- ಇದೇ ಫೆ.7ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭ
- ಒಟ್ಟು 24 ಅಂಪೈರ್‌ಗಳು ಜತೆಗೆ ಆರು ಮಂದಿ ಮೆಗಾ ಟೂರ್ನಿಯಲ್ಲಿ ಭಾಗಿ
- ಭಾರತ ಮತ್ತು ಪಾಕ್ ಪಂದ್ಯಕ್ಕೆ ಇಬ್ಬರು ಅನುಭವಿ ಅಂಪೈರ್‌ಗಳು
ನವದೆಹಲಿ: ಇದೇ ಫೆ.7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಭಾರತ ಮತ್ತು ಶ್ರೀಲಂಕಾ ಈ ಮೆಗಾ ಟೂರ್ನಮೆಂಟ್ ಅನ್ನು ಆಯೋಜಿಸಲಿವೆ. ಈಗಾಗಲೇ ತಂಡಗಳು ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿರುವ ಐಸಿಸಿ, ಇದೀಗ ಟೂರ್ನಿಯಲ್ಲಿ ಭಾಗವಹಿಸಲಿರುವ ಅಂಪೈರ್‌ಗಳ ಹೆಸರಿನ ಪಟ್ಟಿಯನ್ನೂ ಬಹಿರಂಗಪಡಿಸಿದೆ.
ಫೆ7ರಿಂದ ಫೆ.20 ರವರೆಗೆ ನಡೆಯಲಿರುವ ಗ್ರೂಪ್ ಸ್ಟೇಜ್ ಪಂದ್ಯಗಳಿಗೆ ಒಟ್ಟು 24 ಆನ್ಫೀಲ್ಡ್ ಅಂಪೈರ್‌ಗಳು ಮತ್ತು ಇನ್ನೂ ಆರು ಮಂದಿ ಮ್ಯಾಚ್ ರೆಫರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಸೂಪರ್-8 ಮತ್ತು ನಾಕೌಟ್ ಹಂತದ ಪಂದ್ಯಗಳಿಗೆ ಅಂಪೈರ್‌ಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದೂ ಹೇಳಿದೆ.
ಕೊಲಂಬೊದ ಸೀನಲಿಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯಕ್ಕೆ ಕುಮಾರ್ ಧರ್ಮಸೇನ ಮತ್ತು ವೇಯ್ನ್ ನೈಟ್ಸ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಮೈದಾನಕ್ಕಿಳಿಯಲಿದ್ದಾರೆ. ಕೋಲ್ಕತ್ತಾದಲ್ಲಿ ಮೊದಲ ದಿನದ ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪಂದ್ಯಕ್ಕೆ ನಿತಿನ್ ಮೆನನ್ ಮತ್ತು ಸ್ಯಾಮ್ ನೊಗಾಜ್ಸ್ಕಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಭಾರತ-ಪಾಕ್ ಪಂದ್ಯಕ್ಕೆ ಇವರಿಬ್ಬರೇ ಅಂಪೈರ್
ಫೆ.15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದ್ದು, ಈ ಕುತೂಹಲಕಾರಿ ಪಂದ್ಯಕ್ಕೆ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಕುಮಾರ್ ಧರ್ಮಸೇನಾ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಬ್ಬರೂ ಅನುಭವಿ ಅಂಪೈರ್ಗಳಾಗಿದ್ದು, ಧರ್ಮಸೇನಾ ಅವರು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಅಂಪೈರ್‌ಗಳ ಪಟ್ಟಿಯಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವುದು ವಿಶೇಷ.
ಟಿ20 ವಿಶ್ವಕಪ್ ಪಂದ್ಯಗಳ ಅಂಪೈರ್‌ಗಳ ಹೆಸರು ಇಂತಿವೆ...
ಪಂದ್ಯದ ರೆಫರಿಗಳು: ಡೀನ್ ಕ್ಯಾಸ್ಕರ್, ಡೇವಿಡ್ ಗಿಲ್ಬರ್ಟ್, ರಂಜನ್ ಮದುಗಲೆ, ಆಂಡ್ರ್ಯೂ ಪೈಕ್ರಾಫ್ಟ್, ರಿಚಿ ರಿಚರ್ಡ್‌ಸನ್, ಜಾವಗಲ್ ಶ್ರೀನಾಥ್
ಆನ್-ಫೀಲ್ಡ್ ಅಂಪೈರ್ (24 ಮಂದಿ)
ರೋಲ್ಯಾಂಡ್ ಬ್ಲ್ಯಾಕ್, ಕ್ರಿಸ್ ಬ್ರೌನ್, ಕುಮಾರ್ ಧರ್ಮಸೇನ, ಕ್ರಿಸ್ ಗಫಾನಿ, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ವೇಯ್ನ್ ನೈಟ್ಸ್, ಡೊನೊವನ್ ಕೋಚ್, ಜಯರಾಮನ್ ಮದನಗೋಪಾಲ್, ನಿತಿನ್ ಮೆನನ್, ಸ್ಯಾಮ್ ನೊಗಜ್ಸ್ಕಿ, ಕೆಎನ್‌ಎ ಪದ್ಮನಾಭನ್, ಅಲ್ಲಾಹುದ್ದೀನ್ ಪಲೇಕರ್, ಪೌಲ್ ರುಲೀಫ್ ಪಾಲೇಕರ್, ಪಾಲ್ ರುಲೀಫ್ ರಝಾ ಶರ್ಫುದ್ದೌಲಾ ಇಬ್ನೆ ಶಾಹಿದ್, ಗಾಜಿ ಸೊಹೆಲ್, ರಾಡ್ ಟಕರ್, ಅಲೆಕ್ಸ್ ವಾರ್ಫ್, ರವೀಂದ್ರ ವಿಮಲಸಿರಿ, ಆಸಿಫ್ ಯಾಕೂಬ್,(ಏಜೆನ್ಸೀಸ್).