ಶುಭಮಾನ್ ಗಿಲ್ ಮತ್ತು ರಶ್ಮಿಕಾ ಮಂದಣ್ಣ
- ಇತ್ತೀಚೆಗೆ ಶುಭಮಾನ್ ಗಿಲ್ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಂಡಿದ್ದಾರೆ
- ಗಿಲ್ ಜತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಸುಖಾಸುಮ್ಮನೆ ಹರಿಬಿಟ್ಟಿದ್ದಾರೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಡೇಟಿಂಗ್ ವದಂತಿಯನ್ನು ಹರಿಬಿಡಲಾಗಿದೆ
Shubman Gill-Rashmika Mandanna : ಸದ್ಯ ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಮೆಂಟ್ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪಂದ್ಯಗಳ ರೋಚಕತೆ ಹೆಚ್ಚಾಗುತ್ತಿದೆ. ಈ ಮೆಗಾ ಟೂರ್ನಮೆಂಟ್ನಲ್ಲಿ ಆತಿಥೇಯ ಟೀಮ್ ಇಂಡಿಯಾ, ಈಗಾಗಲೇ ಒಂದು ಪಂದ್ಯವನ್ನು ಗೆದ್ದಿದ್ದು, ನಾಳೆ ಇನ್ನೊಂದು ಪಂದ್ಯ ಆಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಪ್ರತಿಷ್ಠಿತ ಟೂರ್ನಿಯಿಂದ ದೂರ ಉಳಿದಿರುವ ಗಿಲ್, ನಾಯಕಿಯೊಬ್ಬರ ಜತೆ ಕಾಣಿಸಿಕೊಳ್ಳುವ ಮೂಲಕ ಇದೀಗ ಭಾರಿ ಸುದ್ದಿಯಾಗಿದ್ದಾರೆ.
ಹೌದು, ಇತ್ತೀಚೆಗೆ ಗಿಲ್ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಂಗತಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಗಿಲ್ ಜತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಸುಖಾಸುಮ್ಮನೆ ಹರಿಬಿಟ್ಟಿದ್ದಾರೆ. ಆದರೆ, ಅದರಲ್ಲಿ ಯಾವುದೇ ಸತ್ಯವಿಲ್ಲ. ಏಕೆಂದರೆ, ರಶ್ಮಿಕಾ ಮತ್ತು ಗಿಲ್ ಒಟ್ಟಿಗೆ ಜಾಹೀತಾರು ಶೂಟಿಂಗ್ ಒಂದರಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಶೂಟ್ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಡೇಟಿಂಗ್ ವದಂತಿಯನ್ನು ಹರಿಬಿಡಲಾಗಿದೆ.
ರಶ್ಮಿಕಾ ಮತ್ತು ಗಿಲ್ ಒಂದೇ ಸ್ಥಳದಲ್ಲಿ ಶೂಟ್ ಮಾಡಿದ್ದಾರೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ಲಿಯೂ ರಶ್ಮಿಕಾ ಜತೆ ಗಿಲ್ ಇಲ್ಲ. ಹೀಗಾಗಿ, ಗಿಲ್ ಎಲ್ಲಿದ್ದಾರೆ ಎಂದು ರಶ್ಮಿಕಾರನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಗಿಲ್ ಜತೆ ನಿಮಗೇನು ಕೆಲಸ? ಡೇಟಿಂಗ್ ಮಾಡುತ್ತಿದ್ದೀರಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಜಯ್ ದೇವರಕೊಂಡರನ್ನು ಟ್ರೋಲ್ ಮಾಡುತ್ತಿದ್ದಾರೆ.
ಅಂದಹಾಗೆ, ಟಾಲಿವುಡ್ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಈಗಾಗಲೇ ಅವರಿಬ್ಬರ ನಿಶ್ಚಿತಾರ್ಥ ನಡೆದಿದೆ. ಕಳೆದ ವರ್ಷ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದೀಪಾವಳಿಯಂದು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಗಳು ಬಂದವು. ಈ ಇಬ್ಬರ ವಿವಾಹವೂ ಫೆಬ್ರವರಿ 26 ರಂದು ನಡೆಯಲಿದೆ. ರಶ್ಮಿಕಾ ಮತ್ತು ವಿಜಯ್ ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇದೆ.
ವಿವಾಹದ ಸುದ್ದಿಯ ನಡುವೆ ರಶ್ಮಿಕಾ ಮಂದಣ್ಣ ಟೀಮ್ ಇಂಡಿಯಾ ಕ್ರಿಕೆಟಿಗ ಗಿಲ್ ಜೊತೆ ಕಾಣಿಸಿಕೊಂಡಿರುವುದು ಇದೀಗ ಬಿಸಿ ವಿಷಯವಾಗಿದೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ವಿಜಯ್ ದೇವರಕೊಂಡ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದಾಗ್ಯೂ, ವಿಜಯ್ ಅವರ ಅಭಿಮಾನಿಗಳು ಗಿಲ್ ಮತ್ತು ರಶ್ಮಿಕಾ ಕೇವಲ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ ಎಂದು ಸ್ಪಷ್ಟಪಡಿಸುತ್ತಿದ್ದಾರೆ, (ಏಜೆನ್ಸೀಸ್).