ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (ಚಿತ್ರ Instagram)
- ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ (ಫೆ.15) ನಡೆದ ಹೈವೋಲ್ಟೇಜ್ ಪಂದ್ಯ
- ಭಾರತ ತಂಡ ಪಾಕಿಸ್ತಾನವನ್ನು 61 ರನ್ಗಳಿಂದ ಬಗ್ಗು ಬಡಿಯುವ ಮೂಲಕ 3ನೇ ಜಯ ಸಾಧಿಸಿದೆ
- ಗೆಲುವಿನ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್
ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ (ಫೆ.15) ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 61 ರನ್ಗಳಿಂದ ಬಗ್ಗು ಬಡಿಯುವ ಮೂಲಕ 2026ರ ಟಿ20 ವಿಶ್ವಕಪ್‌ನಲ್ಲಿ ಸತತವಾಗಿ (Surya kumar Yadav) 3ನೇ ಜಯ ಸಾಧಿಸಿದೆ.
ಗೆಲುವಿನ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ಪೋಸ್ಟ್ನಲ್ಲೇನಿದೆ?
ನಾಯಕತ್ವ ವಹಿಸಿಕೊಂಡ ಬಳಿಕ ಸತತ 4 ನೇ ಬಾರಿ ಬದ್ಧ ವೈರಿಗಳ ಸೊಕ್ಕಡಗಿಸಿರುವ ಸೂರ್ಯ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ನಾಲ್ಕು ಪೋಟೋಗಳನ್ನು ಹಂಚಿಕೊಂಡು 'ಹರ್ ಹರ್ ಮಹಾದೇವ್' ಎಂಬ ಶೀರ್ಷಿಕೆ ನೀಡಿದ್ದಾರೆ. ನಿನ್ನೆ ಇಡೀ ದೇಶವೇ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದು, ಈ ಗೆಲುವನ್ನು ಸಾಕ್ಷಾತ್ ಶಿವನಿಗೆ ಅರ್ಪಿಸಿದಂತಾಗಿದೆ.
ಪಂದ್ಯ ಮುಗಿದ ಬೆನ್ನಲ್ಲೇ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸಹ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಏನಾದರೂ ಸಂದೇಹಗಳಿವೆಯಾ? ಮಹಾ ಶಿವರಾತ್ರಿಯ ಮುನ್ನಾ ದಿನದಂದು ಈ ವಿಜಯವನ್ನು ಎಲ್ಲಾ ಭಾರತೀಯರಿಗೆ ಅರ್ಪಿಸುತ್ತೇನೆ!! ಹರ್ ಹರ್ ಮಹಾದೇವ್! ಎಂದು ಬರೆದುಕೊಂಡಿದ್ದಾರೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.
ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಕೇವಲ 40 ಎಸೆತಗಳಲ್ಲಿ 77 ರಸ್ ಗಳಿಸಿ ಪಾಕ್ ಬೌಲರ್ಸ್ಗಳ ಬೆವರಿಳಿಸಿದರು.
ಒಂದು ಬದಿಯಲ್ಲಿ ಭಾರತದ ಆಟಗಾರರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರುತ್ತಿದ್ದರೆˌ ಇನ್ನೊಂದು ಬದಿಯಲ್ಲಿ ಕಿಶನ್ ರನ್ ಮಳೆ ಹರಿಸಿದರು.
ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿನಿಂದ ಭಾರತ ತಂಡವು 2026 ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ ಎ ಗುಂಪಿನ ಮೊದಲ ತಂಡವಾಯಿತು (ಏಜೆನ್ಸೀಸ್).