ರಿಷಭ್ ಪಂತ್ ಹೊಡೆದ ಭರ್ಜರಿ ಶಾಟ್‌ಗೆ ಧರೆಗುರುಳಿದ ಡ್ರೋನ್! ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ...Rishabh Pant 
ಕ್ರಿಕೆಟ್

ರಿಷಭ್ ಪಂತ್ ಹೊಡೆದ ಭರ್ಜರಿ ಶಾಟ್‌ಗೆ ಧರೆಗುರುಳಿದ ಡ್ರೋನ್! ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ...Rishabh Pant

ಪ್ರಮುಖ ಮುಖ್ಯಾಂಶಗಳು

  • ಮುಲ್ಲನ್‌ಪುರದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯ
  • ಟೀಮ್ ಇಂಡಿಯಾ ಬ್ಯಾಟರ್ ರಿಷಭ್ ಪಂತ್ ಹೊಡೆದ ಭರ್ಜರಿ ಶಾಟ್​ಗೆ ಧರೆಗುರುಳಿದ ಡ್ರೋನ್​
  • ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿ​
  • ವೈರಲ್​ ಆಗುತ್ತಿರುವ ವಿಡಿಯೋ ವಾಸ್ತವವಾಗಿ ಎಐ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಆಗಿದ್ದು
Rishabh Pant : ಮುಲ್ಲನ್‌ಪುರದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಬ್ಯಾಟರ್ ರಿಷಭ್ ಪಂತ್ ಅವರು 28 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿದ್ದಾಗ ಹೊಡೆದ ಭರ್ಜರಿ ಶಾಟ್ ನೇರವಾಗಿ ಮೈದಾನದ ಮೇಲೆ ಹಾರಾಡುತ್ತಿದ್ದ ಡ್ರೋನ್‌ಗೆ ಬಡಿದು ಅದು ಕೆಳಗೆ ಬಿದ್ದಿದೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಆದರೆ, ವಾಸ್ತವವಾಗಿ ಇದು ಎಐ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ಸಂಪೂರ್ಣ ನಕಲಿ ವಿಡಿಯೋ ಆಗಿದ್ದು, ನೆಟ್ಟಿಗರನ್ನು ಹಾದಿ ತಪ್ಪಿಸುತ್ತಿದೆ.
ಈ ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಿರುವ ವಿಡಿಯೋ ಎಂಬುದು ಸ್ಪಷ್ಟವಾಗುತ್ತದೆ, ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳ ಪ್ರಕಾರ ಟೆಸ್ಟ್ ಪಂದ್ಯಗಳಲ್ಲಿ ಕೆಂಪು ಚೆಂಡನ್ನು ಬಳಸಲಾಗುತ್ತದೆ, ಆದರೆ ಈ ವಿಡಿಯೋದಲ್ಲಿ ರಿಷಭ್ ಪಂತ್ ಬಿಳಿ ಚೆಂಡಿನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ.
ಎಲ್ಲದಕ್ಕಿಂತ ದೊಡ್ಡ ಮಿಸ್ಟೇಕ್​ ಯಾವುದೆಂದರೆ, ಚೆಂಡು ಬಡಿದು ಡ್ರೋನ್ ಕೆಳಗೆ ಬೀಳುವಾಗ ಒಂದು ಚೆಂಡು ಪಕ್ಕಕ್ಕೆ ಹೋದರೆ, ಅದೇ ಕ್ಷಣದಲ್ಲಿ ಡ್ರೋನ್ ಒಳಗಿನಿಂದ ಮತ್ತೊಂದು ಚೆಂಡು ಹಠಾತ್ತನೆ ಪ್ರತ್ಯಕ್ಷವಾಗುತ್ತದೆ. ಹೀಗೆ ಒಂದೇ ಜಾಗದಲ್ಲಿ ಏಕಕಾಲಕ್ಕೆ ಎರಡು ಚೆಂಡುಗಳು ಕಾಣಿಸಿಕೊಳ್ಳುವುದು ಇದು ಐಐ (AI) ಸೃಷ್ಟಿಸಿದ ಸಂಪೂರ್ಣ ನಕಲಿ ವಿಡಿಯೋ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.
ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಮತ್ತು ಹಾದಿ ತಪ್ಪಿಸುವ ಕಂಟೆಂಟ್‌ಗಳನ್ನು ಎಐ (AI) ತಂತ್ರಜ್ಞಾನ ಬಳಸಿ ಸುಲಭವಾಗಿ ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಇಂತಹ ಕಂಟೆಂಟ್​ಗಳನ್ನು ನೋಡುವ ಸಾಮಾನ್ಯ ಜನರಿಗೆ ಯಾವುದು ನಿಜವಾದ ಸುದ್ದಿ ಮತ್ತು ಯಾವುದು ನಕಲಿ ಎಂದು ಗುರುತಿಸುವುದು ತೀರಾ ಕಷ್ಟಕರವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ವಿಡಿಯೋ ಅಥವಾ ಸುದ್ದಿಯೂ ನಿಜವಾಗಿರುವುದಿಲ್ಲ, ಇವುಗಳನ್ನು ಕುರುಡಾಗಿ ನಂಬದೆ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ಒಟ್ಟಾರೆಯಾಗಿ ರಿಷಭ್ ಪಂತ್ ಹೊಡೆದ ಶಾಟ್‌ಗೆ ಡ್ರೋನ್ ಕೆಳಗೆ ಬಿದ್ದಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಅದು ಕೇವಲ ನಕಲಿ ವಿಡಿಯೋ ಎಂಬುದು ಸ್ಪಷ್ಟವಾಗಿದೆ, (ಏಜೆನ್ಸೀಸ್​).