ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್
- ಮುಕ್ತಾಯದ ಹಂತಕ್ಕೆ ಬಂದ ಐಪಿಎಲ್
- ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್ ಗೆ ಟ್ರೋಲಿಂಗ್
- ಸೋಷಿಯಲ್ ಮೀಡಿಯಾನಲ್ಲಿ ಅಯ್ಯರ್ ಕುಟುಂಬದವರಿಗೆ ಜೀವ ಬೆದರಿಕೆ
ವೈರಲ್: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್ ಹಬ್ಬವಾದ ಐಪಿಎಲ್ 2026 ಮುಕ್ತಾಯವಾಗಲಿದ್ದಯ, ಫೈನಲ್ ಪ್ರವೇಶಿಸಿರುವ ಆರ್ಸಿಬಿ ವಿರುದ್ಧ ಯಾರು ಆಡಲಿದ್ದಾರೆ ಎಂದು ಶುಕ್ರವಾರ (ಮೇ.29) ರಂದು ತಿಳಿಯಲಿದೆ.
ವರ್ಷದಲ್ಲಿ ಎರಡು ತಿಂಗಳುಗಳ ಕಾಲ ಇರುವ ಈ ಕ್ರೀಡಾಕೂಟವನ್ನು ನಮ್ಮ ಜನ ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವುದು ತಿಳಿದಿರುವ ವಿಷಯವೇ ಆಗಿದೆ. ಆದರೆ ಇತ್ತೀಚೆಗೆ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್ (Shreyas Iyer Sister Shrestha Iyer) ಹಂಚಿಕೊಂಡಿರುವ ವಿಡಿಯೋ ಕ್ರಿಕೆಟ್ ಫ್ಯಾನ್ಸ್ ಮೇಲೆ ಕುಪಿತರಾಗುವಂತೆ ಮಾಡಿದೆ.
ನಮಗೆ ದಿನನಿತ್ಯ ಬೆದರಿಕೆ ಕರೆ ಬರುತ್ತದೆ!
ಈ ಭಾರಿಯ ಐಪಿಎಲ್ನ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಮಧ್ಯದಲ್ಲಿ ನಿರಂತರ ಸೋಲನ್ನು ಕಂಡ ಪರಿಣಾಮ ಕ್ವಾಲಿಫೈವ್ ಆಗುವಲ್ಲಿ ವಿಫಲವಾಯಿತು.
ಆದರೆ ಅವರ ತಂಡದ ಸೋಲನ್ನು ಸಂಭ್ರಮಿಸಿದ ವಿಕೃತ ಅಭಿಮಾನಿಗಳು ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್ ಹಾಗೂ ಅವರ ಕುಟುಂಬ ವರ್ಗದವರಿಗೆ ಬೆದರಿಕೆ ಹಾಗೂ ಅವಾಚ್ಯ ಬೈಗುಳಗಳನ್ನು ಬಳಸಿದ್ದಾರೆ ಎಂದು ಶ್ರೇಷ್ಠಾ ವಿಡಿಯೋ ಮೂಲಕ ಹಂಚಿ ಕೊಂಡಿದ್ದಾಳೆ.
ಶ್ರೇಷ್ಠಾಳ ವಿಡಿಯೋನಲ್ಲಿ ಏನಿದೆ?
ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಅಯ್ಯರ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾನು ನನ್ನ ಸಹೋದರ ಪ್ರತಿನಿಧಿಸುವ ತಂಡವಾದ ಪಂಜಾಬ್ ಕಿಂಗ್ಸ್ ತಂಡಕ್ಕೆ ನನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದೆ, ಸೋಷಿಯಲ್ ಮೀಡಿಯಾನಲ್ಲಿ ಪೋಸ್ಟ್ಗಳನ್ನು ಶೇರ್ ಮಾಡುತ್ತಿದೆ.
ಆದರೆ ಯಾವಾಗ ಪಂಜಾಬ್ ತಂಡ ಕ್ವಾಲಿಫೈವ್ ಆಗಿಲ್ಲವೋ ಆಗ ಕೆಲ ವಿಕೃತ ಕ್ರೀಡಾಭಿಮಾನಿಗಳು ನನಗೆ ಹಾಗೂ ನನ್ನ ಕುಟುಂಬದವರಿಗೆ ಬೇಕಾಬಿಟ್ಟಿ ಬೈಯುತ್ತಾ, ಬೆದರಿಕೆ ಹಾಕುತ್ತಿದ್ದಾರೆ. ಆದರೆ ನನಗೆ ಇತರೆ ಯಾವುದೇ ಕ್ರಿಕೆಟ್ ಆಟಗಾರರ ಮೇಲೆ ಅಸೂಹೆಯಿಲ್ಲ, ಅವರೆಲ್ಲಾ ನನ್ನ ಅಣ್ಣನ ರೀತಿಯಲ್ಲಿದ್ದಾರೆ.
ಅದರೆ ಕೆಲ ಕ್ರಿಕೆಟರ್ಗಳ ಅಭಿಮಾನಿ ಎಂದು ಹೇಳಿಕೊಂಡು ನನ್ನ ತೆಜೋವಧೆ ಮಾಡುತ್ತಿದ್ದಾರೆ. ಆದರೆ ಇವರೆಲ್ಲಾ ನಿಜವಾಗಿಯೂ ಕ್ರಿಕೆಟ್ ಅಭಿಮಾನಿಗಳಲ್ಲ, ಬದಲಿಗೆ ನಿರುದ್ಯೋಗಿ ವಿಕೃತ ಹೃದಯಗಳು ಎಂದು ಶ್ರೇಷ್ಠಾ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ನನ್ನ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಅವಾಚ್ಯ ಕಮೆಂಟ್ ಮಾಡುವುದು, ನನ್ನ ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಹೇಳುವುದು ಮತ್ತು ನಾನು ಡಾನ್ಸ್ ಹೇಳಿಕೊಡುವ ವಿದ್ಯಾರ್ಥಿಗಳಿಗೂ ನೀವು ತೊಂದರೆ ನೀಡಿದ್ದಿರಿ ಎಂದು ಶ್ರೇಷ್ಠಾ ವಿಡಿಯೋನಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ, (ಏಜನ್ಸೀಸ್).