ವಿಶ್ವ ವಿಜೇತ ಭಾರತ ತಂಡದ ಆಟಗಾರರ ಬ್ರ್ಯಾಂಡ್ ಮೌಲ್ಯ ಹೆಚ್ಚಳ!
ನವದೆಹಲಿ: ಸತತ 2ನೇ ಬಾರಿ ಟಿ20 ವಿಶ್ವಕಪ್ (T20 World Cup) ಎತ್ತಿಹಿಡಿದ ಸೂರ್ಯಕುಮಾರ್ ಯಾದವ್ ಬಳಗ ಈಗಾಗಲೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಜತೆಗೆ ಐಸಿಸಿ, ಬಿಸಿಸಿಐನಿಂದ ಭಾರಿ ಬಹುಮಾನ ಮೊತ್ತವೂ ಲಭಿಸಿದೆ. ಇದರೊಂದಿಗೆ ಆಟಗಾರರ ವೈಯಕ್ತಿಕ ಬ್ರ್ಯಾಂಡ್ ಮೌಲ್ಯವೂ ಭಾರಿ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಾಯಕ ಸೂರ್ಯಕುಮಾರ್ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ವಾರ್ಷಿಕ ಬ್ರ್ಯಾಂಡ್ ಮೌಲ್ಯ ಈಗ ಎರಡಂಕಿ ಕೋಟಿ ರೂ. ತಲುಪಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಬ್ರ್ಯಾಂಡ್ ಮೌಲ್ಯ ಕೂಡ ದೊಡ್ಡ ಮಟ್ಟದ ಪ್ರಗತಿ ಸಾಧಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ತಂಡದಲ್ಲಿರುವ ಇತರ ಯುವ ಆಟಗಾರರಿಗೂ ಉತ್ತಮ ಜಾಹೀರಾತು ಒಪ್ಪಂದಗಳು ಲಭಿಸುವ ನಿರೀಕ್ಷೆ ಹರಡಿದೆ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಸುಮಾರು 35 ಬ್ರಾ$್ಯಂಡ್ಗಳು ಭಾರತ ತಂಡದ ಆಟಗಾರರ ಬೆನ್ನು ಹತ್ತುವ ನಿರೀಕ್ಷೆ ಇದೆ. ಫೈನಲ್ ಹೀರೋ ಬುಮ್ರಾ ಅವರ ಬ್ರ್ಯಾಂಡ್ ಮೌಲ್ಯ ಶೇ.40 ಪ್ರಗತಿ ಕಾಣಲಿದೆ. ವಾಣಿಜ್ಯ ಮಾರುಕಟ್ಟೆಯಲ್ಲಿ ಸ್ಯಾಮ್ಸನ್, ಕಿಶನ್ ಭಾರತೀಯ ಕ್ರಿಕೆಟ್ನ ಹೊಸಮುಖಗಳಾಗಿ ಆಕರ್ಷಣೆ ಪಡೆದುಕೊಂಡಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.