RR vs GT ಪಂದ್ಯ 
ಕ್ರಿಕೆಟ್

4,6,4... ಗಿಲ್​, ಸಾಯಿ ಆಕರ್ಷಕ ಅರ್ಧಶತಕ! ರಾಜಸ್ಥಾನ ರಾಯಲ್ಸ್​ಗೆ 230 ರನ್​ಗಳ ಬೃಹತ್​ ಗುರಿ | RR vs GT

RR vs GT: ಸವಾಯಿ ಮಾನ್​ಸಿಂಗ್​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್​ ಮತ್ತು ಗುಜರಾತ್​ ಟೈಟನ್ಸ್ ನಡುವಿನ 19ನೇ ಆವೃತ್ತಿಯ ಐಪಿಎಲ್​ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಆರ್​, ಶುಭಮನ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಜಿಟಿ ಆರಂಭಿಕರಾದ ನಾಯಕ ಗಿಲ್ (84 ರನ್​, 44 ಎಸೆತ)​ ಮತ್ತು ಸಾಯಿ ಸುದರ್ಶನ್​ (55 ರನ್​, 36 ಎಸೆತ) ಅವರ ಸ್ಫೋಟಕ ಇನ್ನಿಂಗ್ಸ್​ ಪವರ್​ಪ್ಲೇಯಲ್ಲಿ ಹೆಚ್ಚುವರಿ ರನ್​ಗಳನ್ನು ತಂದುಕೊಟ್ಟಿತು. ಇವರಿಬ್ಬರ ರನ್​ ಕೊಡುಗೆಯಿಂದ ತಂಡದ ಒಟ್ಟು ಮೊತ್ತ 200ರ ಗಡಿದಾಟಿತು.
ಗಿಲ್​, ಸಾಯಿ ನಂತರದಲ್ಲಿ ಕ್ರೀಸ್​ಗೆ ಬಂದ ಜಾಸ್​ ಬಟ್ಲರ್​ (13), ವಾಷಿಂಗ್ಟನ್​ ಸುಂದರ್​ (ಅಜೇಯ 37), ಜೇಸನ್​ ಹೋಲ್ಡರ್​ (7) ಮತ್ತು ರಾಹುಲ್​ ತೇವಾಟಿಯ (ಅಜೇಯ 14) ಅವರಿಂದ ಅಂತಹ ಪ್ರದರ್ಶನವೇನು ಬರಲಿಲ್ಲ. ಒಟ್ಟಾರೆ, 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 229 ರನ್​ ಗಳಿಸುವಲ್ಲಿ ಜಿಟಿ ಯಶಸ್ವಿಯಾಗಿದೆ.
ಇನ್ನು ರಾಜಸ್ಥಾನ ಪರ ಬೌಲರ್​ಗಳು ಮತ್ತು ಫೀಲ್ಡರ್​ಗಳು ಕಮಾಲ್​ ಮಾಡುವಲ್ಲಿ ಬಿಗ್ ಮಿಸ್ಟೇಕ್​ ಮಾಡಿದರು. ಕೈಗೆ ಸಿಕ್ಕ ಕ್ಯಾಚ್​ಗಳನ್ನು ಡ್ರಾಪ್​ ಮಾಡುವ ಮೂಲಕ ಜಿಟಿ ಬ್ಯಾಟರ್​ಗಳಿಗೆ ಹೆಚ್ಚು ರನ್​ ಗಳಿಸಲು ಅವಕಾಶ ನೀಡಿದರು. ಈಗ 230 ರನ್​ಗಳ ಬೃಹತ್​ ಗುರಿಯನ್ನು ಹೇಗೆ ಚೇಸ್​ ಮಾಡಲಿದ್ದಾರೆ? ವೈಭವ್ ಸೂರ್ಯವಂಶಿಯಿಂದ ಸ್ಫೋಟಕ ಶತಕ ಬರಲಿದೆಯೇ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ನೋಡಬೇಕಿದೆ.