T20 World Cup: New Zealand win the Afghan challenge 
ಕ್ರಿಕೆಟ್

ಟಿ20 ವಿಶ್ವಕಪ್: ಆಫ್ಘನ್ ಸವಾಲು ಗೆದ್ದ ನ್ಯೂಜಿಲೆಂಡ್

ಚೆನ್ನೈ: ಆರಂಭಿಕ ಟಿಮ್ ಸೀರ್ಟ್ (65 ರನ್, 42 ಎಸೆತ, 7 ಬೌಂಡರಿ, 3 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಐಸಿಸಿ ಟಿ20 ವಿಶ್ವಕಪ್ ( T20WorldCup2026) ಟೂರ್ನಿ 10ನೇ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ಎದುರು 5 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ.
ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಗುಲ್ಬದೀನ್ ನೈಬ್ (63 ರನ್, 35 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 182 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಮುಜೀಬ್ ಉರ್ ರೆಹಮಾನ್ (31ಕ್ಕೆ 2) ನೀಡಿದ ಶಾಕ್‌ನಿಂದ ಚೇತರಿಸಿಕೊಂಡ ನ್ಯೂಜಿಲೆಂಡ್ ತಂಡ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ (42 ರನ್, 25 ಎಸೆತ, 7 ಬೌಂಡರಿ, 1 ಸಿಕ್ಸರ್) ಜತೆಯಾಟದ ಬಲದಿಂದ17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 183 ರನ್‌ಗಳಿಸಿ 13 ಎಸೆತ ಬಾಕಿಯಿರುವಂತೆಯೇ ಜಯಭೇರಿ ಬಾರಿಸಿತು. ಈ ಪಂದ್ಯಕ್ಕೆ 21 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಅಫ್ಘಾನಿಸ್ತಾನ: 6 ವಿಕೆಟ್‌ಗೆ 182 (ಗುರ್ಬಜ್ 27, ಇಬ್ರಾಹಿಂ ಜದ್ರಾನ್ 10, ಗುಲ್ಬದೀನ್ 63, ಸಿದ್ದಿಕ್‌ಉಲ್ಲಾ 29, ರಸೂಲಿ 20, ಒಮರ್ಜಾಯಿ 14, ನಬಿ 10*, ಫರ್ಗ್ಯುಸನ್ 40ಕ್ಕೆ 2), ನ್ಯೂಜಿಲೆಂಡ್: 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 183 (ಟಿಮ್ ಸೀರ್ಟ್ 65, ಆಲೆನ್ 1, ರಚಿನ್ 0, ಗ್ಲೆನ್ ಫಿಲಿಪ್ಸ್ 42, ಚಾಪ್‌ಮನ್ 28, ಡೆರಿಲ್ ಮಿಚೆಲ್ 25*, ಸ್ಯಾಂಟ್ನರ್ 17, ಮುಜೀಬ್ 41ಕ್ಕೆ 2, ನಬಿ 18ಕ್ಕೆ 1). ಪಂದ್ಯಶ್ರೇಷ್ಠ:ಟಿಮ್ ಸೀಫರ್ಟ್
1. ಅಫ್ಘಾನಿಸ್ತಾನ ತಂಡ ಎದುರು 180 ಪ್ಲಸ್ ರನ್ ಯಶಸ್ವಿಯಾಗಿ ಚೇಸಿಂಗ್ ಮಾಡಿದ ಮೊದಲ ತಂಡ ನ್ಯೂಜಿಲೆಂಡ್. ಒಟ್ಟಾರೆ 180 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಸಿದ 25 ಪಂದ್ಯಗಳಲ್ಲಿ ಅ್ಘಾನಿಸ್ತಾನ ಗೆಲುವು ಒಲಿಸಿಕೊಂಡಿತ್ತು.
183. ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್ ಇದಾಗಿದೆ.
2021ರಲ್ಲಿ ಇಂಗ್ಲೆಂಡ್ ಎದುರು 167 ರನ್ ಚೇಸ್ ಮಾಡಿದ್ದು ಹಿಂದಿನ ಗರಿಷ್ಠ ಮೊತ್ತವಾಗಿತ್ತು.