IND vs WI T20: ಇಂದು ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್, ವಿಂಡೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಕಣಕ್ಕಿಳಿದ ಆರಂಭಿಕರಾದ ಕಮಿಲ್ ಪೂರನ್ ಕೇವಲ 12 ರನ್ಗೆ ಪೆವಿಲಿಯನ್ ಸೇರಿದರೆ, ಶಾಯ್ ಹೋಪ್ (52, 37 ಎಸೆತ) ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್ ಇನ್ನಿಂಗ್ಸ್ ತೋರಿದರು.
ನಂತರದಲ್ಲಿ ಕ್ರೀಸ್ಗಿಳಿದ ಶಿಮ್ರಾನ್ ಹೆಟ್ಮಾಯರ್ (5), ಪೋವಲ್ (0), ಚೇಸ್ (5), ರೋಮಾರಿಯೋ ಶೆಫಾರ್ಡ್ (7), ಮ್ಯಾಥ್ಯೂವ್ ಫೋರ್ಡೆ (2), ಶಾಮರ್ ಸ್ಪ್ರಿಂಗರ್ (9) ಕೇವಲ ಒಂದಂಕಿ ರನ್ ಗಳಿಸಿ ಔಟಾದರು. ಇದು ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣವಾಯಿತು. ಇನ್ನು, ಏಕಾಂಗಿ ಹೋರಾಟ ನಡೆಸಿದ ಶರ್ಫೇನ್ ರುದರ್‌ಫೋರ್ಡ್ ಅವರ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು. 20 ಓವರ್ ಮುಗಿಯುವುದರೊಳಗೆ ಆಲ್ಔಟ್ ಆದ ವಿಂಡೀಸ್ ಪಡೆ 171 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಾದ ಅಭಿಷೇಕ್ ಶರ್ಮಾ (21 ರನ್) ಮತ್ತು ಸಂಜು ಸ್ಯಾಮ್ಸನ್ (11) ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾಗಿದ್ದೇ ಆದರೂ ನಂತರದಲ್ಲಿ ಕ್ರೀಸ್ಗೆ ಬಂದ ಇಶಾನ್ ಕಿಶನ್ (ಅಜೇಯ 37 ರನ್) ಮತ್ತು ನಾಯಕ ಶ್ರೇಯಸ್ ಅಯ್ಯರ್ (ಅಜೇಯ 102 ರನ್, 43 ಎಸೆತ, 6 ಸಿಕ್ಸರ್, 10 ಬೌಂಡರಿ) ಅವರ ಸ್ಫೋಟಕ ಶತಕದ ಇನ್ನಿಂಗ್ಸ್ ತಂಡವನ್ನು ಸುಲಭವಾಗಿ ಗೆಲುವಿನೆಡೆಗೆ ಕೊಂಡೊಯ್ಯಿತು. ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದು ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.