ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ ( Shahid Afridi )
- ಟಿ20 ವಿಶ್ವಕಪ್ನಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಕ್ರಿಕೆಟ್ ಶಿಶು ಜಿಂಬಾಬ್ವೆ
- ಜಿಂಬಾಬ್ವೆ ಎದುರು ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳಿಗೆ ಸೋಲು
- ಸೂಪರ್ 8ರ ಹಂತವನ್ನು ತಲುಪಿರುವ ಟೀಮ್ ಇಂಡಿಯಾ ವಿರುದ್ಧ ನಾಲಿಗೆ ಹರಿಬಿಟ್ಟ ಅಫ್ರಿದಿ
Shahid Afridi : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್-2026ರ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಜಿಂಬಾಬ್ವೆ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳನ್ನು ಸೋಲಿಸುವ ಮೂಲಕ ಜಿಂಬಾಬ್ವೆ ಈಗಾಗಲೇ ಸೂಪರ್ 8 ಹಂತವನ್ನು ಪ್ರವೇಶಿಸಿದೆ. ನಿನ್ನೆಯಷ್ಟೇ ಲೀಗ್ ಹಂತ ಮುಗಿದಿದ್ದು, ಇದೀಗ ಸೂಪರ್ 8ಗೆ ವೇದಿಕೆ ಸಜ್ಜಾಗಿದೆ.
ಜಿಂಬಾಬ್ವೆ ತಂಡ ಭಾರತದ ವಿರುದ್ಧವೂ ಪಂದ್ಯವನ್ನು ಆಡಲಿದೆ. ಭಾರತ ಮತ್ತು ಜಿಂಬಾಬ್ವೆ ನಡುವೆ ಫೆಬ್ರವರಿ 26 ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ತಮ್ಮ ಮಿತಿಯನ್ನು ಮೀರಿ ಮಾತನಾಡಿದ್ದಾರೆ. ಟೀಮ್ ಇಂಡಿಯಾ, ಸೂಪರ್ 8ರ ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಸೋಲಲು ರೆಡಿಯಾಗಿರಬೇಕು ಎಂಬ ಸೊಕ್ಕಿನ ಮಾತುಗಳಾಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಆಟಗಾರರು ಪದೇಪದೆ ಟೀಮ್ ಇಂಡಿಯಾವನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಾಜಿ ಕ್ರಿಕೆಟಿಗರು ಯಾವುದೋ ಕಾರಣಕ್ಕಾಗಿ ಭಾರತವನ್ನು ದೂಷಿಸುತ್ತಿದ್ದಾರೆ. ಇದೀಗ ಸೂಪರ್ 8ರ ಹಂತವನ್ನು ತಲುಪಿರುವ ಟೀಮ್ ಇಂಡಿಯಾ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ.
ಸೂಪರ್ 8ರ ಭಾಗವಾಗಿ ಭಾರತ vs ಜಿಂಬಾಬ್ವೆ ನಡುವಿನ ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ. ಈ ಪಂದ್ಯ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಈ ಹಿಂದಿನ ದಾಖಲೆಗಳನ್ನು ನೋಡಿದರೆ, ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ.
ಆದರೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಟೀಮ್ ಇಂಡಿಯಾ, ಜಿಂಬಾಬ್ವೆ ವಿರುದ್ಧ ಸೋಲುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಜಿಂಬಾಬ್ವೆ ಈಗಾಗಲೇ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಸೋಲಿಸಿದೆ. ಇದೀಗ ಟೀಮ್ ಇಂಡಿಯಾ ಕೂಡ ಸೋಲುತ್ತದೆ. ಟೀಮ್ ಇಂಡಿಯಾ ಸೋಲಲಿ ಎಂದು ನಾನು ಅಲ್ಲಾನ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಅಫ್ರಿದಿ ಹೇಳಿದ್ದಾರೆ.
ಟೀಮ್ ಇಂಡಿಯಾ ತುಂಬಾ ದುರಹಂಕಾರದಿಂದ ವರ್ತಿಸುತ್ತಿದೆ. ಆ ದುರಹಂಕಾರವನ್ನು ಕಡಿಮೆ ಮಾಡಲು ಜಿಂಬಾಬ್ವೆ ಬರುತ್ತಿದೆ. ಟೀಮ್ ಇಂಡಿಯಾ ಖಂಡಿತವಾಗಿಯೂ ಜಿಂಬಾಬ್ವೆ ವಿರುದ್ಧ ಸೋಲುತ್ತದೆ ಎಂದು ಇತ್ತೀಚಿಗೆ ಮಾಧ್ಯಮವೊಂದರಲ್ಲಿ ಮಾತನಾಡುವಾಗ ಶಾಹಿದ್ ಅಫ್ರಿದಿ ಹೇಳಿಕೆ ನೀಡಿದ್ದಾರೆ. ಇದೀಗ, ಅಫ್ರಿದಿ ಅವರ ಹೇಳಿಕೆಗಳು ಸಂಚಲನ ಸೃಷ್ಟಿಸಿದ್ದು, ಟೀಮ್ ಇಂಡಿಯಾ ಅಭಿಮಾನಿಗಳು ಖಡಕ್ ತಿರುಗೇಟು ನೀಡುತ್ತಿದ್ದಾರೆ, (ಏಜೆನ್ಸೀಸ್).