ಆಯೇಷಾ, ಸಾನಿಯಾ ಬಳಿ ಸನಾಗೂ ಕೈ ಕೊಟ್ರಾ ಮಲಿಕ್​? Shoaib Malik  
ಕ್ರಿಕೆಟ್

ಆಯೇಷಾ, ಸಾನಿಯಾ ನಂತ್ರ ಸನಾಗೂ ಕೈ ಕೊಟ್ರಾ ಮಲಿಕ್​? ವನೀಜಾ ಜತೆ 4ನೇ ಮದ್ವೆಗೆ ರೆಡಿಯಂತೆ ಮಾಜಿ ಕ್ರಿಕೆಟಿಗ! Shoaib Malik

ಪ್ರಮುಖ ಮುಖ್ಯಾಂಶಗಳು

  • ಶೋಯೆಬ್​ ಮಲಿಕ್ ತಮ್ಮ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ
  • ಶೋಯೆಬ್ ಮಲಿಕ್ ಈಗಾಗಲೇ ಮೂರು ಬಾರಿ ವಿವಾಹವಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
  • ಇಬ್ಬರೊಂದಿಗೆ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಮಲಿಕ್ ಮೂರನೇ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ
  • ತಮ್ಮ ಮೂರನೇ ಪತ್ನಿಗೂ ವಿಚ್ಛೇದನ ನೀಡಿ ನಾಲ್ಕನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರಂತೆ
Shoaib Malik : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಬಗ್ಗೆ ಬಹುತೇಕ ಮಂದಿಗೆ ತಿಳಿದಿದೆ. ಏಕೆಂದರೆ, ಒಂದು ಕಾಲದಲ್ಲಿ ಶೋಯೆಬ್ ಮಲಿಕ್ ಪಾಕಿಸ್ತಾನದ ಕ್ರಿಕೆಟ್​ ಅನ್ನು ಆಳುತ್ತಿದ್ದರು. ಕೇವಲ ಆಟಗಾರನಾಗಿ ಮಾತ್ರವಲ್ಲ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದು, ಅನೇಕ ಗೆಲುವುಗಳನ್ನು ತಂಡಕ್ಕೆ ತಂದುಕೊಟ್ಟಿದ್ದಾರೆ. ಪ್ರಸ್ತುತ ನಿವೃತ್ತಿ ಜೀವನವನ್ನು ಆನಂದಿಸುತ್ತಿರುವ ಮಲಿಕ್, ತಮ್ಮ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹರಿದಾಡುತ್ತಿದೆ. ಸದ್ಯಕ್ಕೆ ಇದು ಕೇವಲ ವದಂತಿಯಷ್ಟೇ. ಈ ಬಗ್ಗೆ ಮಲಿಕ್​ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.
ಅಂದಹಾಗೆ, ಶೋಯೆಬ್ ಮಲಿಕ್ ಈಗಾಗಲೇ ಮೂರು ಬಾರಿ ವಿವಾಹವಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇಬ್ಬರೊಂದಿಗೆ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಮಲಿಕ್, ಪ್ರಸ್ತುತ ತಮ್ಮ ಮೂರನೇ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಇದೂ ಸಾಕಾಗಲಿಲ್ಲ ಎಂಬಂತೆ, ತಮ್ಮ ಮೂರನೇ ಪತ್ನಿಗೂ ವಿಚ್ಛೇದನ ನೀಡಿ ನಾಲ್ಕನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಇದೇ ಫೆಬ್ರವರಿ 27 ರಂದು ಶೋಯೆಬ್ ಮಲಿಕ್, ಪಾಕಿಸ್ತಾನಿ ನಟಿ ವನೀಜಾ ಸತ್ತಾರ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಪೋಸ್ಟ್‌ಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ನೆಟ್ಟಿಗರು, ಶೋಯೆಬ್ ಮಲಿಕ್ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಜೆರ್ಸಿ ಬದಲಾಯಿಸುವಷ್ಟು ಸುಲಭವಾಗಿ ಪತ್ನಿಯರನ್ನು ಬದಲಾಯಿಸುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. 
ಶೋಯೆಬ್ ಮಲಿಕ್ ಈಗಾಗಲೇ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ವಿಚ್ಛೇದನ ನೀಡಿದ್ದಾರೆ. 2002ರಲ್ಲಿ, ಶೋಯೆಬ್ ಮಲಿಕ್ ಆಯೇಷಾ ಸಿದ್ದಿಕಿ ಎಂಬ ಮಹಿಳೆಯನ್ನು ವಿವಾಹವಾದರು. ಸುಮಾರು 8 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ಆಕೆಯೊಂದಿಗೆ ಡಿವೋರ್ಸ್​ ಪಡೆದರು. ವಿಚ್ಛೇದನದ ನಂತರ, ಹೈದರಾಬಾದ್‌ನ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾದರು. 2010 ರಲ್ಲಿ ಸಾನಿಯಾರನ್ನು ಮದುವೆಯಾದರು. ಸುಮಾರು 14 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ದಂಪತಿ, 2024 ರಲ್ಲಿ ಬೇರ್ಪಟ್ಟರು. ದಂಪತಿಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಆತ ಪ್ರಸ್ತುತ ಅಮ್ಮ ಸಾನಿಯಾ ಮಿರ್ಜಾ ಜೊತೆ ವಾಸಿಸುತ್ತಿದ್ದಾನೆ. ಇಬ್ಬರೂ ಭಾರತೀಯ ಪೌರತ್ವವನ್ನು ಹೊಂದಿದ್ದಾರೆ. 
ಸಾನಿಯಾಗೆ ಕೈಕೊಟ್ಟ ಬಳಿಕ 2024, ಜನವರಿ 20ರಂದು ಪಾಕ್​ ನಟಿ ಸನಾ ಜಾವೇದ್ ಎಂಬ ಮಹಿಳೆಯನ್ನು ವಿವಾಹವಾದರು. ಆದರೆ, ಈಗ ಇಬ್ಬರ ನಡುವೆ ಬಿರುಕು ಉಂಟಾಗಿದೆ ಎಂಬ ವರದಿಗಳಿವೆ. ಅದಕ್ಕಾಗಿಯೇ ಮಲಿಕ್​ ಅವರು ನಾಲ್ಕನೇ ಬಾರಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಫೆಬ್ರವರಿ 27 ರಂದು ಪಾಕಿಸ್ತಾನದ ಪ್ರಸಿದ್ಧ ನಟಿ ವನಿಜಾ ಸತ್ತಾರ್ ಅವರನ್ನು ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ, ಕೇವಲ ವದಂತಿಯಷ್ಟೇ, ಇದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).