ಮತ್ತೆ ಒಂದಾಗಲಿದ್ದಾರೆ ಸ್ಮೃತಿ- ಪಲಾಶ್!? ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ ಮಾತಿದು...Smriti Mandhana
- ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
- ವಿಡಿಯೋವೊಂದು ವೈರಲ್ ಆಗಿದ್ದು ಈ ತಾರಾ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ
- ವಿಡಿಯೋದಲ್ಲಿ ಪಲಾಶ್ ಅವರ ಸಹೋದರಿ ಪಲಾಕ್ ಮುಚ್ಚಲ್ ಸ್ಮೃತಿ ತಂದೆಯ ಜತೆ ಕಾಣಿಸಿಕೊಂಡಿದ್ದಾರೆ
Smriti Mandhana : ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ತಾರಾ ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ಊಹಾಪೋಹಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣ ಇತ್ತೀಚೆಗೆ ವೈರಲ್ ಆಗುತ್ತಿರುವ ಒಂದು ವಿಡಿಯೋ.
ಹೌದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಲಾಶ್ ಮುಚ್ಚಲ್ ಅವರ ಸಹೋದರಿ ಪಲಾಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಅವರಿದ್ದಾರೆ. ಅಚ್ಚರಿ ಸಂಗತಿ ಏನೆಂದರೆ, ಅವರಿಬ್ಬರು ಸ್ಮೃತಿ ಮಂಧಾನ ಅವರ ತಂದೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಘಟನೆ ಮುಂಬೈನ ರೆಸ್ಟೋರೆಂಟ್ ಹೊರಗೆ ನಡೆದಿರುವಂತೆ ತೋರುತ್ತದೆ.
ವಿಡಿಯೋದಲ್ಲಿ, ಪಲಾಕ್ ಮುಚ್ಚಲ್ ಅವರು ಸ್ಮೃತಿಯ ತಂದೆಯಿಂದ ಆಶೀರ್ವಾದ ಪಡೆಯುವುದುನ್ನು ಕಾಣಬಹುದು. ಸ್ಮೃತಿ ತಂದೆ ಕೂಡ ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿದರೆ, ಎರಡು ಕುಟುಂಬಗಳ ನಡುವಿನ ಸಂಬಂಧಗಳು ಉತ್ತಮವಾಗಿವೆ ಎಂಬ ಅನಿಸಿಕೆಯನ್ನು ನೀಡುತ್ತದೆ. ಹೀಗಾಗಿ, ನೆಟ್ಟಿಗರು ಮತ್ತೆ ಸ್ಮೃತಿ ಮತ್ತು ಪಲಾಶ್ ಒಂದಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಾಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.
ಅಂದಹಾಗೆ, ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ನವೆಂಬರ್ 23ರಂದು ಸ್ಮೃತಿ ಅವರ ಮದುವೆ ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ನಡೆಯಬೇಕಿತ್ತು. ಸಿನಿಮಾ ಕತೆಯಲ್ಲಿ ಬರುವ ಟ್ವಿಸ್ಟ್ನಂತೆ ಮದುವೆಗೂ ಕೆಲ ಗಂಟೆಗಳ ಮುನ್ನ ಅನಿರೀಕ್ಷಿತವಾಗಿ ವಿವಾಹವನ್ನು ಮುಂದೂಡಲಾಯಿತು. ಸುಮಾರು ಎರಡು ವಾರಗಳ ಬಳಿಕ ವಿವಾಹ ರದ್ದಾಗಿರುವುದಾಗಿ ಸ್ವತಃ ಸ್ಮೃತಿ ಹಾಗೂ ಪಲಾಶ್ ಅಧಿಕೃತವಾಗಿ ತಿಳಿಸಿದರು. ಪಲಾಶ್ ಮುಚ್ಚಲ್ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಬೆಳಕಿಗೆ ಬಂದ ನಂತರ ಮದುವೆಯನ್ನು ರದ್ದುಗೊಳಿಸಲಾಯಿತು ಎಂಬ ವರದಿಗಳು ಬಂದವು. ಆದಾಗ್ಯೂ, ಪಲಾಶ್ ಅವರು ಕಾಲಕಾಲಕ್ಕೆ ಈ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದೊಂದಿಗೆ ಇಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಿವೆ.
ಕೆಲವು ಅಭಿಮಾನಿಗಳು ತಾರಾ ಜೋಡಿ ಮತ್ತೆ ಒಂದಾಗಲಿ ಎಂದು ಆಶಿಸುತ್ತಿದ್ದರೆ, ಇತರರು ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಿದ್ದಾರೆ. ಆದಾಗ್ಯೂ, ಈ ವಿಡಿಯೋ ಹಳೆಯದೋ ಅಥವಾ ಹೊಸದೋ ಎಂದು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದಾಗ್ಯೂ, ಇದು ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ, (ಏಜೆನ್ಸೀಸ್).