ಆಸೀಸ್​-ಬಾಂಗ್ಲಾ 2ನೇ ಟೆಸ್ಟ್​ನಲ್ಲಿ ಮೊದಲ ದಿನವೇ 18 ವಿಕೆಟ್​ ಪತನ! 
ಕ್ರಿಕೆಟ್

ಆಸೀಸ್​-ಬಾಂಗ್ಲಾ 2ನೇ ಟೆಸ್ಟ್​ನಲ್ಲಿ ಮೊದಲ ದಿನವೇ 18 ವಿಕೆಟ್​ ಪತನ!

ಮೆಕಾಯ್​: ಆತಿಥೇಯ ಆಸ್ಟ್ರೆಲಿಯಾ ಮತ್ತು ಬಾಂಗ್ಲಾದೇಶ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ಮೊದಲ ದಿನವೇ 18 ವಿಕೆಟ್​ಗಳು ಉರುಳಿವೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದ ಆಸೀಸ್​, ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ (12ಕ್ಕೆ 6) ಮಾರಕ ದಾಳಿಯೊಂದಿಗೆ ಬಾಂಗ್ಲಾವನ್ನು ಕೇವಲ 64 ರನ್​ಗಳಿಗೆ ಆಲೌಟ್​ ಮಾಡಿ, ಮೊದಲ ಟೆಸ್ಟ್​ ಸೋಲಿಗೆ ದಿಟ್ಟ ತಿರುಗೇಟು ನೀಡಿತು.

14 ರನ್​ ಗಳಿಸಿದ 11ನೇ ಕ್ರಮಾಂಕದ ಬ್ಯಾಟರ್​ ಶೋರಿುಲ್​ ಇಸ್ಲಾಂ ಅವರೇ ಇನಿಂಗ್ಸ್​ನ ಗರಿಷ್ಠ ಸ್ಕೋರರ್​ ಎನಿಸಿದರು. ಪ್ರತಿಯಾಗಿ ಬಾಂಗ್ಲಾದ ಎಡಗೈ ವೇಗಿ ಶೋರಿುಲ್​ ಇಸ್ಲಾಂ (35ಕ್ಕೆ 6) ಕೂಡ ಮಾರಕ ದಾಳಿಯೊಂದಿಗೆ ಆಸೀಸ್​ ತಂಡವನ್ನು ಕಾಡಿದರು. ದಿನದಂತ್ಯಕ್ಕೆ ಆಸೀಸ್​ 8 ವಿಕೆಟ್​ಗೆ 165 ರನ್​ ಗಳಿಸಿ 101 ರನ್​ಗಳ ಮುನ್ನಡೆ ಸಾಧಿಸಿದೆ. ಕ್ಯಾಮರಾನ್​ ಗ್ರೀನ್​ (51*) ಜತೆ ನಾಥನ್​ ಲ್ಯಾನ್​ (10*) ಕ್ರೀಸ್​ನಲ್ಲಿದ್ದಾರೆ.

ಸರಣಿ ಸಮಬಲ ಸಾಧಿಸಲು ಆಸೀಸ್​ ಈ ಟೆಸ್ಟ್​ ಗೆಲ್ಲಲೇಬೇಕಾಗಿದೆ. ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್​ ಕಬಳಿಸಿದ ಸ್ಟಾರ್ಕ್ (

Mitchell Starc

)​ 22 ಎಸೆತಗಳಲ್ಲೇ 5 ವಿಕೆಟ್​ ಗೊಂಚಲು ಸಾಧಿಸಿದರು. ದ. ಆಫ್ರಿಕಾದ ಡೇಲ್​ ಸ್ಟೆ$ನ್​ (439) ಅವರನ್ನು ಹಿಂದಿಕ್ಕಿದ ಸ್ಟಾರ್ಕ್​ (441) ಈಗ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಅಗ್ರ 10 ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ: 34 ಓವರ್​ಗಳಲ್ಲಿ 64 (ಮಾಮಿನುಲ್​ 9, ಮೆಹಿದಿ ಹಸನ್​ 11, ಶೋರಿುಲ್​ 14, ಸ್ಟಾರ್ಕ್​ 12ಕ್ಕೆ 6, ಕಮ್ಮಿನ್ಸ್​ 25ಕ್ಕೆ 3). ಆಸ್ಟ್ರೆಲಿಯಾ: 40 ಓವರ್​ಗಳಲ್ಲಿ 8 ವಿಕೆಟ್​ಗೆ 165 (ಹೆಡ್​ 22, ಲಬುಶೇನ್​ 4, ಸ್ಮಿತ್​ 42, ಗ್ರೀನ್​ 51*, ಲ್ಯಾನ್​ 10*, ಶೋರಿುಲ್​ 35ಕ್ಕೆ 6, ಟಸ್ಕಿನ್​ 41ಕ್ಕೆ 1).