ತಿರುಪತಿ: ವೈಕುಂಠ ಏಕಾದಶಿ (ಡಿ. 30) ಹಿನ್ನಲೆಯಲ್ಲಿ ಭಾರತದ ಟಿ20 ತಂಡದ ನಾಯಕ (Suryakumar Yadav) ಸೂರ್ಯಕುಮಾರ್ ಯಾದವ್, ಪತ್ನಿ ದೇವಿಶಾ ಶೆಟ್ಟಿ ಆಂಧ್ರಪ್ರದೇಶದ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಸೂರ್ಯಕುಮಾರ್ ತಮ್ಮ ಆಟದಿಂದಷ್ಟೆ ಅಲ್ಲದೇ, ತೀರ್ಥಯಾತ್ರೆಯಲ್ಲಿ ಸರಳ ಜೀವನ ಶೈಲಿ ಮತ್ತು ಭಕ್ತಿ ಸದಾ ಜನರ ಗಮನಸೆಳೆದಿದೆ. ಯಾದವ್ ಸಾಂಪ್ರಾದಾಯಕ ಉಡುಪನ್ನು ಧರಿಸಿ, ಶ್ರದ್ಧೆಯಿಂದ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ವರದಿಯಾಗಿದ್ದು, ಇದು ವೃತ್ತಿಜೀವನದ ಹೊರತಾಗಿಯೂ ಅನೇಕ ಭಾರತೀಯ ಕ್ರೀಡಾಪಟುಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ.
ಮೈದಾನದ ಆಚೆಗೂ ಸೂರ್ಯಕುಮಾರ್ ಈ ರೀತಿಯ ಕ್ಷಣಗಳ ಮೂಲಕ ವಿಭಿನ್ನವಾಗಿ ಕಾಣುತ್ತಾರೆ. ಇತ್ತೀಚೆಗೆ ಸ್ಕೈ ಬ್ಯಾಟ್ನಿಂದ ರನ್ ಬರುತ್ತಿಲ್ಲ, ಈ ನಡುವೆ ವೆಂಕಟೇಶ್ವರನ ಆಶೀರ್ವಾದವು ಅವರಿಗೆ ಇನ್ನಷ್ಟು ಸ್ಮರಣೀಯ ಇನ್ನಿಂಗ್ಸ್ ಮೂಡಿಬರುವಂತೆ ಮಾಡಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಬಹು ನಿರೀಕ್ಷಿತ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದಲ್ಲಿ ಸೂರ್ಯಕುಮಾರ್ ಯಾದವ್ ಆಟಗಾರರಿಗೆ ಚೈತನ್ಯವನ್ನು ತುಂಬಿದ್ದಾರೆ. ಆಕರ್ಷಕ ಬ್ಯಾಟಿಂಗ್ನಿಂದ ಹೆಸರುವಾಸಿಯಾದ ಯಾದವ್ ತಂಡದ ತರಬೇತಿ ಸಮಯದಲ್ಲಿ ತಮಾಷೆಯ ಜೊತೆ ಉತ್ಸಾಹದಿಂದ ಇರುತ್ತಿದ್ದರು.
ಅಭಿಮಾನಿಗಳು ವಿನೋದದಿಂದ ನೋಡುತ್ತಿದ್ದಂತೆ, ಯಾದವ್ ಅವರು "ಸ್ಪೀಡ್ ಬೋಲೆ ತೋ..ಎಫ್1 ಕಾರ್ ಎಂಬ ನಾಟಕೀಯ ಹಾಡನ್ನು ಅನುಕರಿಸಿದರು. ಅವರ ಕ್ರಿಕೆಟ್ ಬಗ್ಗೆ ಇರುವ ಸಂಪೂರ್ಣ ಶ್ರದ್ಧೆಯು ತಂಡದ ಇತರ ಆಟಗಾರರ ಗಮನವನ್ನು ಸೆಳೆದಿದೆ.
ಸೂರ್ಯಕುಮಾರ್ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಟಿ20 ಏಷ್ಯಾ ಕಪ್ ಟ್ರೋಫಿಯನ್ನು ಭಾರತ ತಂಡ ತನ್ನದಾಗಿಸಿಕೊಂಡಿದೆ (ಏಜೆನ್ಸೀಸ್).