ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಸೂಪರ್-8 ಪಂದ್ಯ
- ಪಲ್ಲೆಕಲೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ-ಪಾಕಿಸ್ತಾನ ನಿರ್ಣಾಯಕ ಸೂಪರ್-8 ಪಂದ್ಯ
- ಕಡೆಗೂ ಕಮರಿ ಹೋಯ್ತು ಪಾಕ್ ಸೆಮೀಸ್ ಕನಸು
- 147 ರನ್ ತಲುಪಿದ ಶ್ರೀಲಂಕಾ, ತಲೆಕೆಳಗಾಯಿತು ಪಾಕಿಸ್ತಾನ ಲೆಕ್ಕಾಚಾರ
ಈ ಕುತೂಹಲಕಾರಿ ಪಂದ್ಯದಲ್ಲಿ ಪಾಕ್ಗೆ ಗೆಲುವಿಗೆ ಪವಾಡವೇ ನಡೆಯಬೇಕಿತ್ತು. ಇದು ಬಹುತೇಕ ಅನುಮಾನವೇ ಎಂದು ಕ್ರಿಕೆಟ್ ಪ್ರಿಯರು ಮೊದಲೇ ಭವಿಷ್ಯ ನುಡಿದಿದ್ದರು. ಈ ಬಗ್ಗೆ ಪಾಕ್ ದೊಡ್ಡ ಲೆಕ್ಕಾಚಾರವನ್ನೇ ಹಾಕಿಕೊಂಡಿತ್ತು. ಆದರೆ, ಈ ಎಲ್ಲಾ ಕಾಲ್ಯುಕ್ಯೂಲೇಷನ್ ಅನ್ನು ಶ್ರೀಲಂಕಾ ತಲೆಕೆಳಗಾಗಿಸಿದ್ದು ಕ್ರಿಕೆಟ್ ಪ್ರಿಯರ ಮಾತನ್ನು ಕಡೆಗೂ ಈಡೇರಿಸಿತು.
ಈ ನಿಟ್ಟಿನಲ್ಲಿ, ನ್ಯೂಜಿಲೆಂಡ್ ಈಗ ಸೆಮಿಫೈನಲ್ಗೆ ಅಧಿಕೃತವಾಗಿ ಪ್ರವೇಶಿಸಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದಲ್ಲದೇ, ತನ್ನೊಂದಿಗೆ ತವರಿಗೆ ಕರೆದೊಯ್ಯುತ್ತಿರುವ ಶ್ರೀಲಂಕಾ ತಂಡಕ್ಕೆ ಇಡೀ ಭಾರತೀಯ ಕ್ರಿಕೆಟ್ ಪ್ರೇಮಿಗಳು ಧನ್ಯವಾದಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಪಾಕ್ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಿದ ಪಾಕಿಸ್ತಾನ, 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಆರಂಭಿಕ ಹಂತದಲ್ಲೇ ಬಹುಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿತು. ಇದು ಪಾಕ್ ಸೆಮೀಸ್ ಕನಸನ್ನು ಜೀವಂತವಾಗಿರಿಸಿತು. ಆದರೆ, ಲೆಕ್ಕಾಚಾರದ ಪ್ರಕಾರ, 147 ರನ್ ತಲುಪದಂತೆ ಶ್ರೀಲಂಕಾ ಪಡೆಯನ್ನು ಕಟ್ಟಿಹಾಕುವಲ್ಲಿ ಎಡವಿದ ಪಾಕ್ ಇದೀಗ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.