ಐಪಿಎಲ್ ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಗರಿಷ್ಠ 18 ಕೋಟಿ ರೂ. ಮಾತ್ರ ಸಿಗಲಿದೆ!
ಅಬುಧಾಬಿ: IPL ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಎಷ್ಟೇ ಮೊತ್ತದ ಬಿಡ್ ಆದರೂ ಗರಿಷ್ಠ 18 ಕೋಟಿ ರೂ. ಮಾತ್ರ ಗಳಿಸಲಿದ್ದಾರೆ. ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ಇದರನ್ವಯ, ಮಿನಿ ಹರಾಜಿನಲ್ಲಿ ವಿದೇಶಿಯರು, ಮೆಗಾ ಹರಾಜಿನ ಗರಿಷ್ಠ ಬಿಡ್ ಮತ್ತು ಗರಿಷ್ಠ ರಿಟೇನ್ ಮೊತ್ತಗಳಲ್ಲಿ ಕನಿಷ್ಠವಾದುದನ್ನಷ್ಟೇ ಪಡೆಯಲಿದ್ದಾರೆ. ಹೀಗಾಗಿ ಕಳೆದ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಗರಿಷ್ಠ 27 ಕೋಟಿ ರೂ.ಗೆ ಬಿಕರಿಯಾಗಿದ್ದರೂ, ರಿಟೇನ್ನ ಗರಿಷ್ಠ 18 ಕೋಟಿ ರೂ. ಆಗಿದೆ.
ಇದರಿಂದಾಗಿ ವಿದೇಶಿ ಆಟಗಾರರು ಮಿನಿ ಹರಾಜಿನಲ್ಲಿ ಗರಿಷ್ಠ 18 ಕೋಟಿ ರೂ. ಮಾತ್ರ ಪಡೆಯಲಿದ್ದು, ಬಿಡ್ ಆದ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ. ಇದರನ್ವಯ ಕ್ಯಾಮರಾನ್ ಗ್ರೀನ್ 25 ಕೋಟಿ ರೂ. ಬಿಡ್ ಪಡೆದರೂ, 18 ಕೋಟಿ ರೂ. ಮಾತ್ರ ಗಳಿಸಲಿದ್ದು, ಬಾಕಿ 7 ಕೋಟಿ ರೂ. ಬಿಸಿಸಿಐ ಪಾಲಾಗಲಿದೆ.
*ಪ್ರತಿ ಹರಾಜಿನ ಗರಿಷ್ಠ ಬಿಡ್ (ರೂಪಾಯಿಗಳಲ್ಲಿ)
2008: ಎಂಎಸ್ ಧೋನಿ-6.5 ಕೋಟಿ
2009: ಕೆವಿನ್ ಪೀರ್ಟಸೆನ್, ಆಂಡ್ರೋ ಫ್ಲಿಂಟಾಫ್-7.56 ಕೋಟಿ
2010: ಶೇನ್ ಬಾಂಡ್, ಕೈರಾನ್ ಪೊಲ್ಲಾರ್ಡ್-3.48 ಕೋಟಿ
2011: ಗೌತಮ್ ಗಂಭೀರ್-11.2 ಕೋಟಿ
2012: ರವೀಂದ್ರ ಜಡೇಜಾ-11.4 ಕೋಟಿ
2013: ಗ್ಲೆನ್ ಮ್ಯಾಕ್ಸ್ವೆಲ್-5.85 ಕೋಟಿ
2014: ಯುವರಾಜ್ ಸಿಂಗ್-14 ಕೋಟಿ
2015: ಯುವರಾಜ್ ಸಿಂಗ್-16 ಕೋಟಿ
2016: ಶೇನ್ ವ್ಯಾಟ್ಸನ್-9.5 ಕೋಟಿ
2017: ಬೆನ್ ಸ್ಟೋಕ್ಸ್-14.5 ಕೋಟಿ
2018: ಬೆನ್ ಸ್ಟೋಕ್ಸ್-12.5 ಕೋಟಿ
2019: ಜೈದೇವ್ ಉನಾದ್ಕತ್, ವರುಣ್ ಚಕ್ರವರ್ತಿ-8.4 ಕೋಟಿ
2020: ಪ್ಯಾಟ್ ಕಮ್ಮಿನ್ಸ್-15.5 ಕೋಟಿ
2021: ಕ್ರಿಸ್ ಮೋರಿಸ್-16.25 ಕೋಟಿ
2022: ಇಶಾನ್ ಕಿಶನ್-15.25 ಕೋಟಿ
2023: ಸ್ಯಾಮ್ ಕರನ್-18.5 ಕೋಟಿ
2024: ಮಿಚೆಲ್ ಸ್ಟಾರ್ಕ್-24.75 ಕೋಟಿ
2025: ರಿಷಭ್ ಪಂತ್-27 ಕೋಟಿ