ಪಶ್ಚಿಮ ಬಂಗಾಳ: ಕುತ್ತಿಗೆ ನೋವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ದಿಢೀರ್ ಹೊರನಡೆದ ಕ್ಯಾಪ್ಟನ್ ಶುಭಮನ್ ಗಿಲ್, ಇದೀಗ ಗುವಾಹಟಿಯಲ್ಲಿ ನಡೆಯುವ ಎರಡನೇ ಪಂದ್ಯದಿಂದ ಕೂಡ ದೂರ ಉಳಿಯಲಿದ್ದಾರೆ ಎಂದು ಗುರುವಾರ ವರದಿಯಾಗಿದೆ.
ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಗಿಲ್ ಕುತ್ತಿಗೆಗೆ ಗಾಯವಾದ ನಂತರ ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಡಿಚಾರ್ಚ್ ಮಾಡಲಾಯಿತು. ಅವರು ಪ್ರಾಯೋಗಿಕವಾಗಿ ಫಿಟ್ ಆಗಿರಬಹುದು. ಆದರೆ, ಕಠಿಣ ಅಭ್ಯಾಸದಿಂದ ಸಮಸ್ಯೆಯನ್ನು ಮತ್ತೆ ಉಲ್ಬಣಗೊಳಿಸಬಹುದು. ಹೀಗಾಗಿ, ಎರಡನೇ ಪಂದ್ಯದಿಂದ ದೂರ ಉಳಿಯಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಗಿಲ್ ಬದಲಾಗಿ ಸಾಯಿ ಸುದರ್ಶನ್
ಶುಭಮನ್ ಗಿಲ್ ಅವರ ಸ್ಥಾನದಲ್ಲಿ 24 ವರ್ಷದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ತಂಡದ ಭಾಗವಾಗಲಿದ್ದಾರೆ.
ಜೂನ್‌ನಲ್ಲಿ ಇಂಗ್ಲೆಂಡ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್, ಇಲ್ಲಿಯವರೆಗೆ ಐದು ಟೆಸ್ಟ್‌ಗಳನ್ನು ಆಡಿದ್ದಾರೆ. 30.33 ರ ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ ಅವರ ಕೊನೆಯ ಪಂದ್ಯವು ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದಿತ್ತು. ಅಲ್ಲಿ ಅವರು 39 ಮತ್ತು 87 ರನ್ ಗಳಿಸಿದ್ದರು. ಸಾಯಿ ಸುದರ್ಶನ್ ದಕ್ಷಿಣ ಆಫ್ರಿಕಾ ಸರಣಿಗೆ ತಂಡದ ಭಾಗವಾಗಿದ್ದಾರೆ. ಆದರೆ, ಮೊದಲ ಟೆಸ್ಟ್ ಆಡಿಲ್ಲ (ಏಜೆನ್ಸೀಸ್).