ವಿರಾಟ್​ ಕೊಹ್ಲಿ 
ಕ್ರಿಕೆಟ್

ಈ ವಿಷಯದಲ್ಲಿ ಕೊಹ್ಲಿ ತಪ್ಪು ಮಾಡಿದ್ರು! ಟೀಮ್ ಇಂಡಿಯಾ ಫ್ಲಾಪ್​ ಶೋ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಬೇಸರ | Virat Kohli

ಪ್ರಮುಖ ಮುಖ್ಯಾಂಶಗಳು

  • ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್​
  • ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ
  • ವಿರಾಟ್​ ಕೊಹ್ಲಿ ನೆನಪಿಸಿಕೊಂಡ ಮಾಜಿ ಕ್ರಿಕೆಟಿಗ
IND vs SA: ಪ್ರಸ್ತುತ ಗುವಾಹಟಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರೊಂದಿಗೆ, ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್‌ಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ 288 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲುವಿನಿಂದ ಬಹಳ ದೂರ ಉಳಿದಿದ್ದು, ಡ್ರಾ ಮಾಡಿಕೊಳ್ಳುವುದು ಸಹ ಕಷ್ಟಸಾಧ್ಯ ಎನ್ನುವಂತಾಗಿದೆ.
ತವರಿನಲ್ಲೇ ಹರಿಣರ ಪಡೆ ವಿರುದ್ಧ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ, ಮೊದಲ ಪಂದ್ಯದ ನಂತರ ಇದೀಗ ಎರಡನೇ ಪಂದ್ಯದಲ್ಲೂ ಸೋಲು ಕಾಣುವ ಭೀತಿಯಲ್ಲಿದೆ. ಅಲ್ಲಿಗೆ ಸರಣಿಯಲ್ಲಿ ವೈಟ್​ವಾಶ್​ ಆಗಲಿದೆ. ತಂಡದ ಪರ ಭಾರತೀಯ ಬ್ಯಾಟರ್​ಗಳ ವೈಫಲ್ಯತೆ ಸದ್ಯ ಕ್ರಿಕೆಟ್​ ಪ್ರೇಮಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ಬೌಲರ್​ಗಳಿಗೆ ತತ್ತರಿಸಿರುವ ಟೀಮ್ ಇಂಡಿಯಾ, ಹೋಮ್​ ಗ್ರೌಂಡ್​ನಲ್ಲೇ ಪಂದ್ಯ ಸೋಲುತ್ತಿರುವುದು ದಿಗ್ಗಜ ಬ್ಯಾಟರ್​ ವಿರಾಟ್​ ಕೊಹ್ಲಿ ಅವರ ಉಪಸ್ಥಿತಿಯನ್ನು ನೆನಪಿಸುತ್ತಿದೆ.
ಮಾಜಿ ಕ್ರಿಕೆಟರ್​ ಶ್ರೀವತ್ಸ್​ ಗೋಸ್ವಾಮಿ ಮಾತನಾಡಿ, "ವಿರಾಟ್​ ಕೊಹ್ಲಿ ಏಕದಿನ ಪಂದ್ಯಕ್ಕೆ ಗುಡ್​ಬೈ ಹೇಳಬೇಕಿತ್ತೇ ವಿನಃ ಟೆಸ್ಟ್​ಗಲ್ಲ. ನಿಜಕ್ಕೂ ಟೆಸ್ಟ್​ ಕ್ರಿಕೆಟ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದೆ. ಈ ಫಾರ್ಮೆಟ್​ಗೆ ಅವರ ಕೊಡುಗೆ ಅಪಾರ. ಕೇವಲ ಒಬ್ಬ ಆಟಗಾರ ಎಂದಲ್ಲ. ಟೆಸ್ಟ್​ಗೆ ಅವರು ತರುತ್ತಿದ್ದ ಎನರ್ಜಿ, ಪ್ರೀತಿ, ಉತ್ಸಾಹದ ಆಟ ತಂಡಕ್ಕೆ ಸೋಲಿನ ಭಯವನ್ನು ದೂರ ಮಾಡುತ್ತಿತ್ತು. ಎಂಥಾ ಕಠಿಣ ಸಂದರ್ಭದಲ್ಲಿಯೂ ಗೆಲುವಿನ ಭರವಸೆ ಉಳಿಯುವಂತೆ ಮಾಡುತ್ತಿದ್ದರು" ಎಂದಿದ್ದಾರೆ.
"ಪಂದ್ಯವನ್ನು ಗೆಲ್ಲುವ ಮನಸ್ಥಿತಿ ಮತ್ತು ಕಿಚ್ಚು ತಂಡದಲ್ಲಿ ಇರುತ್ತಿತ್ತು. ವಿರಾಟ್​ ಕೊಹ್ಲಿ ಮೈದಾನದಲ್ಲಿ ಇದ್ದಾಗಲೆಲ್ಲ, ಆ ಉತ್ಸಾಹವನ್ನು ಕಾಣಬಹುದಿತ್ತು" ಎಂದು ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).