Surya Kumar Yadav 
ಕ್ರಿಕೆಟ್

ಕಳಪೆ ಫಾರ್ಮ್ ಬಗ್ಗೆ ಟೀಕೆ: ನಾನು ಫಾರ್ಮ್‌ನಿಂದ ಅಲ್ಲ, ರನ್‌ಗಳಿಂದ ಹೊರಗಿದ್ದೇನೆ ಎಂದ ಸೂರ್ಯ!

ಬೆಂಗಳೂರು: "ನಾನು ಫಾರ್ಮ್‌ನಿಂದ ಹೊರಗಿಲ್ಲ, ಕೇವಲ ರನ್‌ಗಳಿಂದ ಹೊರಗಿದ್ದೇನೆ" ಎಂದು ಸೂರ್ಯಕುಮಾರ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಧರ್ಮಶಾಲಾದಲ್ಲಿ ನಡೆದ ಭಾರತ vs ದಕ್ಷಿಣ ಆಫ್ರಿಕಾ 3ನೇ T20I ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದ ನಂತರದ ಮಾತನಾಡಿದರು.
ತಮ್ಮ ಕಳಪೆ ಫಾರ್ಮ್ ಬಗ್ಗೆಯ ಎಲ್ಲಾ ಟೀಕೆಗಳನ್ನು ತಿರಸ್ಕರಿಸಿದ ಅವರು, "ನೆಟ್ಸ್‌ನಲ್ಲಿ ನಾನು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ನನ್ನ ನಿಯಂತ್ರಣದಲ್ಲಿರುವ ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇನೆ. ರನ್‌ಗಳು ಬರಬೇಕಾದ ಸಮಯ ಬಂದಾಗ ಬರುತ್ತವೆ. ನಾನು ಫಾರ್ಮ್‌ನಿಂದ ಹೊರಗಿಲ್ಲ, ಖಂಡಿತವಾಗಿಯೂ ರನ್‌ಗಳಿಂದ ಹೊರಗಿದ್ದೇನೆ ಎಂದರು.
ಇನ್ನು 2026 T20 ವಿಶ್ವಕಪ್ ಸಮೀಪಿಸುತ್ತಿದ್ದು, "2025ರಲ್ಲಿ ಸೂರ್ಯ ಅವರ T20I ಪ್ರದರ್ಶನ ಸಾಮಾನ್ಯಕ್ಕಿಂತ ಕಡಿಮೆಯಿದೆ. ಸುಮಾರು 18 ಇನ್ನಿಂಗ್ಸ್‌ಗಳಲ್ಲಿ ಸರಾಸರಿ 14.20, ಯಾವುದೇ ಅರ್ಧಶತಕವಿಲ್ಲ. ಇದರಿಂದ ಅವರ ಫಾರ್ಮ್ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಆದರೆ ಸೂರ್ಯ ಈ ಟೀಕೆಗಳನ್ನು ನಿರಾಕರಿಸಿ, ನೆಟ್ ಪ್ರ್ಯಾಕ್ಟೀಸ್‌ನಲ್ಲಿ ಉತ್ತಮವಾಗಿರುವುದನ್ನು ಆಧಾರವಾಗಿಟ್ಟುಕೊಂಡು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಹೇಳಿಕೆಯನ್ನು ಅವರು ಏಷ್ಯಾಕಪ್ 2025ರಲ್ಲೂ ನೀಡಿದ್ದರು.

ಭಾರತ 7 ವಿಕೆಟ್​ಗಳ ಜಯ

ಧರ್ಮಶಾಲಾದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಸುಲಭ ಗೆಲುವನ್ನು ದಾಖಲಿಸಿತು. ಟೀಮ್ ಇಂಡಿಯಾ ಬೌಲರ್​ಗಳ ಬೌಲಿಂಗ್​ಗೆ ತತ್ತರಿಸಿದ ಸೌತ್ ಆಫ್ರೀಕನ್​ ಬ್ಯಾಟರ್​ಗಳು, ಕೇವಲ 117 ರನ್​ಗೆ ಆಲ್​ಔಟ್ ಆದರು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಸುಲಭ ಗೆಲುವು ದಕ್ಕಿತು,(ಏಜೆನ್ಸೀಸ್​).