ಏಕದಿನ ತಂಡದ ನಾಯಕ ಶುಭಮನ್​ ಗಿಲ್​ 
ಕ್ರಿಕೆಟ್

ಟಿ20 ವಿಶ್ವಕಪ್​ನಲ್ಲಿ ಸ್ಥಾನವಿಲ್ಲ ಏಕೆ? ಮೂರೇ ಪದಗಳಲ್ಲಿ ಬಿಸಿಸಿಐ ಆಯ್ಕೆ ಕುರಿತು ಮೌನಮುರಿದ ಕ್ಯಾಪ್ಟನ್​​ ಗಿಲ್​ | Shubman Gill

ಪ್ರಮುಖ ಮುಖ್ಯಾಂಶಗಳು

  • 2026ರ ಟಿ20 ವಿಶ್ವಕಪ್‌ ತಂಡದಲ್ಲಿ ಇಲ್ಲ ಸ್ಥಾನ
  • ಕೊನೆಗೂ ಈ ಬಗ್ಗೆ ಪ್ರತಿಕ್ರಿಯಿಸಿದ ಏಕದಿನ ತಂಡದ ನಾಯಕ
  • ಬಿಸಿಸಿಐ ಆಯ್ಕೆಗಾರರ ನಿರ್ಧಾರ ಕುರಿತು ಗಿಲ್​ ಪ್ರತಿಕ್ರಿಯೆ
ನವದೆಹಲಿ: ನಾಳೆ (ಜ.11) ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಈ ಪಂದ್ಯಗಳಿಗೆ ಭಾರತ ತಂಡ ಸನ್ನದ್ಧವಾಗಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾಗೆ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರ ಸೇರ್ಪಡೆ ಇನ್ನಷ್ಟು ಬಲ ನೀಡಿದೆ. ಏಕದಿನ ಸರಣಿಗೂ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿದ ಮಾತನಾಡಿದ ಗಿಲ್​, ತಮ್ಮನ್ನು ಟಿ20 ವಿಶ್ವಕಪ್​ ಟೂರ್ನಿಯಿಂದ ಕೈಬಿಟ್ಟ ವಿಚಾರಕ್ಕೆ ಕಡೆಗೂ ಪ್ರತಿಕ್ರಿಯಿಸಿದ್ದಾರೆ. 

ಗಿಲ್​ ಮಾತು

"ನಾನು ಆಯ್ಕೆಗಾರರ ನಿರ್ಧಾರವನ್ನು ಗೌರವಿಸುವೆ. ಟಿ20 ವಿಶ್ವಕಪ್‌ಗೆ ಆಯ್ಕೆಯಾದ ತಂಡಕ್ಕೆ ನನ್ನ ಶುಭಾಶಯಗಳು. ನಾನೆಲ್ಲಿರಬೇಕೋ ಅಲ್ಲಿದ್ದೀನಿ. ನನ್ನ ಹಣೆಯ ಮೇಲೆ ಏನಾಗಬೇಕು ಎಂದು ಬರೆದಿದೆಯೋ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬ ಆಟಗಾರನು ಸದಾ ದೇಶಕ್ಕಾಗಿ ಆಡಲು ಮತ್ತು ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತಾನೆ. ಇಲ್ಲಿ ಅಂತಿಮ ನಿರ್ಧಾರ ಆಯ್ಕೆಗಾರರ ಕೈಯಲ್ಲಿರುತ್ತದೆ" ಎಂದರು.

ಏಕದಿನ ಸರಣಿಗೆ ಟೀಮ್ ಇಂಡಿಯಾ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್​ ಕೀಪರ್​), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್), ನಿತೀಶ್ ಕುಮಾರ್​ ರೆಡ್ಡಿ, ಅರ್ಷದೀಪ್​ ಸಿಂಗ್​, ಯಶಸ್ವಿ ಜೈಸ್ವಾಲ್​. 

ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ - ಜ.11 (ವಡೋದರಾ)
ಎರಡನೇ ಏಕದಿನ - ಜ.14 (ರಾಜ್‌ಕೋಟ್)
ಮೂರನೇ ಏಕದಿನ - ಜ18 (ಇಂದೋರ್)