ತಿಲಕ್​ ವರ್ಮಾ ಆಕರ್ಷಕ 50! ಕಿವೀಸ್​ ಎದುರು ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ | IND vs NZ T20 
ಕ್ರಿಕೆಟ್

ತಿಲಕ್​ ವರ್ಮಾ ಆಕರ್ಷಕ 50! ಕಿವೀಸ್​ ಎದುರು ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ | IND vs NZ T20

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಕಿವೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ ನ್ಯೂಜಿಲೆಂಡ್​ 180 ರನ್​ಗಳನ್ನು ಕಲೆಹಾಕಿತು.

IND vs NZ T20: ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದ್ದು, ಈ ಮೂಲಕ 2-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಕಿವೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ ನ್ಯೂಜಿಲೆಂಡ್​ 180 ರನ್​ಗಳನ್ನು ಕಲೆಹಾಕಿತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಭಾರತಕ್ಕೆ, ಆರಂಭಿಕರಾದ ಅಭಿಷೇಕ್​ ಶರ್ಮ ಮತ್ತು ಸಂಜು ಸ್ಯಾಮ್ಸನ್​, ವೈಭವ್ ಸೂರ್ಯವಂಶಿಯಿಂದ ಉತ್ತಮ ಇನ್ನಿಂಗ್ಸ್ ಬರಲಿಲ್ಲ.

ಈ ವೇಳೆ, ಕ್ರೀಸ್​ಗೆ ಅಂಟಿ ನಿಂತ ತಿಲಕ್ ವರ್ಮಾ, 26 ಎಸೆತಗಳಲ್ಲಿ 51 ರನ್​ ಸಿಡಿಸಿದರೆ, ನಮನ್​ ಧಿರ್​ 17 ಎಸೆತಗಳಲ್ಲಿ 31 ರನ್​ ಬಾರಿಸಿದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಮೆಟ್ಟಿ ನಿಂತ ಈ ಯುವ ಜೋಡಿ, ಜವಾಬ್ದಾರಿಯುತ ಇನ್ನಿಂಗ್ಸ್​ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಕೊನೆಗೂ ಯಶಸ್ವಿಯಾಯಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಸಾಗಿದ ಪಂದ್ಯದಲ್ಲಿ ಒಂದೇ ಒಂದು ಬಾಲ್​ ಇರುವಂತೆ ಟೀಮ್ ಇಂಡಿಯಾ ಗೆಲುವು ಸಾಧಿಸಿತು.

ಇನ್ನು, ತಂಡದ ಪರ ಬೌಲಿಂಗ್​ನಲ್ಲಿ ಅರ್ಷದೀಪ್​ ಸಿಂಗ್ 33 ರನ್​ಗೆ 2 ವಿಕೆಟ್​ ಕಬಳಿಸಿದರೆ, ಪ್ರಿನ್ಸ್​ ಯಾದವ್​ ಮತ್ತು ನಿತೀಶ್​ ಕುಮಾರ್​ ರೆಡ್ಡಿ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು. ಈ ಮಧ್ಯೆ, ಹಲವು ವರ್ಷಗಳ ನಂತರ ಟೀಮ್ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ ಭುವನೇಶ್ವರ್​ ಕುಮಾರ್ ಅವರ ಮೇಲೆ ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗಳು ದುಪ್ಪಟ್ಟಿತ್ತು. ಆದರೆ, ಅವರಿಂದ ಒಂದೂ ವಿಕೆಟ್​ ಬರೆದೆ ಹೋಗಿದ್ದು ಬೇಸರ ಮೂಡಿಸಿತು. ​

ಸರಣಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮುಂದಿನ ಪಂದ್ಯವನ್ನೂ ಬ್ಯಾಕ್​ ಟು ಬ್ಯಾಕ್​ ಗೆಲ್ಲುವ ಮೂಲಕ ಕಿವೀಸ್​ ಪಡೆಯಿಂದ ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ತುದಿಗಾಲಿನಲ್ಲಿದೆ.