ಭಾರತ ತಂಡ ಪ್ರಕಟ  
ಕ್ರಿಕೆಟ್

2 ಶತಕ ಬಾರಿಸಿದ್ರೂ ಜೈಸ್ವಾಲ್​ ಬೇಡ, ರೋಹಿತ್​ಗೆ ಸ್ಥಾನ! ಇಂಗ್ಲೆಂಡ್ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ
  • ರೋಹಿತ್ ಶರ್ಮಾ ಇನ್​, ಯಶಸ್ವಿ ಜೈಸ್ವಾಲ್​ ಔಟ್​
ನವದೆಹಲಿ: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಇಂಗ್ಲೆಂಡ್ ಪ್ರವಾಸದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದ್ದು, ಮೂರು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್​ರನ್ನು ತಂಡದಿಂದ ಕೈಬಿಟ್ಟಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.
ರೋಹಿತ್ ಶರ್ಮ ನಿವೃತ್ತಿ ಮತ್ತು ಲಭ್ಯತೆ ಕುರಿತಂತೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿರುವ ಬಿಸಿಸಿಐ, ಇಂಗ್ಲೆಂಡ್​ ಸರಣಿಯಲ್ಲಿ ಹಿಟ್​ಮ್ಯಾನ್​ ಅವಕಾಶ ನೀಡಿದೆ.​ ಕ್ಯಾಪ್ಟನ್ ಶುಭಮನ್ ಗಿಲ್​ ಜೊತೆಗೆ ಮತ್ತೊಬ್ಬ ಓಪನರ್ ಸ್ಥಾನವನ್ನು ಎಡಗೈ ಸ್ಟಾರ್​ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ಗೆ ನೀಡಲಾಗುವುದು ಎಂದೇ ಅನೇಕರು ನಿರೀಕ್ಷಿಸಿದ್ದರು. ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಶತಕ ಸಿಡಿಸಿದ ಜೈಸ್ವಾಲ್​, ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೆಂಚುರಿಯನ್ನು ಬಾರಿಸಿದ್ದಾರೆ. ಇಷ್ಟಾದರೂ ತಂಡದಿಂದ ಅವರನ್ನು ಕೈಬಿಟ್ಟಿರುವುದು ಕ್ರಿಕೆಟ್​ ಪ್ರಿಯರಿಗೆ ಸರಿ ಅನಿಸಿಲ್ಲ.

ಜೈಸ್ವಾಲ್‌ಗೆ ನಿರಾಸೆ, ಗಿಲ್-ರೋಹಿತ್ ಓಪನರ್​

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 110 ರನ್ ಸಿಡಿಸಿದ್ದಲ್ಲದೆ, ಕೇವಲ ಮೂರು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರಿಗೆ ಈ ಬಾರಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟಾಪ್​ ಆರ್ಡರ್​ನಲ್ಲಿ ಬದಲಾವಣೆಗಳು ಅಥವಾ ಹೊಸ​ ಪ್ರಯೋಗಗಳನ್ನು ಮಾಡಲು ಮ್ಯಾನೇಜ್‌ಮೆಂಟ್ ಆಸಕ್ತಿ ತೋರದಿರುವುದು ಸ್ಪಷ್ಟ. ರೋಹಿತ್ ಜೊತೆ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ಕೊಹ್ಲಿಗೆ ಫಿಟ್‌ನೆಸ್ ಟೆಸ್ಟ್ ಕಡ್ಡಾಯ!

ತೊಡೆಯ ಇಂಜುರಿಯಿಂದ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇ ಆದರೂ, ಅದಕ್ಕೊಂದು ಮೊದಲು ಒಂದು ಕಂಡೀಷನ್ ವಿಧಿಸಲಾಗಿದೆ. ಬೆಂಗಳೂರಿನ 'ಸೆಂಟರ್ ಆಫ್ ಎಕ್ಸಲೆನ್ಸ್'ನಲ್ಲಿ ಈ ವಾರ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಇದರಲ್ಲಿ ಪಾಸ್ ಆದರೆ ಮಾತ್ರ, ಕೊಹ್ಲಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಭಾರತ ಏಕದಿನ ತಂಡ (ಇಂಗ್ಲೆಂಡ್ ಸರಣಿ)

ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಫಿಟ್ನೆಸ್​ ಟೆಸ್ಟ್​ ಕಡ್ಡಾಯ), ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಗುರ್ನೂರ್ ಬ್ರಾರ್.

ಇಂಗ್ಲೆಂಡ್ ಪ್ರವಾಸ: ಪೂರ್ಣ ವೇಳಾಪಟ್ಟಿ

1ನೇ ಟಿ20: ಜುಲೈ 1, ಚೆಸ್ಟರ್-ಲೆಸ್ಟ್ರೀಟ್
2ನೇ ಟಿ20: ಜುಲೈ 4, ಮ್ಯಾಂಚೆಸ್ಟರ್
3ನೇ ಟಿ20: ಜುಲೈ 7, ನಾಟಿಂಗ್ಹ್ಯಾಮ್
4ನೇ ಟಿ20: ಜುಲೈ 9, ಬ್ರಿಸ್ಟಲ್
5ನೇ ಟಿ20: ಜುಲೈ 11, ಸೌತಾಂಪ್ಟನ್

ಏಕದಿನ ಪಂದ್ಯದ ವೇಳಾಪಟ್ಟಿ

1ನೇ ಏಕದಿನ: ಜುಲೈ 14, ಬರ್ಮಿಂಗ್ಹ್ಯಾಮ್
2ನೇ ಏಕದಿನ: ಜುಲೈ 16, ಕಾರ್ಡಿಫ್
3ನೇ ಏಕದಿನ: ಜುಲೈ 19, ಲಾರ್ಡ್ಸ್

ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.