ಭಾರತ vs ದಕ್ಷಿಣ ಆಫ್ರಿಕಾ 3ನೇ ಟಿ20  
ಕ್ರಿಕೆಟ್

3ನೇ ಟಿ20 ಪಂದ್ಯದಲ್ಲಿ ಸುಲಭ ಗೆಲುವು! ಟೀಮ್​ ಇಂಡಿಯಾ ಬೌಲರ್​ಗಳ ಆರ್ಭಟಕ್ಕೆ ತತ್ತರಿಸಿದ ಹರಿಣರ ಪಡೆ | ind vs sa

ಪ್ರಮುಖ ಮುಖ್ಯಾಂಶಗಳು

  • ಧರ್ಮಶಾಲಾದಲ್ಲಿ ನಡೆದ 3ನೇ ಟಿ20 ಪಂದ್ಯ
  • ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 117 ರನ್​
  • 3 ವಿಕೆಟ್​ ನಷ್ಟಕ್ಕೆ ಗುರಿ ತಲುಪಿದ ಟೀಮ್ ಇಂಡಿಯಾ
ನವದೆಹಲಿ: ಇಂದು ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಸುಲಭ ಗೆಲುವನ್ನು ದಾಖಲಿಸಿತು.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೂರ್ಯಕುಮಾರ್ ಯಾದವ್​ ಪಡೆ, ದಕ್ಷಿಣ ಆಫ್ರಿಕಾ ತಂಡಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಲು ಶುರುಮಾಡಿದ ಹರಿಣರ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಟೀಮ್ ಇಂಡಿಯಾ ಬೌಲರ್​ಗಳ ಬೌಲಿಂಗ್​ಗೆ ತತ್ತರಿಸಿದ ಸೌತ್ ಆಫ್ರೀಕನ್​ ಬ್ಯಾಟರ್​ಗಳು, ಕೇವಲ 117 ರನ್​ಗೆ ಆಲ್​ಔಟ್ ಆದರು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಸುಲಭ ಗೆಲುವು ದಕ್ಕಿತು.
ದಕ್ಷಿಣ ಆಫ್ರಿಕಾ ಪರ ನಾಯಕ ಆ್ಯಡಮ್​ ಮಾರ್ಕ್ರಾಮ್ (46 ಎಸೆತಗಳಲ್ಲಿ 61 ರನ್, 6 ಬೌಂಡರಿ, 2 ಸಿಕ್ಸರ್) ಗರಿಷ್ಠ ಸ್ಕೋರ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಆದರೆ, ಇದು ತಂಡದ ಗೆಲುವಿಗೆ ಫಲ ನೀಡಲಿಲ್ಲ. ಡೇವಾಲ್ಡ್ ಬ್ರೆವಿಸ್ (2), ಟ್ರಿಸ್ಟಾನ್ ಸ್ಟಬ್ಸ್ (9), ಮತ್ತು ಕಾರ್ಬಿನ್ ಬಾಷ್ (4) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಇನ್ನು ತಂಡದ ಪರ ಬೌಲಿಂಗ್ ಮಾಡಿದ ಎಲ್ಲರೂ ಅತ್ಯುತ್ತಮ ಪ್ರದರ್ಶನ ಕೊಡುವಲ್ಲಿ ಸಫಲರಾದರು. ಅರ್ಷ್​ದೀಪ್​ ಸಿಂಗ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ಕುಲದೀಪ್​ ಯಾದವ್​, ಶಿವಂ ದುಬೆ ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾದರು.
1. ಅರ್ಷ್​ದೀಪ್​ ಸಿಂಗ್: 2 ವಿಕೆಟ್​
2. ಹರ್ಷಿತ್ ರಾಣಾ: 2 ವಿಕೆಟ್​
3. ಹಾರ್ದಿಕ್ ಪಾಂಡ್ಯ: 1 ವಿಕೆಟ್​
4. ಕುಲದೀಪ್​ ಯಾದವ್: 2 ವಿಕೆಟ್​
5. ​ಶಿವಂ ದುಬೆ: 1 ವಿಕೆಟ್​
6. ವರುಣ್ ಚಕ್ರವರ್ತಿ: 2 ವಿಕೆಟ್​