- ವೈಭವ್ಗೆ ತಂಡದಲ್ಲಿ ಅವಕಾಶ ಕೊಡದಿದ್ದೇ ಸೋಲಿಗೆ ಕಾರಣ
- ವೈಭವ್ ಸೂರ್ಯವಂಶಿಗೆ ಚಾನ್ಸ್ ಏಕೆ ಕೊಟ್ಟಿಲ್ಲ ಪ್ರಶ್ನೆಗೆ ಸಹಾಯಕ ಕೋಚ್ ಉತ್ತರ
Vaibhav Sooryavanshi: ಬೆಲ್ಫಾಸ್ಟ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನೂ ಟೀಮ್ ಇಂಡಿಯಾದ ಬಹಳ ಸುಲಭವಾಗಿ ಕೈಚೆಲ್ಲಿತು. 1050 ದಿನಗಳ ಬಳಿಕ ಟೀಮ್ ಇಂಡಿಯಾ ಕ್ರಿಕೆಟ್ ಶಿಶು ಎದುರು ಸರಣಿ ಸೋತಿದ್ದು ಇದೇ ಮೊದಲು. ಈ ಪಂದ್ಯದಲ್ಲಿನ ಕಳಪೆ ಪ್ರದರ್ಶನ ಮತ್ತು ವೈಭವ್ ಸೂರ್ಯವಂಶಿಯಿಂದ ಅವಕಾಶ ಕಸಿದುಕೊಂಡ ಹೆಡ್ ಕೋಚ್ ಗೌತಮ್ ಗಂಭೀರ್ರನ್ನು ಕ್ರಿಕೆಟ್ ಪ್ರೇಮಿಗಳು ಸದ್ಯ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಯಾಕಾಗಿ ವೈಭವ್ರನ್ನು ಕೈಬಿಡಲಾಯಿತು ಎಂಬುದಕ್ಕೆ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಪ್ರತಿಕ್ರಿಯಿಸಿದ್ದಾರೆ.
ಮೊದಲ ಮತ್ತು ಎರಡನೇ ಪಂದ್ಯದಿಂದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ ವಿರುದ್ಧದ ಸರಣಿಯಿಂದ ಕೈಬಿಡಲಾಯಿತು. ಇದನ್ನು ಭಾರಿ ಟೀಕಿಸಿದ ಕ್ರಿಕೆಟ್ ಅಭಿಮಾನಿಗಳು, ತಂಡದ ಸೋಲಿಗೆ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯವೇ ಮುಖ್ಯ ಕಾರಣ. ಮೊದಲ ಮ್ಯಾಚ್ನಲ್ಲೇ ಅತ್ಯಂತ ಕಳಪೆ ಪ್ರದರ್ಶನದಿಂದ ಸೋತ ತಂಡಕ್ಕೆ ವೈಭವ್ ಉಪಸ್ಥಿತಿ ಹೆಚ್ಚಿತ್ತು. ಇಷ್ಟಾದರೂ ಅವರ ಬದಲಿಗೆ ಇಬ್ಬರೂ ಆಟಗಾರರಿಗೆ ಅವಕಾಶ ಕೊಟ್ಟಿದ್ದಕ್ಕೆ ಅಸಮಾಧಾನ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಮಾತನಾಡಿರುವ ರಯಾನ್, ವೈಭವ್ ಒಬ್ಬ ಅದ್ಭುತ ಪ್ರತಿಭೆ ಅದರಲ್ಲಿ ಎರಡನೇ ಮಾತಿಲ್ಲ ಎಂದಿದ್ದಾರೆ.
ದೇಶಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವರು ರೆಡಿಯಿದ್ದಾರೆ. ಆದರೆ, ಈಗಾಗಲೇ ಅನುಭವ ಹೊಂದಿರುವ ಆಟಗಾರರನ್ನು ತಂಡದಿಂದ ಕೈಬಿಟ್ಟು, ಅವರನ್ನು ಕಣಕ್ಕಿಳಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಮ್ಯಾನೇಜ್ಮೆಂಟ್ ಭಾವಿಸಿತು. ಈಗಿರುವ ತಂಡವನ್ನು ಬ್ಯಾಲೆನ್ಸ್ ಮಾಡುವುದು ಮತ್ತು ಲಾಂಗ್ ಟರ್ಮ್ ಪ್ಲ್ಯಾನ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಮರ್ಥಿಸಿಕೊಂಡರು.
ವೈಭವ್ಗೆ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿರುವ ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆಯನ್ನು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಾದರೂ ಮ್ಯಾನೇಜ್ಮೆಂಟ್ ಈಡೇರಿಸಲಿದೆಯಾ? ವೈಭವ್ ಸೂರ್ಯವಂಶಿಗೆ ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿದ್ಯಾ ಅಥವಾ ಮತ್ತೊಮ್ಮೆ ಅವರನ್ನು ಬೆಂಚ್‌ನಲ್ಲಿ ಕೂರಿಸುವುದಕ್ಕಷ್ಟೇ ಸೀಮಿತ ಮಾಡ್ತಾರಾ ಎಂಬ ಚರ್ಚೆಗಳು ಜೋರಾಗಿವೆ,(ಏಜೆನ್ಸೀಸ್).