SRHvsKKR  
ಕ್ರಿಕೆಟ್

SRH vs KKR: ಈಡನ್ ಗಾರ್ಡನ್ಸ್‌ನಲ್ಲಿ ಅಭಿಷೇಕ್, ಕ್ಲಾಸೆನ್ ಅಬ್ಬರ, ಕೋಲ್ಕತ್ತಾಗೆ 65 ರನ್‌ಗಳ ಹೀನಾಯ ಸೋಲು!

ಕೋಲ್ಕತ್ತಾ: ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 65 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕ್ಲಿನಿಕಲ್ ಪ್ರದರ್ಶನ ನೀಡಿದ ಹೈದರಾಬಾದ್, ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗೆದ್ದು ಬೀಗಿತು.

ಕ್ಲಾಸೆನ್-ರೆಡ್ಡಿ ಮಿಂಚು, ಹೈದರಾಬಾದ್ ಬೃಹತ್ ಮೊತ್ತ

ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್‌ಗೆ ಟ್ರಾವಿಸ್ ಹೆಡ್ (46 ರನ್, 21 ಎಸೆತ) ಮತ್ತು ಅಭಿಷೇಕ್ ಶರ್ಮಾ (48 ರನ್) ಸ್ಫೋಟಕ ಆರಂಭ ನೀಡಿದರು. ಮಧ್ಯದಲ್ಲಿ ದಿಢೀರ್ ಕುಸಿತ ಕಂಡು 118 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಆಸರೆಯಾಗಿದ್ದು ಹೆನ್ರಿಚ್ ಕ್ಲಾಸೆನ್. ಕೇವಲ 35 ಎಸೆತಗಳಲ್ಲಿ 52 ರನ್ ಸಿಡಿಸಿದ ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ ಅವರ ಜವಾಬ್ದಾರಿಯುತ ಆಟದಿಂದ ಹೈದರಾಬಾದ್ 226/8 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಲಕ್ಷ್ಯ ಬೆನ್ನಟ್ಟುವಲ್ಲಿ ಕೆಕೆಆರ್ ವಿಫಲ

227 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಪರ ಅಂಗ್ರಿಶ್ ರಘುವಂಶಿ (52) ಮತ್ತು ರಿಂಕು ಸಿಂಗ್ (35) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಕೆಕೆಆರ್ ಸತತ ವಿಕೆಟ್ ಕಳೆದುಕೊಂಡು ಕೇವಲ 161 ರನ್‌ಗಳಿಗೆ ಆಲೌಟ್ ಆಯಿತು(ಏಜೆನ್ಸೀಸ್​).