ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದು ಖಚಿತ 
ಕ್ರಿಕೆಟ್

T20 World Cup: ಬಾಂಗ್ಲಾದೇಶ ತಂಡಕ್ಕೆ ವೀಸಾ, ವಿಶೇಷ ಭದ್ರತೆ ಭರವಸೆ ನೀಡಿದ ಬಿಸಿಸಿಐ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯಿಂದಾಗಿ ಭಾರತದಲ್ಲಿ ಆಕ್ರೋಶ ಹೆಚ್ಚಾಗಿದೆ. ಇದು ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟಿಗೂ ಕಾರಣವಾಗಿದೆ. ಇದರ ಹೊರತಾಗಿಯೂ, ಶ್ರೀಲಂಕಾ ಜತೆಗಿನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್​ನಲ್ಲಿ (T20 wolrc cup cricket) ಬಾಂಗ್ಲಾದೇಶ ತಂಡ ಭಾರತದಲ್ಲಿ ಆಡುವುದು ಖಚಿತಗೊಂಡಿದೆ.

ಬಾಂಗ್ಲಾದೇಶ ತಂಡ ಭಾರತದಲ್ಲಿ ಆಡುವ ಬಗೆಗಿನ ಅನುಮಾನಗಳಿಗೆ ತೆರೆ ಎಳೆದಿರುವ ಬಿಸಿಸಿಐ, ಬಾಂಗ್ಲಾ ತಂಡದ ಆಟಗಾರರಿಗೆ ಮತ್ತು ತರಬೇತಿ ಸಿಬ್ಬಂದಿಗೆ ವೀಸಾ (Visa) ನೀಡುವ ಭರವಸೆ ಒದಗಿಸಿದೆ. ಕೇಂದ್ರ ಸರ್ಕಾರ ಈಗಾಗಲೆ ಬಾಂಗ್ಲಾ ತಂಡಕ್ಕೆ ವೀಸಾ ನೀಡುವ ಭರವಸೆ ಒದಗಿಸಿದೆ. ಆದರೆ ಬಾಂಗ್ಲಾದೇಶದ ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ಭಾರತದ ವೀಸಾ ನೀಡುವುದು ಕಷ್ಟಕರವೆನಿಸಿದೆ. ಈ ಬಿಕ್ಕಟ್ಟು ಬಗೆಹರಿಸಲು ಬಿಸಿಸಿಐ ಇನ್ನೂ ಪ್ರಯತ್ನಿಸುತ್ತಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ

ಬಾಂಗ್ಲಾದೇಶ ತಂಡ 2024ರಲ್ಲಿ ಭಾರತದಲ್ಲಿ ಆಡಲು ಬಂದಾಗ ಪ್ರತಿಭಟನೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ೆಬ್ರವರಿ 7ರಿಂದ ನಡೆಯಲಿರುವ ಟಿ20 ವಿಶ್ವಕಪ್​ ವೇಳೆ ಬಾಂಗ್ಲಾದೇಶ ತಂಡಕ್ಕೆ ವಿಶೇಷ ಭದ್ರತೆ ಒದಗಿಸುವ ಭರವಸೆಯನ್ನೂ ಬಿಸಿಸಿಐ ನೀಡಿದೆ. 2023ರಲ್ಲಿ ಪಾಕ್​ ಆಟಗಾರರು ಏಕದಿನ ವಿಶ್ವಕಪ್​ ಆಡಲು ಭಾರತಕ್ಕೆ ಬಂದಾಗ ನೀಡಲಾದ ಮಾದರಿಯ ಭದ್ರತೆಯನ್ನೇ ಒದಗಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.