ಕೊಲಂಬೊ: ಐಸಿಸಿ ಟಿ20 ವಿಶ್ವಕಪ್(T20 World Cup) 2026ರ ಸೂಪರ್ 8 ಹಂತದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೂಪರ್ ಎಯ್ಟ್ಸ್ ಗ್ರೂಪ್ 2ರಲ್ಲಿ ಅಗ್ರಸ್ಥಾನಕ್ಕೇರಿದ್ದು, ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ವಿಲ್ ಜ್ಯಾಕ್ಸ್ ಅಬ್ಬರ
160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, ಆರಂಭದಲ್ಲಿ ಅಗ್ರ ಕ್ರಮಾಂಕದ ಕುಸಿತಕ್ಕೆ (top-order collapse) ಒಳಗಾಗಿತ್ತು. ಆದರೆ, ವಿಲ್ ಜ್ಯಾಕ್ಸ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು. ಜ್ಯಾಕ್ಸ್ ಕೇವಲ 18 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ತಲುಪಿಸಿದರು. ಇಂಗ್ಲೆಂಡ್ ಮೂರು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.
ಪಾಕಿಸ್ತಾನಕ್ಕೆ ಜೀವದಾನ
ಇಂಗ್ಲೆಂಡ್‌ನ ಈ ಗೆಲುವಿನಿಂದ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಸಣ್ಣ ಅವಕಾಶ ಉಳಿದುಕೊಂಡಿದೆ. ನಾಳೆ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಕಿವೀಸ್ ಹೋರಾಟ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, 20 ಓವರ್‌ಗಳಲ್ಲಿ 159/7 ರನ್ ಗಳಿಸಿತು. ಆರಂಭಿಕರಾದ ಫಿನ್ ಅಲೆನ್ (29) ಮತ್ತು ಟಿಮ್ ಸೀಫರ್ಟ್ (35) ಕಿವೀಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ, ಇಂಗ್ಲೆಂಡ್ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ನಿಯಮಿತವಾಗಿ ವಿಕೆಟ್ ಕಬಳಿಸಿ ಕಿವೀಸ್‌ಗೆ ಕಡಿವಾಣ ಹಾಕಿದರು,(ಏಜೆನ್ಸೀಸ್).