ಜಿಂಬಾಬ್ವೆ ವಿರುದ್ಧದ T20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ! 
ಕ್ರಿಕೆಟ್

ಹರಾರೆಯಲ್ಲಿ ಉದಯಿಸಿದ ಸೂರ್ಯ! 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವಂಡರ್​ ಕಿಡ್​; ಅಂತಾರಾಷ್ಟ್ರೀಯ ದಾಖಲೆ ಬರೆದ ವೈಭವ್​ ಸೂರ್ಯವಂಶಿ! Vaibhav Suryavanshi World Record

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆ ವಿರುದ್ಧದ T20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ!
  • ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಭಾರತದ 'ವಂಡರ್ ಕಿಡ್'
  • ಮೊದಲ ಪಂದ್ಯದಲ್ಲಿ ಭಾರತಕ್ಕೆ ಸುಲಭ ಜಯ
ನವದೆಹಲಿ: ಗುರುವಾರ (ಜು.23)  ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ವಂಡರ್​ ಕಿಡ್​​ ಖ್ಯಾತಿಯ ವೈಭವ್​ ಸೂರ್ಯವಂಶಿ (Vaibhav Suryavanshi World Record)
 ತಮ್ಮ ಚೊಚ್ಚಲ ಅರ್ಧಶತಕವನ್ನು ಸಿಡಿಸುವ ಮೂಲಕ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 
ಅತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ ದಾಖಲೆ ಈಗ ವೈಭವ್​ ಸೂರ್ಯವಂಶಿಯದ್ದಾಗಿದೆ. ಈ ಮೊದಲು ನಾಲ್ಕು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಸಾಧಿಸುವ ಅವಕಾಶವನ್ನು ಕೈಚೆಲ್ಲಿದ್ದ ವೈಭವ್​ ಈಗ ಐದನೇ ಅವಕಾಶದಲ್ಲಿ ಯಶಸ್ವಿಯಾಗಿದ್ದಾನೆ.

ವಿಶ್ವದಾಖಲೆ ಬರೆದ ವೈಭವ್​!

ಕೇವಲ 15 ವರ್ಷ 118 ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸುವ ಮೂಲಕ ಈ ಸಾಧನೆಯನ್ನು ಮಾಡಿದ ಜಗತ್ತಿನ ಅತಿ ಕಡಿಮೆ ವಯಸ್ಸಿನ ಬ್ಯಾಟರ್​ ಎಂಬ ದಾಖಲೆ ನಿರ್ಮಿಸಿದ್ದಾನೆ. 
ಈ ಮೊದಲು ನೇಪಾಳದ ಕುಶಾಲ್​ ಮಲ್ಲಾ, 15 ವರ್ಷ 340 ದಿನಗಳಲ್ಲಿ ಅರ್ಧ ಶತಕವನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸ್ಥಾಪಿಸಿದ್ದರು. ವೈಭವ್​ಗೂ ಮೊದಲು, ಭಾರತದ ಪರ ಕ್ರಿಕೆಟ್​ ದೇವರು ಸಚಿನ್​ ತೆಂಡೂಲಕ್ಕರ್​ 16 ವರ್ಷ 213 ದಿನಗಳನ್ನು ಹೊಂದಿದ್ದಾಗ ಈ ಸಾಧನೆಯನ್ನು ಮಾಡಿದ್ದರು. 

ಮೊದಲ ಪಂದ್ಯದಲ್ಲಿ ಜಯಭೇರಿ!

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಜಿಂಬಾಬ್ವೆ 20 ಓವರ್​ಗಳಲ್ಲಿ ಕೇವಲ 125 ರನ್​ಗಳನ್ನು ಮಾತ್ರ ಸೇರಿಸಲು ಸಾಧ್ಯವಾಯಿತು. ಭಾರತದ ಪರವಾಗಿ ಮಯಾಂಕ್​ ಯಾದವ್​ ಹಾಗೂ ಪ್ರಿನ್ಸ್​ ಯಾದವ್​ ತಲಾ ಎರಡು ವಿಕೆಟ್​ ಪಡೆದರೆ ಶಿವಂ ದುಬೆ ಹಾಗೂ ರವಿ ಬಿಷ್ಣೋಯ್​ ಒಂದು ವಿಕೆಟ್​ ಪಡೆದರು.
ಈ ಕಡಿಮೆ ಮೊತ್ತವನ್ನು ಬೆನ್ನತ್ತಿದ್ದ ಭಾರತ ಪರ ವೈಭವ್​ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 50 ರನ್​ ಗಳಿಸಿದರೆ ಇಶಾನ್​ ಕಿಶನ್​ 24 ಎಸೆತಗಳಿಗೆ 35 ರನ್​ ಗಳಿಸಿದರು. ಕೇವಲ 13.2 ಓವರ್​ಗಳಲ್ಲಿ ಗುರಿ ತಲುಪಿದ ಭಾರತ ಮೊದಲ ಪಂದ್ಯದಲ್ಲಿ ಸುಲಭ ಜಯವನ್ನು ಕಂಡಿತು, (ಏಜನ್ಸೀಸ್​).