ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್
- ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್‌ಗೆ ಮಾಜಿ ಕ್ರಿಕೆಟಿಗನ ಕಿವಿಮಾತು
- ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಗಳಿಸಿರುವುದು ಕೇವಲ 29 ರನ್
- ಟಿ20 ವಿಶ್ವಕಪ್‌ಗೆ ಮೊದಲು ಗಿಲ್ ಮತ್ತು ಸೂರ್ಯ ಫಾರ್ಮ್‌ಗೆ ಮರಳಿದರೆ ಉತ್ತಮ
ಮುಂಬೈ: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಮುನ್ನಡೆ ಸಾಧಿಸಿದೆ. ಆದರೆ, ಇಂದಿನ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಯಾರಿಗೆ ಸರಣಿ ಗೆಲುವು, ಡ್ರಾ? ಎಂಬುದು ಸ್ಪಷ್ಟವಾಗಲಿದೆ. ಈ ಮಧ್ಯೆ, ಟಿ20 ಕ್ಯಾಪ್ಟನ್ ಆಡಿರುವ ಮೂರು ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಸದ್ಯ ಮಾಜಿ ಕ್ರಿಕೆಟಿಗನ ಕಳವಳವಾಗಿದೆ.
ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಪ್ರಸ್ತುತ ದೊಡ್ಡ ಕಳವಳಕಾರಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಇದುವರೆಗಿನ ಮೂರು ಪಂದ್ಯಗಳಲ್ಲಿ ಆಡಿರುವ ಸೂರ್ಯ, ಕೇವಲ 29 ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ, ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವರುಣ್ ಆರನ್, "ಸೂರ್ಯಕುಮಾರ್ ಯಾದವ್‌ಗೆ ತುರ್ತಾಗಿ ಹೆಚ್ಚು ರನ್‌ಗಳನ್ನು ಕಲೆಹಾಕುವುದು ಅಗತ್ಯವಿದೆ" ಎಂದಿದ್ದಾರೆ.
"ಸೂರ್ಯಕುಮಾರ್ ಬ್ಯಾಟ್‌ನಿಂದ ಹೆಚ್ಚುವರಿ ರನ್‌ಗಳು ಬಂದರೆ, ಅವರ ಆತ್ಮವಿಶ್ವಾಸದಲ್ಲಿ ಭಾರಿ ಬದಲಾವಣೆಯನ್ನು ಕಾಣಬಹುದು. 2026ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇದಾದರೆ ಒಳಿತು. ಅವರಿಂದ ಉತ್ತಮ ಪ್ರದರ್ಶನ ಬರುವ ನಿರೀಕ್ಷೆಯಿದೆ. ಇದು ಶುಭಮನ್ ಗಿಲ್‌ಗೂ ಅನ್ವಯಿಸುತ್ತದೆ. ಈ ಇಬ್ಬರೂ ಬ್ಯಾಟರ್ಗಳು ಟೀಮ್ ಇಂಡಿಯಾಗೆ ಬಹುಮುಖ್ಯ. ಇವರಿಬ್ಬರು ಫಾರ್ಮ್‌ಗೆ ಮರಳಿದರೆ, ಟೀಮ್ ಇಂಡಿಯಾ ಇನ್ನಷ್ಟು ಬಲಿಷ್ಠವಾಗುತ್ತದೆ" ಎಂದಿದ್ದಾರೆ ವರುಣ್ ಆರನ್,(ಏಜೆನ್ಸೀಸ್).
ಟಿ20 ಸರಣಿ ವಿವರ (ಗೆಲುವು-ಸೋಲು)
1. ಮೊದಲನೇ ಟಿ20: ಭಾರತಕ್ಕೆ 101 ರನ್ಗಳ ಜಯ
2. ಎರಡನೇ ಟಿ20: ದಕ್ಷಿಣ ಆಫ್ರಿಕಾ 30 ರನ್ಗಳ ಜಯ
3. ಮೂರನೇ ಟಿ20: ಭಾರತಕ್ಕೆ 17 ರನ್ಗಳ ಗೆಲುವು
4. ನಾಲ್ಕನೇ ಟಿ20: ದಟ್ಟ ಮಂಜಿನಿಂದ ಪಂದ್ಯ ರದ್ದು
5. ಐದನೇ ಟಿ20: ಪಂದ್ಯ ನಡೆಯಬೇಕಿದೆ