ಇಶಾನ್ ಕಿಶನ್​, ಭಾರತ​ ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್​ 
ಕ್ರಿಕೆಟ್

ಇಶಾನ್​ ಕಿಶನ್​ ಮೇಲೆ ನನಗೆ ವಿಪರೀತ ಕೋಪ ಬಂತು! ಸ್ಫೋಟಕ ಇನ್ನಿಂಗ್ಸ್​ ನೀಡಿದ್ರೂ ಕ್ಯಾಪ್ಟನ್​ ಸೂರ್ಯ ಸಿಟ್ಟಾಗಿದ್ದೇಕೆ?

ಪ್ರಮುಖ ಮುಖ್ಯಾಂಶಗಳು

  • ಕಿವೀಸ್ ವಿರುದ್ಧದ 2ನೇ ಟಿ20 ಗೆದ್ದ ಭಾರತ
  • ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆ
  • 32 ಎಸೆತದಲ್ಲಿ 72 ರನ್​ ಬಾರಿಸಿದ ಇಶಾನ್ ಕಿಶನ್​
  • ಇಶಾನ್​ ಸ್ಫೋಟಕ ಇನ್ನಿಂಗ್ಸ್ ನೀಡಿದ್ರೂ ಸೂರ್ಯಕುಮಾರ್​ ಕೋಪಗೊಂಡಿದ್ದೇಕೆ? ​
IND vs NZ T20: ನಿನ್ನೆ (ಜ.24) ರಾಯ್​ಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ 7 ವಿಕೆಟ್​ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಸತತ ಎರಡನೇ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್​, ನನಗೆ ಇಶಾನ್ ಕಿಶನ್​ ಮೇಲೆ ಸಿಟ್ಟು ಬಂದಿತ್ತು ಎಂದಿದ್ದಾರೆ.  
ವಿಕೆಟ್​ ಕೀಪರ್​. ಬ್ಯಾಟ್ಸ್​ಮನ್​ ಇಶಾನ್ ಕಿಶನ್​, ಮೊದಲ ಕಮ್​​ಬ್ಯಾಕ್​ನಲ್ಲಿ ವಿಫಲಗೊಂಡಿದ್ದೇ ಆದರೂ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ನೀಡಿದರು. ಕೇವಲ 32 ಎಸೆತದಲ್ಲಿ 76 ರನ್​ ಸಿಡಿಸಿದ ಕಿಶನ್​, 11 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿದರು. ಈ ಸಮಯದಲ್ಲಿ ಕಿಶನ್​ಗೆ ಸಾಥ್​ ನೀಡಿದ ನಾಯಕ ಸೂರ್ಯ, 37 ಎಸೆತದಲ್ಲಿ ಅಜೇಯ 82 ರನ್​ ಗಳಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. 
ಇನ್ನು ಪಂದ್ಯದ ಬಳಿಕ ಇಶಾನ್ ಬ್ಯಾಟಿಂಗ್ ಕುರಿತು ಪ್ರತಿಕ್ರಿಯಿಸಿದ ಸೂರ್ಯ,  ನನಗೆ ಗೊತ್ತಿಲ್ಲ ಆತ ಊಟಕ್ಕೆ ಏನು ತಿಂದಿದ್ದ ಅಂತ. ಆದರೆ, ಬ್ಯಾಟಿಂಗ್ ಮಾತ್ರ ಅದ್ಭುತವಾಗಿತ್ತು. ಪವರ್​ಪ್ಲೇನ ಮೊದಲ ಎರಡು ಓವರ್​ಗಳಲ್ಲಿ ನಮಗೆ ಬಂದಿದ್ದು ಕೇವಲ 8 ರನ್​ ಅಷ್ಟೇ. ಅದೇ ಕೊನೆಯ ಓವರ್​ನೊಳಗೆ 75 ರನ್​ ಬಂದಿತು. ಇದು ನಿಜಕ್ಕೂ ಗ್ರೇಟ್​. ಇದಕ್ಕೆ ಪೂರ್ತಿ ಕ್ರೆಡಿಟ್​ ಆತನಿಗೆ ಸಲ್ಲಬೇಕು ಎಂದರು. ​    
ಒಂದು ಹಂತದಲ್ಲಿ ನನಗೆ ಇಶಾನ್​ ಮೇಲೆ ತುಂಬ ಸಿಟ್ಟು ಬಂತು. ಕಾರಣ, ಪವರ್​ಪ್ಲೇಯ ಪೂರ ಆತನೇ ಆಡಿದ ಹೊರತು. ನನಗೆಲ್ಲೂ ಬ್ಯಾಟಿಂಗ್ ಮಾಡಲು ಅವಕಾಶವೇ ಬಿಟ್ಟುಕೊಡಲಿಲ್ಲ. ಅಸಲಿಗೆ, ಆತನ ವೇಗದ ಬ್ಯಾಟಿಂಗ್ ನನಗೆ ಕ್ರೀಸ್​ನಲ್ಲಿ ಹೆಚ್ಚು ಕಾಲ ಉಳಿಯಲು ಅವಕಾಶ ನೀಡಿತು. ತುಂಬ ದಿನಗಳ ಬಳಿಕ ಒಂದು ಅರ್ಧಶತಕ ಬಾರಿಸಿದ ಖುಷಿ ನನಗಾಯಿತು ಎಂದು ಸೂರ್ಯ ಹೇಳಿದ್ದಾರೆ,(ಏಜೆನ್ಸೀಸ್).