ಪದಾರ್ಪಣೆ ಪಂದ್ಯದಲ್ಲೇ ಹಲವು ದಾಖಲೆ ಬರೆದ ಪ್ರಫುಲ್ ಹಿಂಗೆ, ಶಕೀಬ್ ಹುಸೈನ್!
ಹೈದರಾಬಾದ್: ರಾಜಸ್ಥಾನ ರಾಯಲ್ಸ್ ತಂಡವನ್ನು ಮೊದಲ 3 ಓವರ್ಗಳಲ್ಲೇ ಸೋಲಿನ ಸುಳಿಗೆ ಸಿಲುಕಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ದೇಶೀಯ ವೇಗದ ಬೌಲರ್ಗಳಾದ ಪ್ರಫುಲ್ ಹಿಂಗೆ (34ಕ್ಕೆ 4) ಮತ್ತು ಶಕೀಬ್ ಹುಸೈನ್ (24ಕ್ಕೆ 4) 57 ರನ್ ಗೆಲುವಿನ ವೇಳೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಹಿಂದಿನ 4 ಪಂದ್ಯಗಳಲ್ಲಿ ಬ್ಯಾಟಿಂಗ್ ಅಬ್ಬರದೊಂದಿಗೆ ಗೆಲುವು ಸಾಧಿಸಿದ್ದ ಆರ್ಆರ್ ತಂಡದ ಅಗ್ರ ಐವರು ಬ್ಯಾಟರ್ಗಳು ಪ್ರಫುಲ್ ಹಿಂಗೆ (Praful Hinge), ಶಕೀಬ್ ಹುಸೈನ್ (Sakib Hussain) ದಾಳಿಗೆ ಕಂಗೆಟ್ಟಿದ್ದರು. ಸನ್ರೈಸರ್ಸ್ ತಂಡದ 217 ರನ್ ಸವಾಲಿಗೆ ಪ್ರತಿಯಾಗಿ ಆರ್ಆರ್ ತಂಡ 19 ಓವರ್ಗಳಲ್ಲಿ 159 ರನ್ಗಳಿಗೆ ಸರ್ವಪತನ ಕಂಡಿತ್ತು. ಯಶಸ್ವಿ ಜೈಸ್ವಾಲ್ (1), ವೈಭವ್ ಸೂರ್ಯವಂಶಿ (0), ಧ್ರು ಜುರೆಲ್ (0), ಪ್ರಿಟೋರಿಯಸ್ (0), ನಾಯಕ ರಿಯಾನ್ ಪರಾಗ್ (4) ತಂಡದ ಮೊತ್ತ 9 ರನ್ ಆಗುವಷ್ಟರಲ್ಲೇ ಡಗೌಟ್ ಸೇರಿದ್ದರು. ನಂತರ ರವೀಂದ್ರ ಜಡೇಜಾ (45), ಡೊನೊವನ್ ೆರೀರ (69) ಹೋರಾಟದಿಂದ ಆರ್ಆರ್ ಮಾನ ಉಳಿಸಿಕೊಂಡಿತು.
ವಿದರ್ಭದ 24 ವರ್ಷದ ಪ್ರಫುಲ್ ಹಿಂಗೆ ಐಪಿಎಲ್ ಇನಿಂಗ್ಸ್ನ ಮೊದಲ ಓವರ್ನಲ್ಲೇ 3 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದರು. ಒಟ್ಟಾರೆ ಟಿ20 ಕ್ರಿಕೆಟ್ ಪಂದ್ಯದಲ್ಲಿ ಇದು 19ನೇ ದೃಷ್ಟಾಂತವಾಗಿದೆ. ಪ್ರಫುಲ್ ಐಪಿಎಲ್ನಲ್ಲಿ ಪದಾರ್ಪಣೆ ಪಂದ್ಯದ ಮೊದಲ 3 ಓವರ್ನಲ್ಲೇ 4 ವಿಕೆಟ್ ಕಬಳಿಸಿದ ಮೊದಲಿಗರೆನಿಸಿದರು.
ಪ್ರಫುಲ್-ಶಕೀಬ್ ಐಪಿಎಲ್ ಇನಿಂಗ್ಸ್ ಒಂದರಲ್ಲಿ ತಲಾ 4 ವಿಕೆಟ್ ಹಂಚಿಕೊಂಡ 4ನೇ ಜೋಡಿ ಎನಿಸಿದರು. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಜೋಡಿಯಾಗಿದ್ದಾರೆ. 2023ರಲ್ಲಿ ಮೊಹಮದ್ ಶಮಿ&ಮೋಹಿತ್ ಶರ್ಮ ಗುಜರಾತ್ ಪರ ಈ ಸಾಧನೆ ಮಾಡಿದ್ದರು.
ಸನ್ರೈಸರ್ಸ್ ತಂಡ ಮೊದಲ 18 ಎಸೆತಗಳಲ್ಲೇ 5 ವಿಕೆಟ್ ಕಬಳಿಸಿತು. ಇದು ಐಪಿಎಲ್ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಬಿದ್ದ ದೃಷ್ಟಾಂತವಾಗಿದೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್ 19 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡಿದ್ದು ಹಿಂದಿನ ಅತಿ ಕಡಿಮೆ ಎಸೆತವಾಗಿತ್ತು. ಆರ್ಆರ್ ತಂಡ ಮೊದಲ 5 ವಿಕೆಟ್ಗಳಿಂದ 9 ರನ್ ಮಾತ್ರ ಗಳಿಸಿದರೆ, ನಂತರದ 5 ವಿಕೆಟ್ಗಳಿಂದ 150 ರನ್ ಸೇರಿಸಿತು.