ಒತ್ತಡ ನಿವಾರಣೆಗೆ ಕ್ರೀಡೆ ಮುಖ್ಯ, ಎಲ್ಲರೂ ಸೇರಿ ಜೊತೆಯಾಗಿ ಆಡೋಣ: ಕೆ ವಿ ಪ್ರಭಾಕರ್  
ಕ್ರಿಕೆಟ್

ಒತ್ತಡ ನಿವಾರಣೆಗೆ ಕ್ರೀಡೆ ಮುಖ್ಯ, ಎಲ್ಲರೂ ಸೇರಿ ಜೊತೆಯಾಗಿ ಆಡೋಣ: ಕೆ ವಿ ಪ್ರಭಾಕರ್

ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆ ಆಯೋಜಿಸುತ್ತಿರುವ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಲೀಗ್ ಟೂರ್ನಿಯ ಟ್ರೋಫಿ, ಜರ್ಸಿಯನ್ನು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಿಕಟ ಪೂರ್ವ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಧ್ಯಮ ಮಿತ್ರರು ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಕ್ರಿಕೆಟ್ ಆಟದ ಮೂಲಕ ಅವರ ಒತ್ತಡಗಳನ್ನು ನಿವಾರಣೆ ಮಾಡಲು ಇದೊಂದು ವೇದಿಕೆಯಾಗಿದೆ. ಕ್ರಿಕೆಟ್ ಆಟದ ನೆಪದಲ್ಲಿ ಎಲ್ಲರೂ ಒಂದಾಗಿ ಕಲೆತು ಬೆರೆಯಲಿ ಅನ್ನೋದು ಟೂರ್ನಿಯ ಉದ್ದೇಶ. ಸೋಲು ಗೆಲುವು ಸಹಜ ಆಟದ ಸ್ಪೂರ್ತಿ ಮುಖ್ಯ ಅಂತ ಅವರು ಹೇಳಿದ್ರು.
ನಂತರ ಮಾತನಾಡಿದ ಮಾನ್ಯ ವಸತಿ ಸಚಿವ ಜಮೀರ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಈ ಟೂರ್ನಿ ಪರಿಕಲ್ಪನೆ ಹುಟ್ಟಿದ್ದು ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ, ಅಲ್ಲಿ ಚಿಗುರಿದ ಕನಸ್ಸನ್ನ ಸಾಕಾರಗೊಳಿಸಿದವರು ಸಚಿವರಾದ ಜಮೀರ್ ಅಹ್ಮದ್ ಸಾಹೇಬ್ರು. ಟೂರ್ನಿ ಬಗ್ಗೆ ಮಾತನಾಡಿದಾ ಕ್ಷಣ, ಆಯೋಜನೆ ಮಾಡಿ ನಾನು ನಿಮ್ಮೊಂದಿಗೆ ಸದಾ ಇರ್ತೇನೆ ಎಂದಿದ್ರು. ಹಿಂದೆ ನೈನ್ ಡ್ರೀಮ್ಸ್ ತಂಡ ಆಯೋಜನೆ ಮಾಡಿದ್ದ ಬ್ಯಾಡ್ಮಿಂಟನ್ ಟೂರ್ನಿ ಕ್ರೀಡಾ ಜಾತ್ರೆಯನ್ನ ಸೃಷ್ಟಿ ಮಾಡಿತ್ತು. ಈಗಲೂ ಅಂತಹುದ್ದೇ ವಾತಾವರಣ ನಿರ್ಮಾಣವಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ರು.
ಇದಕ್ಕೂ ಮುನ್ನ ನಡೆದ ಪತ್ರ ಕರ್ತ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 130 ಆಟಗಾರರು ಭಾಗಿಯಾಗಿದ್ದರು. ಈ ಪೈಕಿ 84 ಆಟಗಾರರನ್ನು ಜಿದ್ದಾಜಿದ್ದಿನ ಪೈಪೋಟಿಯಲ್ಲಿ 12 ತಂಡಗಳ ಮಾಲೀಕರು ಖರೀದಿ ಮಾಡಿದರು.
ಬಿ ಝೆಡ್ ಕಪ್ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 5 ಮತ್ತು 6ರಂದು ಬೆಂಗಳೂರಿನ ವೇಟರ್ನರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ.

9ಡ್ರೀಮ್ಸ್ ಹಾಗೂ ಸಿಎಂ ಕಪ್ ಟೀಂ ಸಂಘಟಿಸುತ್ತಿರುವ ಈ ಟೂರ್ನಿಯಲ್ಲಿ ಮಾಧ್ಯಮ ಮಿತ್ರರು, ಕಲಾವಿದರು, ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆಪ್ತ ಸಹಾಯಕರು ಆಡಲಿದ್ದಾರೆ.

ಸಮಾರಂಭದಲ್ಲಿ 9 ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್, ಹಿರಿಯ ಪತ್ರಕರ್ತರಾದ ಪೊನ್ನಪ್ಪ, ಜೋಸೆಫ್ ಹೂವರ್. ಚಲನಚಿತ್ರ ನಿರ್ಮಾಪಕರಾದ ಭಾ. ಮ. ಹರೀಶ್ ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
ತಂಡಗಳು ಹೀಗಿವೆ.
ವಿನಿಷಾ ವಾರಿಯರ್ಸ್, ಬಿಎಸ್ ಬುಲ್ಸ್, ಅರುಣ್ - ವಿನಯ ಸ್ಟ್ರೈಕರ್ಸ್, ಅರವಿಂದ್ ಅವೆಂಜೆರ್ಸ್, ಡಿವೈನ್ ವಂಡರ್ಸ್ ವಾರಿಯರ್ಸ್, ಬಿ ಝೆಡ್ ವಾರಿಯರ್ಸ್, ಪ್ರೊ ವಿನ್ ಪ್ರೈಡ್ಸ್, ಪ್ರತಿಧ್ವನಿ ಚಾಲೆಂಜರ್ಸ್, ಟೀಮ್ ಅಪ್ಪು, ಟೀಮ್ ಪರ್ವಮ್, ದೇವು ಬ್ಯಾಟಲರ್ಸ್ , ನಂದಿ ಬ್ಲಾಸ್ಟರ್ಸ್.