ವಿನೀತ್ ಶತಕ ವ್ಯರ್ಥ; ಶ್ರೀಲಂಕಾದಲ್ಲಿ ಏಕದಿನ ಸರಣಿ ಸೋತ ಭಾರತದ ಕಿರಿಯರು
ಹಂಬಂತೋಟ: ವಿಕೆ ವಿನೀತ್ (131 ರನ್, 136 ಎಸೆತ, 13 ಬೌಂಡರಿ, 3 ಸಿಕ್ಸರ್) ಶತಕದ ಹೊರತಾಗಿಯೂ ಭಾರತ ತಂಡ 19 ವಯೋಮಿತಿ (Under 19) ಏಕದಿನ ಕ್ರಿಕೆಟ್ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 1 ವಿಕೆಟ್ನಿಂದ ವೀರೋಚಿತ ಸೋಲು ಅನುಭವಿಸಿದೆ. ಇದರಿಂದ ಭಾರತ 3 ಪಂದ್ಯಗಳ ಸರಣಿಯನ್ನು 1-2ರಿಂದ ಕೈಚೆಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ 8 ವಿಕೆಟ್ಗೆ 290 ರನ್ ಗಳಿಸಿತು. ಪ್ರತಿಯಾಗಿ ಲಂಕಾ 139 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿಗೆ ಸಿಲುಕಿತ್ತು. ಬಳಿಕ ಚಮಿಕಾ ಹೀನಟಿಗಲ (84*) ಹೋರಾಟದಿಂದ ಲಂಕಾ ಕೊನೇ ಎಸೆತದಲ್ಲಿ 9 ವಿಕೆಟ್ಗೆ 291 ರನ್ ಗಳಿಸಿ ಜಯಿಸಿತು. ಕೊನೇ 2 ಎಸೆತಗಳಲ್ಲಿ ಲಂಕಾಗೆ 7 ರನ್ ಬೇಕಿದ್ದಾಗ ಹೀನಟಿಗಲ ಸಿಕ್ಸರ್ ಮತ್ತು ಸಿಂಗಲ್ಸ್ ಕಸಿದರು.
ಭಾರತ: 8 ವಿಕೆಟ್ಗೆ 290 (ವಿಕೆ ವಿನೀತ್ 131, ಲಕ್ಷ$್ಯ 61, ಶವಿನ್ ವಿನೋದ್ 26, ಸೇನೆವಿರತ್ನೆ 41ಕ್ಕೆ 4, ಗಿಮ್ಹನ್ 63ಕ್ಕೆ 2), ಶ್ರೀಲಂಕಾ 9 ವಿಕೆಟ್ಗೆ 291 (ಮಹಾವಿಥನ 22, ವೆಕುನಗೋಡ 67, ಕವಿಜಾ 29, ವಿಥನಪಥಿರಣ 31, ಹೀನಟಿಗಲ 84, ಗಿಮ್ಹನ್ 23, ಶವಿನ್ 41ಕ್ಕೆ 3, ಅನ್ಮೋಲ್ಜೀತ್ 42ಕ್ಕೆ 4, ಮೋಹಿತ್ ಉಲ್ವಾ 66ಕ್ಕೆ 2).