ಮುಂದಿನ ಐಪಿಎಲ್​ನಲ್ಲಿ 'ಕ್ಯಾಪ್ಟನ್ ಕೂಲ್' ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ 
ಕ್ರಿಕೆಟ್

CSK ಯಲ್ಲಿ ಬದಲಾವಣೆ ಬಿರುಗಾಳಿ: ಆಟಗಾರನಾಗಿ ಧೋನಿ ಮುಂದುವರಿಯುವುದು ಡೌಟ್​! ಕೋಚ್​ ಹುದ್ದೆಗೇರಲು ಸಜ್ಜಾದ ಕ್ಯಾಪ್ಟನ್​ ಕೂಲ್​? MS Dhoni as CSK Coach

ಪ್ರಮುಖ ಮುಖ್ಯಾಂಶಗಳು

  • CSK ಯಲ್ಲಿ ದೊಡ್ಡ ಬದಲಾವಣೆಗಳ ಸುಳಿವು! ಆ
  • ಆಟಗಾರನಾಗಿ ಎಂ.ಎಸ್. ಧೋನಿ ಮುಂದುವರಿಯುವುದು ಅನುಮಾನ
  • ಮುಂದಿನ ಐಪಿಎಲ್​ನಲ್ಲಿ 'ಕ್ಯಾಪ್ಟನ್ ಕೂಲ್' ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ
ಚೆನ್ನೈ: ಮುಂಬರುವ ಐಪಿಎಲ್​​ನಲ್ಲಿ ತಂಡಕ್ಕೆ ಮೇಜರ್​ ಸರ್ಜರಿ ಮಾಡಲು ಚೆನ್ನೈ ಸೂಪರ್​ ಕಿಂಗ್ಸ್​ ಮುಂದಾಗಿದ್ದು, ಐಪಿಎಲ್​ ಪ್ರಾರಂಭದಿಂದ ತಂಡದ ಜೊತೆಗೆ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್​ ಧೋನಿ (MS Dhoni as CSK Coach) ಅವರನ್ನು ತಂಡದ ಕೋಚ್​​ ಆಗಿ ನೇಮಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಐಪಿಎಲ್​ ಇತಿಹಾಸದಲ್ಲಿ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಕೂಡ ಒಂದಾಗಿದ್ದು, ಇಲ್ಲಿವರೆಗೆ ಭರ್ತಿ ಐದು ಬಾರಿ ಟ್ರೋಫಿಯನ್ನು ಮೇಲೆತ್ತುವ ಮೂಲಕ, ತಾವೊಂದು ಚಾಂಪಿಯನ್​ ತಂಡವೆಂದು ಸಾಬೀತು ಪಡಿಸಿದೆ.

ಆದರೆ ಇತ್ತೀಚಿನ ಸೀಸನ್​ಗಳಲ್ಲಿ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಇದು ಚೆನ್ನೈ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ತಂಡದ ಆಟಗಾರರ ಹಾಗೂ ಕೋಚಿಂಗ್​ ವಿಭಾಗದಲ್ಲಿ ಬದಲಾವಣೆ ತಂದರೆ ತಂಡ ಮತ್ತೊಮ್ಮೆ ಹಳೇ ಲಯಕ್ಕೆ ಮರಳಲಿದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ.

ಧೋನಿ ಸ್ಪಷ್ಟನೆ ನೀಡಿಲ್ಲ!


ಆದರೆ, ಮ್ಯಾನೇಜ್​ಮೆಂಟ್​ ಈ ಕುರಿತು ಧೋನಿ ಬಳಿ ಇಲ್ಲಿವರೆಗೆ ಈ ವಿಷಯವನ್ನು ಚರ್ಚಿಸಿದ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ, ಧೋನಿ ಮುಂದಿನ ಸೀಸನ್​ನಲ್ಲಿ ತಂಡದ ಆಟಗಾರನಾಗಿ ಮೈದಾನಕ್ಕಿಳಿಯುವುದು ಬಹುತೇಕ ಡೌಟ್​ ಎನ್ನುವುದು ಆಂತರಿಕ ಮಾಹಿತಿಯಾಗಿದೆ. ಆದರೆ ಈ ಬಗ್ಗೆ ಧೋನಿಯಾಗಲೀ, ಸಿಎಸ್​ಕೆ ಮ್ಯಾನೇಜ್​ಮೆಂಟ್​ ಆಗಲೀ ಯಾವುದೇ ಬಹಿರಂಗ ಹೇಳಿಕೆ ನೀಡಿರದ ಕಾರಣ ಇದನ್ನೊಂದು ವದಂತಿ ದೃಷ್ಟಿಯಲ್ಲೇ ಸ್ವೀಕರಿಸುವುದು ಸೂಕ್ತವಾಗಿದೆ.

ಪಾಲುದಾರಿಕೆ ಕೇಳಿರುವ ಕ್ಯಾಪ್ಟನ್​ ಕೂಲ್​?

ಕೋಚಿಂಗ್​ ವದಂತಿ ನಡುವೆ ಎಂ.ಎಸ್​.ಧೋನಿ ಚೆನ್ನೈ ತಂಡದ ಮಾಲೀಕತ್ವದಲ್ಲಿ ಶೇ. 25 ರಷ್ಟು ಪಾಲುದಾರಿಕೆಯನ್ನು ಕೇಳಿದ್ದರು, ಆದರೆ ಮ್ಯಾನೇಜ್​ಮೆಂಟ್​ ಇದಕ್ಕೆ ಒಪ್ಪಲಿಲ್ಲ ಎಂಬ ಸುದ್ದಿ ಕೂಡ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಧೋನಿ ಪಾಲುದಾರಿಕೆ ಕೇಳಿದಕ್ಕಾಗಿ, ಕೋಚಿಂಗ್​ ಜವಾಬ್ದಾರಿ ನೀಡಲಾಗುತ್ತಿದೆಯೇ? ಅಥವಾ ಧೋನಿ ಬದಲು ಬೇರೆ ಆಟಗಾರರು ಚೆನ್ನೈ ತಂಡಕ್ಕೆ ದೊರೆಯುತ್ತಿಲ್ಲವೇ? ಎಂಬ ಪ್ರಶ್ನೆಗಳಿಕೆ ಕಾಲವೇ ಉತ್ತರ ನೀಡಬೇಕಿದೆ, (ಏಜನ್ಸೀಸ್​).