ನಟಿ ಪ್ರೀತಿ ಜಿಂಟಾ ಜೊತೆಗಿನ ಡೇಟಿಂಗ್ ವದಂತಿಗೆ ಬ್ರೆಟ್ ಲೀ ಸ್ಪಷ್ಟನೆ
- ನಟಿ ಪ್ರೀತಿ ಜಿಂಟಾ ಜೊತೆಗಿನ ಡೇಟಿಂಗ್ ವದಂತಿ
- ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ನೀಡಿದ ಸ್ಪಷ್ಟನೆ ಏನು?
- ಅವಳು ನನ್ನ ನೆಚ್ಚಿನ ಗೆಳತಿ; ನಾನು ಅವಳನ್ನು ಡೇಟ್ ಮಾಡಿಲ್ಲ
ಮುಂಬೈ: ಕಳೆದ ಹಲವು ವರ್ಷ, ಅಂದರೆ ಹೆಚ್ಚು ಕಡಿಮೆ ಒಂದು ದಶಕಗಳಿಂದ ಕೇಳಿರುತ್ತಿದ್ದ ಡೇಟಿಂಗ್ ವದಂತಿ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಬ್ರೆಟ್ ಲೀ ಕೊನೆಗೂ ಮೌನ ಮುರಿದಿದ್ದಾರೆ.
ಹೌದು, ಕಳೆದ ಹಲವಾರುವ ವರ್ಷಗಳಿಂದ ಬ್ರೆಟ್ ಲೀ (Brett Lee on Preity Zinta) ಮತ್ತು ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದವು. ನಂತರದ ದಿನಗಳಲ್ಲಿ ಇಬ್ಬರೂ ಬೇರೆಯವರನ್ನು ಮದುವೆಯಾಗಿ ಇದು ಕೇವಲ ವದಂತಿ ಮಾತ್ರ ಎಂದು ಸ್ಪಷ್ಟ ಪಡಿಸಿದ್ದರೂ ಕೂಡ, ಈಗ ಈ ಬಗ್ಗೆ ಲೀ ಮನಬಿಚ್ಚಿ ಮಾತನಾಡಿದ್ದಾರೆ.
ಆಕೆ ನನ್ನ ನೆಚ್ಚಿನ ಗೆಳತಿ!
ಇತ್ತೀಗೆಚೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ವೇಗಿ, ನಾನು ಯಾವುದೇ ಬಾಲಿವುಡ್ ನಟಿಯನ್ನು ಡೇಟ್ ಮಾಡಿಲ್ಲ ಎಂದು ಹೇಳಿದ್ದಾರೆ.
ಹಾಗೂ ಪ್ರೀತಿ ಜಿಂಟಾ ಬಗ್ಗೆ ಮಾತನಾಡಿದ ಅವರು, ನಾನು ಮತ್ತು ಪ್ರೀತಿ ಅಂದು, ಇಂದು, ಎಂದೆಂದೂ ಅತ್ಯುತ್ತಮ ಗೆಳೆಯರಾಗಿರುತ್ತೇವೆ. ಅವಳು ಆ ಸಮಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಲೇಡಿ ಬಾಸ್ ಆಗಿದ್ದಳು. ಆಕೆ ನನ್ನ ನೆಚ್ಚಿನ ಗೆಳತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.
ಆದರೆ ನಾನು ಅವಳನ್ನು ಡೇಟ್ ಮಾಡುತ್ತಿದ್ದೆನೆ ಎಂಬ ಸುದ್ದಿಗಳು ನನ್ನ ಕಿವಿಯನ್ನು ತಲುಪುತ್ತಿದ್ದವು. ಆದರೆ ನಮ್ಮಿಬ್ಬರಿಗೂ ಸತ್ಯ ಏನೆಂದು ತಿಳಿದಿತ್ತು, ಹೀಗಾಗಿ ಈ ವಿಚಾರ ನನ್ನ ಕ್ರೀಡಾ ಜೀವನಕ್ಕೆ ಯಾವುದೇ ಅಡೆತಡೆಯಾಗಿ ಪರಿಣಮಿಸಲಿಲ್ಲ ಎಂದು ಲೀ ಹೇಳಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ 'ವದಂತಿ ಜೋಡಿ'
ಈ ಎಲ್ಲಾ ವದಂರಿಗಳ ನಡುವೆ ಬ್ರೆಟ್ ಲೀ 2006 ರಲ್ಲಿ ಮದುವೆಯಾಗಿ, 2009 ರಲ್ಲಿ ವಿಚ್ಛೇದನವನ್ನು ಪಡೆದು ಮತ್ತೆ 2014 ರಲ್ಲಿ ಎರಡನೇ ಮದುವೆಯಾಗಿದ್ದಾರೆ. ಅಂತಯೇ ಬ್ರೆಟ್ ಲೀ ಗೆ ಇಬ್ಬರು ಮಕ್ಕಳಿದ್ದಾರೆ.
ಬ್ರೆಟ್ ಲೀ ಮದುವೆಯಾದ ನಂತರ ಪ್ರೀತಿ ಜಿಂಟಾ ಪಂಜಾಬ್ ತಂಡದ ಮಾಲೀಕ ನೆಸ್ ವಾಡೀಯಾ ಅವರ ಜೊತೆ ಸಂಬಂಧ ಹೊಂದಿದ್ದಾರೆಂದು ಇನ್ನೊಂದು ವದಂತಿ ಹರಿದಾಡಲು ಶುರುವಾಗಿತ್ತು. ಆದರೆ ಜಿಂಟಾ 2016 ರಲ್ಲಿ ಜೀನ್ ಗುಡೆನಫ್ ಎಂಬಾತನನ್ನು ಮದುವೆಯಾಗಿ ಅವಳಿ ಮಕ್ಕಳನ್ನು ಪಡೆದಿದ್ದಾರೆ,
(ಏಜನ್ಸೀಸ್).