ಟೀಮ್ ಇಂಡಿಯಾ, ಮಾಜಿ ಪಾಕ್ ನಾಯಕ ಶಾಹಿದ್ ಅಫ್ರಿದಿ
- ಸಂಜೆ 7 ಗಂಟೆಗೆ ಅಹಮದಾಬಾದ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭ
- ಭಾರತ-ನ್ಯೂಜಿಲೆಂಡ್ ಫೈನಲ್ ಟಿ20 ಪಂದ್ಯದ ಮೇಲೆ ಎಲ್ಲರ ಕಣ್ಣು
- ಈ ಮಧ್ಯೆ, ಪಾಕ್ ಆಟಗಾರರು ಟೀಮ್ ಇಂಡಿಯಾ ಸೋಲಲಿ ಎಂದು ಪ್ರಾರ್ಥನೆ
ಗುಜರಾತ್: ಇಡೀ ಜಗತ್ತೇ ತೀವ್ರ ಕುತೂಹಲದಿಂದ ಕಾಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿದೆ. ಇಂದು ಸಂಜೆ 7 ಗಂಟೆಗೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕುತೂಹಲಕಾರಿ ಪಂದ್ಯ ಆರಂಭವಾಗಲಿದೆ. ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವ ಹೆಬ್ಬಯಕೆಯಲಿದ್ದು, ಭಾರತೀಯರು ಭಾರತವೇ ಗೆದ್ದು ಬರಲಿ ಎಂದು ದೇವರಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿರುವ ನ್ಯೂಜಿಲೆಂಡ್ ತಂಡವು ಭಾರತಕ್ಕೆ ಸಖತ್ ಪೈಪೋಟಿ ನೀಡಲಿದೆ. ಹೀಗಾಗಿ, ಖಂಡಿತ ಇದೊಂದು ಹೈವೋಲ್ಟೇಜ್ ಕದನ ಎಂದು ಕ್ರಿಕೆಟ್ ಪ್ರಿಯರು ಅಭಿಪ್ರಾಯಿಸಿದ್ದಾರೆ. ತನ್ನ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಸಂಭ್ರಮಿಸಲು ಕಿವೀಸ್ ಪಡೆ ಭರ್ಜರಿ ತಯಾರಿಗಳನ್ನು ಮಾಡಿಕೊಂಡಿದ್ದರೆ, ಮತ್ತೊಂದೆಡೆ, ಟೀಮ್ ಇಂಡಿಯಾ ಎಲ್ಲದಕ್ಕೂ ಸಿದ್ಧ ಎಂದು ರೋಚಕ ಗೆಲುವಿಗಾಗಿ ಪಣತೊಟ್ಟಿ ನಿಂತಿದೆ. ಈ ಮಧ್ಯೆ, ಪಾಕ್ ಕ್ರಿಕೆಟಿಗರು ಮಾತ್ರ ಟೀಮ್ ಇಂಡಿಯಾ ಸೋಲಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿರುವುದು ಆಶ್ಚರ್ಯವೇನಲ್ಲ ಬಿಡಿ.
ಟೀಮ್ ಇಂಡಿಯಾ ಯಾವಾಗ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ರಣರೋಚಕ ಗೆಲುವು ದಾಖಲಿಸಿತೋ, ಆ ಕ್ಷಣದಿಂದಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ಹೊಟ್ಟೆ ಉರಿ ಶುರುವಾಗಿದೆ. ಉಮರ್ ಗುಲ್, ಶೋಯೆಬ್ ಅಖ್ತರ್, ಇಂಜಮಾಮ್ ಉಲ್-ಹಕ್, ಮೊಹಮ್ಮದ್ ಅಮೀರ್ ಜೊತೆ ಇದೀಗ ಮಾಜಿ ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿ ಕೂಡ ಭಾರತ ಕಿವೀಸ್ ಎದುರು ಸೋಲಿಲಿ ಎಂದು ಆಶಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲಬಾರದು. ಅಕಸ್ಮಾತ್ ಗೆದ್ದು ಬಿಟ್ಟರೆ, ಬಿಸಿಸಿಐಗೆ ಇನ್ನಷ್ಟು ಬಲ ಹೆಚ್ಚಾಗುತ್ತದೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಕೋಟಿಗಟ್ಟಲೆ ಹಣವನ್ನು ಹೊಂದಿದೆ. ಟೀಮ್ ಇಂಡಿಯಾ ಈಗಾಗಲೇ ಸಾಕಷ್ಟು ಟ್ರೋಫಿಗಳನ್ನು ಗೆದ್ದಿದೆ. ಈಗ, ಮತ್ತೆ ಟ್ರೋಫಿ ಗೆದ್ದರೆ, ಬಿಸಿಸಿಐ ವಿಶ್ವ ಕ್ರಿಕೆಟ್ ಅನ್ನು ಆಳಲಿದೆ. ಇದರಿಂದ ಕ್ರಿಕೆಟ್ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅಫ್ರಿದಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ,(ಏಜೆನ್ಸೀಸ್).