತು ಮಾತನಾಡಿದ ಪಂತ್, ತಮ್ಮ ಸೋಲಿನ ಹಿಂದಿರುವ ಕಾರಣಗಳೇನು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರೋಮಾಂಚಕ ಪಂದ್ಯದಲ್ಲಿ ಸೂಪರ್ ಓವರ್ವರೆಗೆ ಹೋರಾಡಿದ ಎಲ್‌ಎಸ್‌ಜಿ, ಕೆಕೆಆರ್ ನೀಡಿದ್ದು ಕೇವಲ 2 ರನ್ಗಳ ಗುರಿ. ತಮ್ಮಿಂದ ರಹಾನೆ ಪಡೆಯನ್ನು ಯಾವುದೇ ಕಾರಣಕ್ಕೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂಬುದನ್ನು ಮೊದಲೇ ತಿಳಿದಿದ್ದ ಪಂತ್ ಪಡೆ, ಕಡೆಗೂ ಬಾಲ್ನಲ್ಲೇ ಸೋಲೊಪ್ಪಿಕೊಂಡಿತು. ಸತತ ಐದನೇ ಸೋಲನ್ನು ದಾಖಲಿಸುವ ಮೂಲಕ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ ಕೆಳಗೆ ಕುಸಿದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಕೆಕೆಆರ್ ಬ್ಯಾಟ್ಸ್‌ಮನ್‌ಗಳಲ್ಲಿ, ರಿಂಕು ಸಿಂಗ್ (ಅಜೇಯ 83 ರನ್, 7 ಬೌಂಡರಿ, 51 ಎಸೆತಗಳಲ್ಲಿ 5 ಸಿಕ್ಸರ್) ಅರ್ಧಶತಕ ಗಳಿಸಿದರೆ, ಕ್ಯಾಮರೂನ್ ಗ್ರೀನ್ (34 ರನ್, 21 ಎಸೆತ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಇನ್ನು ಲಖನೌ ಬೌಲರ್‌ಗಳಲ್ಲಿ, ಮೊಹ್ಸಿನ್ ಖಾನ್ ಐದು ವಿಕೆಟ್‌ಗಳನ್ನು ಪಡೆದರೆ, ಜಾರ್ಜ್ ಲಿಂಡೆ ಒಂದು ವಿಕೆಟ್ ಕಬಳಿಸಿದರು.
ಈ ಗುರಿಯನ್ನು ಬೆನ್ನತ್ತಿದ ಎಲ್‌ಎಸ್‌ಜಿ ಪಡೆಗೆ ಪಂತ್ (38 ಎಸೆತಗಳಲ್ಲಿ 42 ರನ್), ಐಡೆನ್ ಮಾರ್ಕ್ರಾಮ್ (27 ಎಸೆತಗಳಲ್ಲಿ 31 ರನ್), ಮತ್ತು ಆಯುಷ್ ಬದೋನಿ (19 ಎಸೆತಗಳಲ್ಲಿ 24 ರನ್) ಬ್ಯಾಟಿಂಗ್ ಪ್ರದರ್ಶನದಿಂದ ಎದುರಾಳಿ ತಂಡ ನೀಡಿದ ಗುರಿಯನ್ನು ಸಮಬಲ ಮಾಡುವ ಮೂಲಕ ಸೂಪರ್ ಓವರ್‌ಗೆ ಕಾರಣವಾಯಿತು. ಸೂಪರ್ ಓವರ್‌ನಲ್ಲಿ, ಸ್ಪಿನ್ನರ್ ಸುನಿಲ್ ನರೈನ್ ಅದ್ಭುತ ಬೌಲಿಂಗ್ ಮಾಡಿದರು. ಎರಡು ವಿಕೆಟ್ ಕಳೆದುಕೊಂಡು ಕೇವಲ 1 ರನ್ ಗಳಿಸಲಷ್ಟೇ ಎಲ್ಎಸ್ಜಿಗೆ ಸಾಧ್ಯವಾಯಿತು.
ಪಂದ್ಯ ಸೋತ ಬೆನ್ನಲ್ಲೇ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, "ನಮಗೆ ಬ್ರೇಕ್ ಬೇಕಿದೆ. ಪ್ರತಿ ಪಂದ್ಯದಲ್ಲೂ ನಮಗೆ ಒತ್ತಡವಿದೆ. ಹೊರಗೆ ಕಾರಣಗಳನ್ನು ಹುಡುಕುವ ಬದಲು ನಾವು ನಮ್ಮೊಳಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಪ್ರತಿಯೊಬ್ಬ ಆಟಗಾರನು ತನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದು ಒಬ್ಬರಿಗೊಬ್ಬರು ದೂರುವ ಆಟವಲ್ಲ ಎಂದರು.
ಸೂಪರ್ ಓವರ್‌ನಲ್ಲಿ ನಿಕೋಲಸ್ ಪೂರನ್ರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ ಪಂತ್, ಪ್ರಸ್ತುತ ಈಗ ಅವರು ಫಾರ್ಮ್‌ನಲ್ಲಿಲ್ಲದಿದ್ದರೂ, ಕಷ್ಟದ ಸಮಯದಲ್ಲಿ ನಾವು ನಮ್ಮ ಆಟಗಾರರನ್ನು ನಂಬಬೇಕು. ಇಲ್ಲಿ ಕೆಕೆಆರ್ ಕ್ಯಾಪ್ಟನ್ ಅಜಿಂಕ್ಯ ರಹಾನೆ ಮತ್ತು ರಿಂಕು ಸಿಂಗ್ ಅವರಾಡಿದ ಇನ್ನಿಂಗ್ಸ್ ಪಂದ್ಯಕ್ಕೆ ತಿರುವು ನೀಡಿತು. 16 ಓವರ್‌ಗಳ ನಂತರ ನಾವಾಡಿದ ರೀತಿ ಒಪ್ಪುವಂತದ್ದಲ್ಲ. ಒಂದು ವಿಕೆಟ್ ಕೂಡ ಪಂದ್ಯದ ದಿಕ್ಕನ್ನು ಬದಲಿಸಬಹುದು ಎಂದು ನಮಗೆ ತಿಳಿದಿತ್ತು ಎಂದರು.
ನಾನು ಬ್ಯಾಟಿಂಗ್ ಮಾಡಲು ಬಂದಾಗ, ನಾಲ್ಕು ವಿಕೆಟ್‌ಗಳು ಅದಾಗಲೇ ಬಿದ್ದಿದ್ದವು. ನಾನು ಕೊನೆಯವರೆಗೂ ಇದ್ದು, ಬಾಲ್ಗಳನ್ನು ಬೌಂಡರಿಗೆ ಬಾರಿಸುತ್ತೇನೆ ಎಂದು ಭಾವಿಸಿದ್ದೆ ಎಂದು ರಿಷಭ್ ಬೇಸರದ ನುಡಿಗಳನ್ನು ಹಂಚಿಕೊಂಡರು,(ಏಜೆನ್ಸೀಸ್).